ಸರ್ವಾಧಿಕಾರಿಯ ಮುಂದೆ


Team Udayavani, May 26, 2020, 5:09 AM IST

sarvadhi-munde

ಲೆನಿನ್‌ ನಂತರ ಸೋವಿಯೆಟ್‌ ರಷ್ಯಾದ ಚುಕ್ಕಾಣಿ ಹಿಡಿದವನು ಜೋಸೆಫ್ ಸ್ಟಾಲಿನ್‌. ಈತನ ಕಾಲದಲ್ಲಿ ರಷ್ಯಾ ಸಂಪೂರ್ಣ ಸರ್ವಾಧಿಕಾರದ ಕಬಂಧಬಾಹುಗಳೊಳಗೆ ಸೆರೆಯಾಯಿತು. ಸ್ಟಾಲಿನ್‌ನ ರಾಜಕೀಯ ನಡೆಗಳನ್ನು  ವಿರೋಧಿಸುವವರೆಲ್ಲರೂ ದೇಶದ್ರೋಹಿಗಳ ಪಟ್ಟಿಯಲ್ಲಿ ಸೇರ್ಪಡೆಯಾದರು. ಸ್ಟಾಲಿನ್‌ ತನ್ನ ನಂಬಿಕೆಗೆ ಅರ್ಹರಾದವರನ್ನಷ್ಟೇ ಆಯಕಟ್ಟಿನ ಪ್ರಮುಖ ಹುದ್ದೆಗಳಿಗೆ ನೇಮಿಸುತ್ತಿದ್ದ. ಯಾವುದೇ ವ್ಯಕ್ತಿ ತನ್ನ ವಿಶ್ವಾಸಕ್ಕೆ ಅರ್ಹನಲ್ಲವೆಂಬ  ಸಣ್ಣ ಸುಳುಹು ಸಿಕ್ಕರೂ ಸಾಕು ಅವರನ್ನು ಪರಿಹರಿಸಿಬಿಡುತ್ತಿದ್ದ.

ಸ್ಟಾಲಿನ್‌ನ ಕಾಲದಲ್ಲಿ ಸೈಬೀರಿಯಾದ ಗುಲಾಗ್‌ ಎಂಬ ತೆರೆದ ಸೆರೆಮನೆಗಳು ಕುಪ್ರಸಿದಟಛಿವಾದವು. ಅಲ್ಲಿಗೆ ಕಳಿಸಲ್ಪಟ್ಟವರು ಯಾರೊಬ್ಬರೂ ವಾಪಸ್‌ ಬರಲಿಲ್ಲ. ಹಾಗೆ  ಆತ ಸುಮಾರು 5 ಕೋಟಿ ರಷ್ಯನ್ನರನ್ನು ಪರಿಹರಿಸಿದ ಎಂಬ ಐತಿಹ್ಯವಿದೆ. ಸ್ಟಾಲಿನ್‌ ತೀರಿಕೊಂಡಾಗ ಆತನ ಕ್ಯಾಬಿನೆಟ್‌ ಸಚಿವರ ಮಧ್ಯೆ ಬಿರುಸಿನ ಚಟುವಟಿಕೆಗಳಾದವು. ಖಾಲಿ ಬಿದ್ದ ಹುದ್ದೆಯನ್ನು ಅಲಂಕರಿಸುವವರು ಯಾರು  ಎಂಬ ವಿಷಯದಲ್ಲಿ ಒಂದು ಶೀತಲ ಸಮರವೇ ನಡೆದುಹೋಯಿತು ಎನ್ನಬಹುದು. ಲ್ಯಾವೆಂಟಿ ಬೆರಿಯ, ಝುಕೋವ್‌, ಮೊಲೊತೊವ್‌, ಮೆಲೆಂಕೊವ್‌ ಮುಂತಾದವರ ಮಧ್ಯೆ ಅಧಿಕಾರದ ಹಗ್ಗಜಗ್ಗಾಟ ನಡೆಯಿತು.

ಕೊನೆಗೆ  ಒಬ್ಬರನ್ನೊಬ್ಬರ ಮೇಲೆ ಹರಿಹಾಯಲು ಬಿಟ್ಟು ಸಕಲ ತಂತ್ರಗಳನ್ನೂ ಪ್ರಯೋಗಿಸಿ ನಿಕಿಟ ಕ್ರುಶ್ಚೇವ್‌ ಸೋವಿಯೆಟ್‌ ಒಕ್ಕೂಟದ ಅಧಿಕಾರದಂಡ ಹಿಡಿದರು. ಒಕ್ಕೂಟದ ಅಧ್ಯಕ್ಷನಾದ ಮೇಲೆ ಕ್ರುಶ್ಚೇವ್‌, ಸ್ಟಾಲಿನ್‌ ಅದುವರೆಗೆ ಅನುಸರಿಸಿದ  ಸರ್ವಾಧಿಕಾರಿ ಧೋರಣೆಯ ಆಡಳಿತವನ್ನು ಕೈಬಿಟ್ಟು ಸುಧಾರಣಾವಾದಿ ಹಾದಿಯನ್ನು ಹಿಡಿದರು. ವರ್ಷಗಳು ಉರುಳಿದಂತೆ ಅವರು ಸ್ಟಾಲಿನ್‌ ಆಡಳಿತವನ್ನು ತುಂಬ ಮುಕ್ತವಾಗಿಯೇ ಟೀಕಿಸತೊಡಗಿದರು. ಸ್ಟಾಲಿನ್‌ನ  ಎಷ್ಟೋ ನಡೆಗಳು ತಪ್ಪಾಗಿದ್ದವು. ಅದರಿಂದ ರಷ್ಯಾದ ಅಭಿವೃದಿಟಛಿ ಕುಂಠಿತವಾಯಿತು ಎಂಬುದನ್ನು ನೇರಾನೇರ ಹೇಳಿಬಿಡುತ್ತಿದ್ದರು ಕ್ರುಶ್ಚೇವ್‌.

ಒಮ್ಮೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತಾಡುತ್ತಿದ್ದಾಗ ಕ್ರುಶ್ಚೇವ್‌ರ ಮಾತಿನ  ಓಘ ಎಂದಿನಂತೆ ಸ್ಟಾಲಿನ್‌ನ ಟೀಕೆಯತ್ತ ಹರಿಯಿತು. ಸ್ಟಾಲಿನ್‌ನ ಹಲವು ಕ್ರಮಗಳನ್ನು ಕ್ರುಶ್ಚೇವ್‌ ಖಂಡಿಸುತ್ತಿದ್ದಾಗ ಸಭೆಯ ಮಧ್ಯದಿಂದ ಒಂದು ಧ್ವನಿ “ಅಲ್ರೀ, ನೀವು ಈಗ, ಸ್ಟಾಲಿನ್‌ ಸತ್ತ ನಂತರ ಇದೆಲ್ಲ ಹೇಳುತ್ತಿದ್ದೀರಿ. ಆದರೆ ಆತ ಬದುಕಿದ್ದಾಗ ಅವನ ಸಚಿವ  ಸಂಪುಟದಲ್ಲಿ ನೀವೂ ಇದ್ದಿರಲ್ಲಾ? ಈಗ ಮಾಡುತ್ತಿರುವ ಟೀಕೆಗಳನ್ನು ಆಗಲೇ ಮಾಡಿದ್ದರೆ ಏನಾಗುತ್ತಿತ್ತು?’ ಎಂದು ಗಟ್ಟಿಯಾಗಿ ಹೇಳಿತು.

ಸಭೆ ಸ್ತಂಭೀಭೂತ ವಾಯಿತು. ಕ್ರುಶ್ಚೇವ್‌ ಮಾತು ನಿಲ್ಲಿಸಿದರು. ಸೂಜಿ ಬಿದ್ದರೂ ಕೇಳುವಷ್ಟು ಮೌನ ಆವರಿಸಿತು ಎಲ್ಲೆಲ್ಲೂ. “ಯಾರದು? ಯಾರು ಹೇಳಿದ್ದು ಅದನ್ನು? ಧೈರ್ಯ ಇದ್ದರೆ ಎದ್ದುನಿಲ್ಲು!’, ಕ್ರುಶ್ಚೇವ್‌ ಗದರುವಂತೆ ದನಿ ಎತ್ತರಿಸಿ ಕೂಗಿದರು. ಸಭೆ ಹೆಪ್ಪುಗಟ್ಟಿ ಕೂತಿತ್ತು. ಯಾರೊಬ್ಬರೂ ಉಸಿರೆತ್ತಲಿಲ್ಲ. ಒಂದು ನಿಮಿಷ  ಗಾಢ ಮೌನ ಆವರಿಸಿದಾಗ ಕ್ರುಶ್ಚೇವ್‌ ಹೇಳಿದರು, “ಸ್ಟಾಲಿನ್‌ ನೀತಿಗಳನ್ನು ನಾನು ಆಗ ಯಾಕೆ ವಿರೋಧಿಸಲಿಲ್ಲ ಗೊತ್ತಾಯಿತಲ್ಲ?’.

* ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.