ನಾನು ಎಂಬ ವಿಲನ್‌ ಇದ್ದರೆ…


Team Udayavani, Jun 30, 2020, 4:45 AM IST

nanu-villain

ನನಗೆ ಎಲ್ಲಾ ಗೊತ್ತು. ನಿನಗೇನು ಮಹಾ ಗೊತ್ತಿದೆ? ನಾನು ಎಲ್ಲವನ್ನೂ ತಿಳಿದು ಕೊಂಡಿದ್ದೀನಿ. ನೀನೇನು ತಿಳಿದಿದ್ದೀಯಾ..? ಹೀಗಂತ ಹೇಳ್ಳೋರು ಇದ್ದಾರೆ. ಅದನ್ನು ವರ್ತನೆಯಲ್ಲಿ ತೋರಿಸಿಕೊಳ್ಳೋರೂ ಇದ್ದಾರೆ. ನನಗೆ ಎಲ್ಲಾ ಗೊತ್ತು  ಎಂಬ ವಿಚಾರ ಒಂದು ಸಲ ಮನಸ್ಸಿಗೆ ಹೊಕ್ಕರೆ ಸಾಕು; ಆನಂತರದಲ್ಲಿ ತಲೆಮೇಲೆ ಕೊಂಬು ಬಂದುಬಿಡುತ್ತದೆ. ಇಷ್ಟಾದಮೇಲೆ ಆ ಜನರನ್ನು ಕಂಟ್ರೋಲ್‌ ಮಾಡುವುದು ಕಷ್ಟ. ಏಕೆಂದರೆ, ಜಗತ್ತಿನಲ್ಲಿ ನನಗೆ ಮಾತ್ರ ಎಲ್ಲವೂ ಗೊತ್ತು.  ಉಳಿದವರು ನನಗೆ ಲೆಕ್ಕಕ್ಕೇ ಇಲ್ಲ ಎಂಬ ಅಹಮಿಕೆಯಲ್ಲಿ ಅವರು ಬೀಗುತ್ತಿರುತ್ತಾರೆ.

ನೆನಪಿರಲಿ: ನಾನು ಅನ್ನೋದು ಇದ್ದರೆ ತಲೆ ನೋವು ಜಾಸ್ತಿ. ನನಗೆ ವಿಪರೀತ ಗೊತ್ತಿದೆ. ಆದರೆ, ನನ್ನ ಪ್ರತಿಭೆ ಯನ್ನು, ನನ್ನ ಐಡಿಯಾಗಳನ್ನು ನನ್ನ  ಜ್ಞಾನವನ್ನು ಜೊತೆಯಲ್ಲಿ ಇರುವವರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಫೀಲ್‌ ಜೊತೆಯಾಗುವುದು- ನಾನು ಎಂಬ ಅಹಂ ಜೊತೆಗೆ ಇದ್ದಾಗಲೇ. ವಾಸ್ತವವಾಗಿ, ನನಗೆ ಎಲ್ಲಾ ಗೊತ್ತು ಅನ್ನೋ ಮನೋಸ್ಥಿತಿ ಹೊಂದಿರುವವರಿಗೆ,  ಹೊರಗಿನ ಸ್ಪರ್ಧೆ ಎದುರಿಸುವಷ್ಟು ಜ್ಞಾನ ಇರೋದಿಲ್ಲ. ಅವರು ಬಾವಿ ಕಪ್ಪೆಯಂತೆ ತಮ್ಮ ಮೂಗಿನ ನೇರಕ್ಕೆ ಮಾತ್ರ ಯೋಚಿಸುತ್ತಾರೆ.

ಹಾಗಾಗಿ, ಈ ಕ್ಷಣದ ಸಂದರ್ಭಗಳಿಗೆ ತಕ್ಕಂತೆ ಅಪ್‌ಡೇಟ್‌ ಆಗಿರೋಲ್ಲ. ಇಂಥವರ ಸೈಕಾಲಜಿಯೇ  ವಿಚಿತ್ರ. ಯಾರನ್ನೂ ನಂಬೊಲ್ಲ. ನಂಬಿದವರನ್ನು ಹೆಚ್ಚು ದಿನ ಹತ್ತಿರ ಇಟ್ಟುಕೊಳ್ಳಲ್ಲ. ಇವರು ಔಟ್‌ ಡೇಟೆಡ್‌ ಅಂತ ತಿಳಿಯುತ್ತಲೇ, ಜನ ಇವರನ್ನು ದೂರ ಇಡಲು ಶುರುಮಾಡುತ್ತಾರೆ. ಅದು ಗೊತ್ತಾಗುತ್ತಿದ್ದಂ ತೆಯೇ, ಈ ಜನ ವಿಚಿತ್ರವಾಗಿ ವರ್ತಿಸುತ್ತಾ ಕುಖ್ಯಾತಿಗೆ/ ಅಪಹಾಸ್ಯಕ್ಕೆ  ಈಡಾಗುತ್ತಾರೆ. ನಾನು ಅನ್ನೋದನ್ನು ಮನಸ್ಸಿಂದ ತೆಗೆಯಬೇಕೆಂದರೆ, ಮನಸ್ಸನ್ನು ಹೊಸತನಕ್ಕೆ ತೆರೆದುಕೊಳ್ಳಬೇಕು. ಯಾರಾದರೂ ಒಳ್ಳೆ ಕೆಲಸ ಮಾಡಿದರೆ, ಬೆನ್ನು ತಟ್ಟುವ  ಮನೋಭಾವ ರೂಢಿಸಿಕೊಳ್ಳಬೇಕು.

ಯಾರಾದರೂ ಸಲಹೆ ಕೊಟ್ಟರೆ, ಅವರ ಮಾತನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳುವ, ಅದರ ಸರಿ- ತಪ್ಪುಗಳನ್ನು ಲೆಕ್ಕ ಹಾಕುವ ವ್ಯವಧಾನ ಇರಬೇಕು. ಹೀಗೆ, ನಮ್ಮನ್ನು ನಾವೇ ಬದಲಿಸಿಕೊಳ್ಳಲು  ಮುಂದಾದಾಗ “ನಾನು’ ಎಂಬ ಅಹಂ ಇಂಚಿಂಚಾಗಿ ನಮ್ಮಿಂದ ಕಳಚಿ ಕೊಳ್ಳುತ್ತದೆ. ಆನಂತರ ನಾವು ಸಮಾಜವನ್ನು, ಅಲ್ಲಿನ ಜನರನ್ನು ನೋಡುವ ಮನೋಭಾವವೇ ಬದಲಾಗುತ್ತದೆ. ಪ್ರತಿಯೊಬ್ಬರಿಂದಲೂ ಹೊಸದನ್ನು ಕಲಿಯುವ  ಮನಸ್ಸಾಗುತ್ತದೆ. ನಿಮ್ಮ ಮನಸ್ಸಲ್ಲೂ ನಾನು ಇದೆಯಾ ನೋಡಿ…

ಟಾಪ್ ನ್ಯೂಸ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

10-uv-fusion

Theater: ಅಳಿವು ಉಳಿವಿನ ದವಡೆಯಲ್ಲಿ ರಂಗಭೂಮಿ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

9-fusion

Friendship: ಕೈಜಾರದಿರಲಿ ಗೆಳೆತನವೆಂಬ ಆಪ್ತ ನಿಧಿ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.