40 ಕೈದಿಗಳ ಕುಣಿಕೆಗೆ ಹಿಂಡಲಗಾ ಸಜ್ಜು

Team Udayavani, Dec 11, 2019, 3:06 AM IST

40kaidigala

ಬೆಳಗಾವಿ: ಗಲ್ಲು ಶಿಕ್ಷೆಗೆ ಗುರಿಯಾದ ರಾಜ್ಯದ 40 ಕೈದಿಗಳು ಈಗ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದು, ಆದೇಶ ಬಂದರೆ 36 ವರ್ಷಗಳ ಬಳಿಕ ಶಿಕ್ಷಿತರನ್ನು ನೇಣುಗಂಬಕ್ಕೆ ಏರಿಸಲು ಈ ಜೈಲು ಸರ್ವ ಸಿದ್ಧವಾಗಿದೆ. 1923ರಲ್ಲಿ ನಿರ್ಮಾಣಗೊಂಡಿರುವ ಹಿಂಡಲಗಾ ಜೈಲಿನಲ್ಲಿ ಈವರೆಗೆ 39 ಮಂದಿಯನ್ನು ಗಲ್ಲಿಗೇರಿಸಲಾಗಿದೆ. 36 ವರ್ಷಗಳ ಹಿಂದೆ ಅಂದರೆ 1983, ನ.9ರಂದು ಗೋಕಾಕ ತಾಲೂಕಿನ ಹಣಮಂತಪ್ಪ ಮರೆಯಪ್ಪ ಮಾರೀಹಾಳ ಎಂಬ ವ್ಯಕ್ತಿಯನ್ನು ನೇಣಿಗೇರಿಸಿದ್ದೇ ಕೊನೆಯ ಗಲ್ಲು ಶಿಕ್ಷೆ.

ರಾಜ್ಯದಲ್ಲಿ ಮರಣ ದಂಡನೆಗೆ ಒಳಗಾದ ಕೈದಿಗಳೆಲ್ಲರನ್ನೂ ಹಿಂಡಲಗಾಕ್ಕೆ ತಂದು ಕೂಡಿ ಹಾಕಲಾಗುತ್ತದೆ. ಈವರೆಗೆ 28 ಜನರಿದ್ದ ಈ ಸ್ಥಳದಲ್ಲಿ ಸೋಮವಾರ ಹಾವೇರಿ ಹಾಗೂ ಬಳ್ಳಾರಿಯಿಂದ ಇಬ್ಬರು ಬಂದು ಸೇರಿದ್ದಾರೆ. ವಿಕೃತ ಕಾಮಿ ಉಮೇಶ ರೆಡ್ಡಿ ಸೇರಿ ಇನ್ನೂ 40 ಜನ ಹಿಂಡಲಗಾದಲ್ಲಿದ್ದು, ಕೆಲವರ ಅರ್ಜಿಗಳು ರಾಷ್ಟ್ರಪತಿ ಭವನದಲ್ಲಿ ಕ್ಷಮಾದಾನಕ್ಕೆ ಕಾಯುತ್ತಿವೆ. ರೆಡ್ಡಿ ಸೇರಿದಂತೆ ಇನ್ನೂ ಕೆಲವರು ಮರು ಪರಿಶೀಲನಾ ಅರ್ಜಿ ಹಾಕಿದ್ದಾರೆ.

ತುಕ್ಕು ಹಿಡಿದ ನೇಣುಗಂಬಕ್ಕೆ ಪಾಲಿಶ್‌: ಒಂದೇ ಸಲ ಮೂವರನ್ನು ಗಲ್ಲಿಗೇರಿಸುವ ವ್ಯವಸ್ಥೆ ಹಿಂಡಲಗಾ ಜೈಲಿನಲ್ಲಿದೆ. ನೇಣುಗಂಬ ಸಂಪೂರ್ಣವಾಗಿ ಕಬ್ಬಿಣದ ಶೀಟ್‌ನದ್ದಾಗಿದೆ. ಪ್ಲೇಟ್‌ ಜಗ್ಗುವ ಕೈ ಸ್ಟ್ಯಾಂಡ್‌ ಕೂಡ ಕಬ್ಬಿಣದ್ದು, ಇದೆಲ್ಲವೂ ತುಕ್ಕು ಹಿಡಿದಿದ್ದವು. ಕೆಲ ದಿನಗಳಿಂದ ಅದಕ್ಕೆ ಎಣ್ಣೆ ಹಚ್ಚಿ ಪಾಲಿಶ್‌ ಮಾಡಿ ತುಕ್ಕು ತೆಗೆಯಲಾಗಿದೆ. 3 ವರ್ಷದಿಂದ ನೇಣುಗಂಬವನ್ನು ಸುಸ್ಥಿತಿಯಲ್ಲಿಡಲಾಗಿದೆ. ನೇಣುಗಂಬಕ್ಕೆ ಕಾಲ ಕಾಲಕ್ಕೆ ಎಣ್ಣೆ, ಗ್ರೀಸ್‌ ಹಚ್ಚಲಾಗುತ್ತಿದೆ. ನೀರಿನಿಂದ ತೊಳೆದು ಸ್ವತ್ಛಗೊಳಿಸಲಾಗಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.

ಮರಳಿನ ಚೀಲದ ತರಬೇತಿ: 36 ವರ್ಷದ ಹಿಂದೆ ಗಲ್ಲು ಹಾಕುವುದಕ್ಕೇ ಒಬ್ಬ ಸಿಬ್ಬಂದಿ ಯನ್ನು ನೇಮಿಸಲಾಗಿತ್ತು. ಈಗ ಕಾರ್ಯ ನಿರ್ವಾಹಕ ಜೈಲರ್‌ ಅಥವಾ ಹಿರಿಯ ಸಿಬ್ಬಂದಿ ತರಬೇತಿ ಪಡೆದು ಗಲ್ಲಿಗೇರಿಸುತ್ತಾರೆ. ಈಗಾ ಗಲೇ ಕೆಲವರಿಗೆ ತರಬೇತಿಯನ್ನೂ ನೀಡ ಲಾಗಿದೆ. ಯಾವುದೇ ಸಂದರ್ಭದಲ್ಲಿ ಬ್ಯಾಕ್‌ ಆರ್ಡರ್‌ ಬಂದರೂ ಸಜ್ಜಾಗಿದ್ದಾರೆ ಇಲ್ಲಿನ ಸಿಬ್ಬಂದಿ. ನೇಣಿಗೇರುವ ವ್ಯಕ್ತಿಯ ತೂಕದ ಪ್ರಮಾಣದಷ್ಟು ಮರಳು ಚೀಲ ಹಾಕಿ ತಯಾರಿ ಮಾಡಲಾಗುತ್ತದೆ. ಅದಕ್ಕೆ ಬೇಕಾಗುವ ಹಗ್ಗವನ್ನು ಜೈಲಿನಲ್ಲಿಯೇ ತಯಾರಿಸಲಾಗುತ್ತದೆ.

* ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

money 1

ಇಡಿ ದಾಳಿ: ಪಂಜಾಬ್ ಸಿಎಂ ಚೆನ್ನಿ ಸಂಬಂಧಿಯಿಂದ 10 ಕೋಟಿ ರೂ ನಗದು ವಶ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 656 ಅಂಕ ಇಳಿಕೆ, 18,000ಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 656 ಅಂಕ ಇಳಿಕೆ, 18,000ಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

ವಾರಾಂತ್ಯ ಕರ್ಫ್ಯೂ ವಿಷಯದಲ್ಲಿ ಬಿಜೆಪಿಯವರಿಂದ ಅರಾಜಕತೆ ಸೃಷ್ಟಿ: ರಕ್ಷಾ ರಾಮಯ್ಯ ಟೀಕೆ

ವಾರಾಂತ್ಯ ಕರ್ಫ್ಯೂ ವಿಷಯದಲ್ಲಿ ಬಿಜೆಪಿಯವರಿಂದ ಅರಾಜಕತೆ ಸೃಷ್ಟಿ: ರಕ್ಷಾ ರಾಮಯ್ಯ ಟೀಕೆ

ಶೀಘ್ರವೇ ಅಲ್ಲು ಅಭಿನಯದ Pushpa 2 ಸಿನಿಮಾದ ಚಿತ್ರೀಕರಣ; ರಶ್ಮಿಕಾ ಮಂದಣ್ಣ

ಶೀಘ್ರವೇ ಅಲ್ಲು ಅಭಿನಯದ Pushpa 2 ಸಿನಿಮಾದ ಚಿತ್ರೀಕರಣ; ರಶ್ಮಿಕಾ ಮಂದಣ್ಣ

dr-sudhakar

ನಮ್ಮ ಅಭಿಪ್ರಾಯ ಶುಕ್ರವಾರ ನೀಡುತ್ತೇವೆ : ಪ್ರತಾಪ್ ಸಿಂಹಗೆ ಸಚಿವರ ತಿರುಗೇಟು

ಪೇಪಾಲ್ ಸಮೀಕ್ಷೆ:ಆನ್ ಲೈನ್ ಮಾರಾಟದಿಂದ ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಹಿವಾಟು ಹೆಚ್ಚಳ

ಪೇಪಾಲ್ ಸಮೀಕ್ಷೆ:ಆನ್ ಲೈನ್ ಮಾರಾಟದಿಂದ ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಹಿವಾಟು ಹೆಚ್ಚಳ

1-sas

2022 ಕೊನೆಯ ಸೀಸನ್ : ದೇಹ ಕ್ಷೀಣಿಸುತ್ತಿದೆ ಎಂದ ಸಾನಿಯಾ ಮಿರ್ಜಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಾರಾಂತ್ಯ ಕರ್ಫ್ಯೂ ವಿಷಯದಲ್ಲಿ ಬಿಜೆಪಿಯವರಿಂದ ಅರಾಜಕತೆ ಸೃಷ್ಟಿ: ರಕ್ಷಾ ರಾಮಯ್ಯ ಟೀಕೆ

ವಾರಾಂತ್ಯ ಕರ್ಫ್ಯೂ ವಿಷಯದಲ್ಲಿ ಬಿಜೆಪಿಯವರಿಂದ ಅರಾಜಕತೆ ಸೃಷ್ಟಿ: ರಕ್ಷಾ ರಾಮಯ್ಯ ಟೀಕೆ

araga

ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಅಧಿಕಾರಿಗಳ ವಿರುದ್ಧ ಕ್ರಮ: ಆರಗ ಜ್ಞಾನೇಂದ್ರ ಎಚ್ಚರಿಕೆ

dr-sudhakar

ನಮ್ಮ ಅಭಿಪ್ರಾಯ ಶುಕ್ರವಾರ ನೀಡುತ್ತೇವೆ : ಪ್ರತಾಪ್ ಸಿಂಹಗೆ ಸಚಿವರ ತಿರುಗೇಟು

SUNIL-KUMAR

ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇರಳದ್ದೆಂಬ ಕಾರಣಕ್ಕೆ ತಿರಸ್ಕರಿಸಿಲ್ಲ: ಸಚಿವ ಸುನೀಲ್‍

dr-ashwath

ರಾಜ್ಯದಲ್ಲಿ ಕೋವಿಡ್ ಸ್ಫೋಟದ ಆತಂಕ: ಅಶ್ವಥ್ ನಾರಾಯಣ

MUST WATCH

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

ಹೊಸ ಸೇರ್ಪಡೆ

money 1

ಇಡಿ ದಾಳಿ: ಪಂಜಾಬ್ ಸಿಎಂ ಚೆನ್ನಿ ಸಂಬಂಧಿಯಿಂದ 10 ಕೋಟಿ ರೂ ನಗದು ವಶ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 656 ಅಂಕ ಇಳಿಕೆ, 18,000ಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 656 ಅಂಕ ಇಳಿಕೆ, 18,000ಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

ವಾರಾಂತ್ಯ ಕರ್ಫ್ಯೂ ವಿಷಯದಲ್ಲಿ ಬಿಜೆಪಿಯವರಿಂದ ಅರಾಜಕತೆ ಸೃಷ್ಟಿ: ರಕ್ಷಾ ರಾಮಯ್ಯ ಟೀಕೆ

ವಾರಾಂತ್ಯ ಕರ್ಫ್ಯೂ ವಿಷಯದಲ್ಲಿ ಬಿಜೆಪಿಯವರಿಂದ ಅರಾಜಕತೆ ಸೃಷ್ಟಿ: ರಕ್ಷಾ ರಾಮಯ್ಯ ಟೀಕೆ

araga

ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಅಧಿಕಾರಿಗಳ ವಿರುದ್ಧ ಕ್ರಮ: ಆರಗ ಜ್ಞಾನೇಂದ್ರ ಎಚ್ಚರಿಕೆ

ಶೀಘ್ರವೇ ಅಲ್ಲು ಅಭಿನಯದ Pushpa 2 ಸಿನಿಮಾದ ಚಿತ್ರೀಕರಣ; ರಶ್ಮಿಕಾ ಮಂದಣ್ಣ

ಶೀಘ್ರವೇ ಅಲ್ಲು ಅಭಿನಯದ Pushpa 2 ಸಿನಿಮಾದ ಚಿತ್ರೀಕರಣ; ರಶ್ಮಿಕಾ ಮಂದಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.