ಐ ಲವ್ ಬಾಬರ್ ಅಜಂ ಕವರ್ಡ್ರೈವ್: ರೋಡ್ರಿಗಸ್
Team Udayavani, Apr 13, 2020, 6:49 AM IST
ಹೊಸದಿಲ್ಲಿ: ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಕ್ರೀಡಾಲೋಕ ಸ್ತಬ್ಧಗೊಂಡಿದ್ದು, ಬಹುತೇಕ ಕ್ರೀಡಾಪಟುಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಳೆಯ ನೆನಪುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಅದರಂತೆ ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಅವರು ಪಾಕಿಸ್ಥಾನದ ಬಾಬರ್ ಅಜಂ ಅವರ ಕವರ್ ಡ್ರೈವ್ ನನಗೆ ತುಂಬ ಇಷ್ಟ ಎಂದು ಹೇಳಿದ್ದಾರೆ.
ರಿಧಿಮಾ ಪಾಠಕ್ ಅವರೊಂದಿಗಿನ ಇನ್ಸ್ಟಾಗ್ರಾಮ್ ಲೈವ್ ಚಾಟ್ ವೇಳೆ ಈ ವಿಚಾರವನ್ನು ಹೇಳಿದ ರೋಡ್ರಿಗಸ್ ಕ್ರಿಕೆಟ್ನಲ್ಲಿ ನನಗೆ ಕವರ್ ಡ್ರೈವ್ ಅಚ್ಚುಮೆಚ್ಚಿನ ಹೊಡೆತವಾಗಿದೆ. “ಐ ಲವ್ ಬಾಬರ್ ಅಜಂ ಕವರ್ ಡ್ರೈವ್’ ಎಂದಿದ್ದಾರೆ. ಬಾಬರ್ ಅಜಂ ಅವರು ಉತ್ತಮವಾಗಿ ಕವರ್ ಡ್ರೈವ್ ಹೊಡೆತವನ್ನು ಬಾರಿಸುತ್ತಾರೆ. ಆದ್ದರಿಂದ ನಾನು ಅವರ ದೊಡ್ಡ ಅಭಿಮಾನಿ. ನನಗೂ ಅವರಂತೆ ಕವರ್ ಡ್ರೈವ್ ಬ್ಯಾಟಿಂಗ್ ನಡೆಸಬೇಕು ಎಂಬ ಆಸೆ ಇದೆ ಎಂದು ರೋಡ್ರಿಗಸ್ ಅಭಿಪ್ರಾಯಪಟ್ಟಿದ್ದಾರೆ.