ಬಿಎಸ್‌ವೈ ಸರ್ಕಾರದ ಬಗ್ಗೆ ನನಗೆ ಸಾಫ್ಟ್‌ ಕಾರ್ನರ್‌ ಇಲ್ಲ: ದೇವೇಗೌಡ

Team Udayavani, Feb 17, 2020, 3:07 AM IST

bsy-sarka

ಧಾರವಾಡ: “ನನಗೇನು ಹುಚ್ಚು ಹಿಡಿದಿದೆಯಾ?. ನಾನು ಬಿಎಸ್‌ವೈ ಸರ್ಕಾರದ ಬಗ್ಗೆ ಸಾಫ್ಟ್‌ ಕಾರ್ನರ್‌ ಹೊಂದಿಲ್ಲ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಪಕ್ಷ ತಳಮಟ್ಟದಲ್ಲಿ ಬಲಿಷ್ಠವಾಗಿದೆ. ಆದರೆ, ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಬೇಕಿದೆ. ಈ ಭಾಗದಲ್ಲಿ ಪಕ್ಷ ಸಂಘಟನೆಗೆ ಇನ್ನಷ್ಟು ಒತ್ತು ನೀಡಿ, ಪಕ್ಷದ ತಳಮಟ್ಟದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಲಾಗುವುದು. ಸವದತ್ತಿಯ ಗುಡ್ಡಕ್ಕೆ ತೆರಳಿ ಯಲ್ಲಮ್ಮ ದೇವಿಯ ದರ್ಶನ ಪಡೆದಿದ್ದೇನೆ. ಈ ಭಾಗದಲ್ಲಿ ಬರೀ ಭೇಟಿ ಮಾಡದೇ ವಾಸ್ತವ್ಯ ಮಾಡಿ, ಸ್ಥಳೀಯ ಮಾಹಿತಿ ಪಡೆದು, ಪಕ್ಷದ ಸಂಘಟನೆಗೆ ಆದ್ಯತೆ ನೀಡಲಾಗುವುದು ಎಂದರು.

ಫೆ.19ಕ್ಕೆ ಬೆಳಗಾವಿಗೆ ಭೇಟಿ: ಎಚ್‌ಡಿಕೆ ಸಿಎಂ ಆಗುವಾಗ ರಚನೆಯಾಗಿದ್ದ ತೃತೀಯ ರಂಗದ ಬಗ್ಗೆ ನಾನೇನು ಈಗ ಕವಡೆ ಹಾಕಿ ಹೇಳಲಾ? ಫೆ.19ಕ್ಕೆ ಬೆಳಗಾವಿಗೆ ಬರಲಿದ್ದೇನೆ. ಆಗ ಪಕ್ಷ ಸಂಘಟನೆ ಬಗ್ಗೆ ಮುಖಂಡರೊಂದಿಗೆ ಚರ್ಚೆ ಮಾಡುತ್ತೇನೆ. ಜಾತಿ, ಧರ್ಮದ ಆಧಾರದಲ್ಲಿ ವಿಂಗಡಣೆ ಮಾಡಿ ಗೆಲ್ಲಲು ಆಗದು ಎಂಬುದನ್ನು ದೆಹಲಿ ಚುನಾವಣೆ ಫಲಿತಾಂಶವೇ ತೋರಿಸಿದೆ ಎಂದರು.

ಆರ್ಥಿಕ ಕುಸಿತದ ಬಗ್ಗೆ ಕಳವಳ: ಶ್ರೀಲಂಕಾ, ಬಾಂಗ್ಲಾ ದೇಶಕ್ಕಿಂತ ಭಾರತದ ಆರ್ಥಿಕ ಸ್ಥಿತಿ ಕುಸಿದಿದೆ. ಕೃಷಿ, ಆಟೋಮೊಬೈಲ್‌, ಸಣ್ಣ ಕೈಗಾರಿಕೆ ಹಾಗೂ ಐಟಿ ಕ್ಷೇತ್ರ ಸಂಪೂರ್ಣ ಬಿದ್ದು ಹೋಗಿದೆ. ಇನ್ಫೋಸಿಸ್‌ನಲ್ಲಿ 10 ಸಾವಿರ ಉದ್ಯೋಗ ಕಡಿತವಾಗಿದೆ. ಬಿಎಸ್ಸೆನ್ನೆಲ್‌ನ ಖಾಸಗಿಕರಣ ಆಗಿದ್ದು, ಶೇ.10 ಮಾತ್ರವೇ ಉಳಿದಿದೆ. ಇಂತಹ ಸಂದರ್ಭದಲ್ಲಿ 2014ರಲ್ಲಿ ಕೊಟ್ಟ ಭ್ರಷ್ಟಾಚಾರ ಮುಕ್ತ ಸರ್ಕಾರದ ಭರವಸೆಯನ್ನು ಈಗ ತಾವೇ ಒಪ್ಪದ ಸ್ಥಿತಿಗೆ ಬಿಜೆಪಿ ಬಂದಿದೆ. ಈ ಬಗ್ಗೆ ಮೋದಿ ಸಹ ಮಾತನಾಡುವುದು ಕಷ್ಟವಾಗಿದೆ ಎಂದರು. ಇನ್ನು ನೆರೆ ಪರಿಹಾರದ ಅನುದಾನದಲ್ಲೂ ರಾಜ್ಯದ ನಿರೀಕ್ಷೆಯನ್ನು ಮೋದಿ ಸರ್ಕಾರ ಹುಸಿ ಮಾಡಿದೆ ಎಂದರು.

ದೇಶದ್ರೋಹ ಪ್ರಕರಣದಡಿ ಬಂಧಿತರಾಗಿದ್ದ ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನ ವಿದ್ಯಾರ್ಥಿಗಳ ಪರ ವಕೀಲರು ವಾದ ಮಾಡದಂತೆ ನಿರ್ಣಯ ಮಾಡಿದ್ದು, ಹೀಗಿರುವಾಗ ಹೇಗೆ ಬಿಡುಗಡೆ ಆಗುತ್ತಾ ರೋ ಗೊತ್ತಿಲ್ಲ. ಬಿಜೆಪಿ ಸರ್ಕಾರವೇ ರಾಜ್ಯದಲ್ಲಿ ಇದ್ದು, ಮಂತ್ರಿಗಳೂ ಅವರೇ ಇದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು. ನಾನು ವಿಧಾನಸಭೆ, ಲೋಕಸಭೆಯಲ್ಲೂ ಇಲ್ಲ. ಹೀಗಾಗಿ, ಮಾಧ್ಯಮದ ಮುಂದಷ್ಟೇ ಹೇಳಬೇಕಿದೆ.
-ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ

ಟಾಪ್ ನ್ಯೂಸ್

ಕೆಲವು ಕಠಿಣ ನಿಯಮಗಳನ್ನು ಮತ್ತೆ ಜಾರಿ ಮಾಡಬೇಕಾಗಬಹುದು: ಗೌರವ್ ಗುಪ್ತಾ

ಕೆಲವು ಕಠಿಣ ನಿಯಮಗಳನ್ನು ಮತ್ತೆ ಜಾರಿ ಮಾಡಬೇಕಾಗಬಹುದು: ಗೌರವ್ ಗುಪ್ತಾ

ಎರಡು ಪಂದ್ಯಕ್ಕೆ ನಾಲ್ಕು ಕ್ಯಾಪ್ಟನ್ಸ್: 132 ವರ್ಷಗಳ ಬಳಿಕ ಹೊಸ ದಾಖಲೆ

ಎರಡು ಪಂದ್ಯಕ್ಕೆ ನಾಲ್ಕು ಕ್ಯಾಪ್ಟನ್ಸ್: 132 ವರ್ಷಗಳ ಬಳಿಕ ಹೊಸ ದಾಖಲೆ

1-fsfd

ಒಮಿಕ್ರಾನ್ ವಿಚಾರದಲ್ಲೂ ಲಂಚ ಹೊಡೆಯುವುದನ್ನು ಸರಕಾರ ಬಿಡಬೇಕು : ಡಿಕೆಶಿ

5theft

ಮಂಗಳೂರು: ಮಾರಕಾಯುಧ ಝಳಪಿಸಿ 3 ಗೋವುಗಳ ಕಳ್ಳತನ

ಪಾಕಿಸ್ತಾನಕ್ಕೂ, ದೆಹಲಿ ವಾಯುಗುಣಮಟ್ಟ ಕಲುಷಿತಗೊಳ್ಳಲು ಏನು ಸಂಬಂಧ: ಸುಪ್ರೀಂಕೋರ್ಟ್

ಪಾಕಿಸ್ತಾನಕ್ಕೂ, ದೆಹಲಿ ವಾಯುಗುಣಮಟ್ಟ ಕಲುಷಿತಗೊಳ್ಳಲು ಏನು ಸಂಬಂಧ: ಸುಪ್ರೀಂಕೋರ್ಟ್

h vishwanath

7ನೇ ತರಗತಿವರೆಗಿನ ಮಕ್ಕಳಿಗೆ ಆನ್ ಲೈನ್ ಪಾಠ ಮಾಡಿ: ಎಚ್.ವಿಶ್ವನಾಥ್

ಕಾಂಗ್ರೆಸ್ ಸೇರುವ ಜನರು ಎಷ್ಟು ಸಮರ್ಥರು?: ಡಿಕೆಶಿ ಗೆ ಬಿಜೆಪಿ ಪ್ರಶ್ನೆ

ಕಾಂಗ್ರೆಸ್ ಸೇರುವ ಜನರು ಎಷ್ಟು ಸಮರ್ಥರು?: ಡಿಕೆಶಿ ಗೆ ಬಿಜೆಪಿ ಪ್ರಶ್ನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಲವು ಕಠಿಣ ನಿಯಮಗಳನ್ನು ಮತ್ತೆ ಜಾರಿ ಮಾಡಬೇಕಾಗಬಹುದು: ಗೌರವ್ ಗುಪ್ತಾ

ಕೆಲವು ಕಠಿಣ ನಿಯಮಗಳನ್ನು ಮತ್ತೆ ಜಾರಿ ಮಾಡಬೇಕಾಗಬಹುದು: ಗೌರವ್ ಗುಪ್ತಾ

1-fsfd

ಒಮಿಕ್ರಾನ್ ವಿಚಾರದಲ್ಲೂ ಲಂಚ ಹೊಡೆಯುವುದನ್ನು ಸರಕಾರ ಬಿಡಬೇಕು : ಡಿಕೆಶಿ

ಕಾಂಗ್ರೆಸ್ ಸೇರುವ ಜನರು ಎಷ್ಟು ಸಮರ್ಥರು?: ಡಿಕೆಶಿ ಗೆ ಬಿಜೆಪಿ ಪ್ರಶ್ನೆ

ಕಾಂಗ್ರೆಸ್ ಸೇರುವ ಜನರು ಎಷ್ಟು ಸಮರ್ಥರು?: ಡಿಕೆಶಿ ಗೆ ಬಿಜೆಪಿ ಪ್ರಶ್ನೆ

siddaramaiah vs kumaraswamy

‘ರಾಜಕೀಯ ರಕ್ಕಸತನʼಕ್ಕೆ ಅವರು ರಾಜಾಧಿರಾಜ: ಸಿದ್ದರಾಮಯ್ಯ ವಿರುದ್ಧ ಎಚ್ ಡಿಕೆ ಕಿಡಿ

ಸಿದ್ದು v/s ದೊಡ್ಡ ಗೌಡರು; ಪ್ರಧಾನಿ ಜತೆಗಿನ ಭೇಟಿ ವಿಚಾರ ವಾಗ್ವಾದ

ಸಿದ್ದು v/s ದೊಡ್ಡ ಗೌಡರು; ಪ್ರಧಾನಿ ಜತೆಗಿನ ಭೇಟಿ ವಿಚಾರ ವಾಗ್ವಾದ

MUST WATCH

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

ಹೊಸ ಸೇರ್ಪಡೆ

ಕೆಲವು ಕಠಿಣ ನಿಯಮಗಳನ್ನು ಮತ್ತೆ ಜಾರಿ ಮಾಡಬೇಕಾಗಬಹುದು: ಗೌರವ್ ಗುಪ್ತಾ

ಕೆಲವು ಕಠಿಣ ನಿಯಮಗಳನ್ನು ಮತ್ತೆ ಜಾರಿ ಮಾಡಬೇಕಾಗಬಹುದು: ಗೌರವ್ ಗುಪ್ತಾ

ಎರಡು ಪಂದ್ಯಕ್ಕೆ ನಾಲ್ಕು ಕ್ಯಾಪ್ಟನ್ಸ್: 132 ವರ್ಷಗಳ ಬಳಿಕ ಹೊಸ ದಾಖಲೆ

ಎರಡು ಪಂದ್ಯಕ್ಕೆ ನಾಲ್ಕು ಕ್ಯಾಪ್ಟನ್ಸ್: 132 ವರ್ಷಗಳ ಬಳಿಕ ಹೊಸ ದಾಖಲೆ

1-fsfd

ಒಮಿಕ್ರಾನ್ ವಿಚಾರದಲ್ಲೂ ಲಂಚ ಹೊಡೆಯುವುದನ್ನು ಸರಕಾರ ಬಿಡಬೇಕು : ಡಿಕೆಶಿ

5theft

ಮಂಗಳೂರು: ಮಾರಕಾಯುಧ ಝಳಪಿಸಿ 3 ಗೋವುಗಳ ಕಳ್ಳತನ

ಪಾಕಿಸ್ತಾನಕ್ಕೂ, ದೆಹಲಿ ವಾಯುಗುಣಮಟ್ಟ ಕಲುಷಿತಗೊಳ್ಳಲು ಏನು ಸಂಬಂಧ: ಸುಪ್ರೀಂಕೋರ್ಟ್

ಪಾಕಿಸ್ತಾನಕ್ಕೂ, ದೆಹಲಿ ವಾಯುಗುಣಮಟ್ಟ ಕಲುಷಿತಗೊಳ್ಳಲು ಏನು ಸಂಬಂಧ: ಸುಪ್ರೀಂಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.