ಹೈಕೋರ್ಟಿನ ಮಾಜಿ ನ್ಯಾಯಾಧೀಶ ಜಸ್ಟೀಸ್ ಕೆ. ರಾಮಣ್ಣ ನಿಧನ

Team Udayavani, Nov 17, 2019, 9:35 PM IST

ಬೆಂಗಳೂರು: ರಾಜ್ಯ ಉಚ್ಛ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಕೆ. ರಾಮಣ್ಣ ಅವರು ಇಂದು ನಗರದ ಜಯದೇವ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೂಲತ: ಬಳ್ಳಾರಿ ಜಿಲ್ಲೆಯವರಾಗಿದ್ದ ಜಸ್ಟೀಸ್ ಕೆ. ರಾಮಣ್ಣ ಅವರು 1977ರಲ್ಲಿ ಬಳ್ಳಾರಿಯ ನ್ಯಾಯಾಲಯಗಳಲ್ಲಿ ವಕೀಲಿಕೆಯನ್ನು ಪ್ರಾರಂಭಿಸಿದ್ದರು. 1988ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೂಲಕ ಜಸ್ಟಿಸ್ ರಾಮಣ್ಣ ಅವರು ಕರ್ನಾಟಕ ನ್ಯಾಯಾಂಗ ಸೇವೆಗೆ ಸೇರ್ಪಡೆಗೊಂಡರು.

2002ರಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು ಮತ್ತು ಎರಡು ವರ್ಷಗಳ ಬಳಿಕ ಅಂದರೆ 2004ರಲ್ಲಿ ಜಸ್ಟಿಸ್ ರಾಮಣ್ಣ ಅವರು ರಾಜ್ಯ ಉಚ್ಛನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಿಸಲ್ಪಟ್ಟರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ