ಹುಮನಾಬಾದ್: ಕಸಾಯಿ ಖಾನೆಗೆ ದಾಳಿ; 16 ಜಾನುವಾರುಗಳ ರಕ್ಷಣೆ
Team Udayavani, Feb 5, 2023, 10:53 AM IST
ಹುಮನಾಬಾದ: ಸರ್ಕಾರ ಗೋ ರಕ್ಷಣೆ ಕಾಯ್ದೆ ಜಾರಿಗೆ ತಂದರು ಕೂಡ ಪಟ್ಟಣದ ಶಿವಪುರ ಬಡಾವಣೆಯ ಕಸಾಯಿ ಖಾನೆಯಲ್ಲಿ ದನಗಳ ಕತ್ತರಿಸುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸರು ಭಾನುವಾರ ಬೆಳಗಿನ ಜಾವ ದಾಳಿ ನಡೆಸಿದ್ದಾರೆ.
ಪೋಲಿಸ್ ದಾಳಿ ಸಂದರ್ಭದಲ್ಲಿ ಕಸಾಯಿ ಖಾನೆಯಲ್ಲಿ ಹತ್ತಾರು ಜನರು ದನಗಳ ಕತ್ತರಿಸುವ ಕೆಲಸ ನಡೆಸಿದ್ದರು ಎನ್ನಲಾಗಿದೆ. ದಾಳಿ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಜನರು ಪರಾರಿಯಾಗಿದ್ದಾರೆ. ಮೊದಲಿಗೆ 112 ಸಹಾಯವಾಣಿಗೆ ಕರೆ ಮಾಡಿ ಜನರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ನಂತರ ಪಿಎಸ್ಐ ಮಂಜನಗೌಡ ಪಾಟೀಲ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೆ ಸ್ಥಳಕ್ಕೆ ಪಶು ವೈದ್ಯಧಿಕಾರಿ ಡಾ| ಗೋವಿಂದ್, ಡಾ| ಶಾಂತಕುಮಾರ ಸಿದ್ದೇಶ್ವರ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ವಿವಿಧ ಕಾನೂನು ಪ್ರಕ್ರಿಯೆಗಳು ಪೂರ್ಣಗೊಳಿಸಿದರು.
ಈ ಸಂದರ್ಭದಲ್ಲಿ ಆಕಳು, ಎತ್ತು, ಎಮ್ಮೆ ಸೇರಿದಂತೆ ಒಟ್ಟಾರೆ 16 ಜಾನುವಾರುಗಳ ರಕ್ಷಣೆ ಮಾಡಲಾಗಿದ್ದು, ಜಾನುವಾರಗಳನ್ನು ಭಾಲ್ಕಿ ತಾಲೂಕಿನ ಮೈಲಾರ ಗೋ ಶಾಲೆಗೆ ಕಳುಹಿಸಲಾಗುತ್ತದೆ.
ಸ್ಥಳದಲ್ಲಿ ಆರು ಜಾನುವಾರುಗಳು ಕತ್ತರಿಸಿದ ಮಾಂಸ ಚರ್ಮ ಕೊಂಬು ಲಭ್ಯವಾಗಿದೆ ಎಂದು ಡಾ| ಗೋವಿಂದ್ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಖದ ಅಂದ ಕೆಡಿಸುವ “ಡಾರ್ಕ್ ಸರ್ಕಲ್ಸ್” ನಿವಾರಣೆಗೆ ಈ ಮನೆಮದ್ದು ಬಳಸಿ…
ರಾಹುಲ್ ಅನರ್ಹ; ಖರ್ಗೆ ಸೇರಿ ವಿಪಕ್ಷ ನಾಯಕರಿಂದ ವ್ಯಾಪಕ ಆಕ್ರೋಶ
ಭಾರತೀಯ ರಕ್ಷಣಾ ಸಚಿವಾಲಯದೊಂದಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮಹತ್ವದ ಒಪ್ಪಂದ
ON CAMERA: ಮನೆ ಮೇಲೆ ಬಿದ್ದ ಖಾಸಗಿ ಲಘು ವಿಮಾನ; ಇಬ್ಬರು ಮಕ್ಕಳು ಪವಾಡಸದೃಶ ಪಾರು!
ಝಾಕಿರ್ ನಾಯ್ಕನ ವಿಚಾರ ಒಮಾನ್ ನೊಂದಿಗೆ ಹಂಚಿಕೊಂಡಿದ್ದೇವೆ :ಅರಿಂದಮ್ ಬಾಗ್ಚಿ