
ಹಾಕಿ ಕೋಚ್ ಹುದ್ದೆಗೆ ವಿದೇಶಿಯರ ರೇಸ್
ಭಾರತೀಯರು ಯಾರಿದ್ದಾರೆ ಹೇಳಿ: ಹಾಕಿ ಇಂಡಿಯಾ ಪ್ರಶ್ನೆ
Team Udayavani, Feb 4, 2023, 8:00 AM IST

ಹೊಸದಿಲ್ಲಿ: ಭಾರತೀಯ ಹಾಕಿ ತಂಡದ ಕೋಚ್ ಹುದ್ದೆಗೆ ವಿದೇಶಿಯರ ರೇಸ್ ಮೊದಲ್ಗೊಂಡಿದೆ. ಆರ್ಜೆಂಟೀನಾದ ಮ್ಯಾಕ್ಸ್ ಕಾಲ್ಡಾಸ್, ನೆದರ್ಲೆಂಡ್ಸ್‌ನ ಸೀಗ್‌ಫ್ರೀಡ್ ಐಕ್‌ಮ್ಯಾನ್ ಸ್ಪರ್ಧೆಯ ಮುಂಚೂಣಿಯಲ್ಲಿದ್ದಾರೆ.
ತವರಲ್ಲೇ ನಡೆದ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಘೋರ ವೈಫಲ್ಯ ಅನುಭವಿಸಿದ ಬಳಿಕ ಗ್ರಹಾಂ ರೀಡ್ ಭಾರತೀಯ ಹಾಕಿ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.
ಕ್ವಾರ್ಟರ್ ಫೈನಲ್ ಕೂಡ ಕಾಣದ ಆತಿಥೇಯ ಭಾರತ 9ನೇ ಸ್ಥಾನಕ್ಕೆ ಕುಸಿದಿತ್ತು.
“ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಬಳಿಕ ಭಾರತೀಯ ಹಾಕಿ ಪ್ರಗತಿಯ ಪಥ ಹಿಡಿಯಿತು ಎಂದೇ ಭಾವಿಸಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಯಿತು. ಒಲಿಂಪಿಕ್ಸ್ ಪದಕ ಗೆಲುವಿನಲ್ಲಿ ಗ್ರಹಾಂ ರೀಡ್ ಪಾತ್ರ ಅತ್ಯುತ್ತಮ ಮಟ್ಟದಲ್ಲಿತ್ತು. ಅನಂತರ ಆತಂಕಕಾರಿ ರೀತಿಯಲ್ಲಿ ಕುಸಿಯಿತು’ ಎಂದು ಹೆಸರು ಹೇಳಬಯಸದ ಹಾಕಿ ಇಂಡಿಯಾದ ಅಧಿಕಾರಿಯೊಬ್ಬರು ಪಿಟಿಐ ಜತೆ ಪ್ರತಿಕ್ರಿಯಿಸಿದರು.
“ನಾವು 2-3 ವಿದೇಶಿ ತರಬೇತು ದಾರರೊಂದಿಗೆ ಮಾತುಕತೆ ನಡೆಸಿದ್ದೇವೆ. ಭಾರತ ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಯಾರು ಸಮರ್ಥರು ಎಂಬುದನ್ನು ಇನ್ನಷ್ಟೇ ತೀರ್ಮಾನಿಸಬೇಕು. ಕಾಲ್ಡಾಸ್, ಐಕ್‌ಮ್ಯಾನ್ ಸೇರಿದಂತೆ ಇನ್ನೂ ಕೆಲವು ವಿದೇಶಿ ತರಬೇತುದಾರರ ಹೆಸರನ್ನು ಪರಿಶೀಲಿಸಲಾಗುತ್ತಿದೆ’ ಎಂದು ಅವರು ಹೇಳಿದರು.
ಭಾರತೀಯರು ಏಕಿಲ್ಲ?
“ಹಾಗಾದರೆ ಕೋಚ್ ಹುದ್ದೆಗೆ ಯಾವುದೇ ಭಾರತೀಯರ ಹೆಸ ರನ್ನು ಪರಿಗಣಿಸಿಲ್ಲವೇ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಭಾರತ ದಲ್ಲಿರುವ ಅತ್ಯುತ್ತಮ ಕೋಚ್ ಯಾರೆಂಬುದನ್ನು ದಯವಿಟ್ಟು ನೀವು ತಿಳಿಸುವಿರಾ?’ ಎಂದು ಪ್ರಶ್ನೆ ಎಸೆದರು.
“ಈ ವರ್ಷ ಏಷ್ಯನ್ ಗೇಮ್ಸ್ ಇದೆ. ಮುಂದಿನ ವರ್ಷ ಪ್ಯಾರಿಸ್ ಒಲಿಂಪಿಕ್ಸ್ ನಡೆಯಲಿದೆ. ಈ ಎರಡೂ ಕೂಟಗಳಲ್ಲಿ ಭಾರತ ಶ್ರೇಷ್ಠ ಮಟ್ಟದ ಪ್ರದರ್ಶನ ನೀಡಲೇಬೇಕು. ಅಂಥ ಸಾಮರ್ಥ್ಯವುಳ್ಳ ಕೋಚ್ ನಮ್ಮ ಆಯ್ಕೆ’ ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೋಷಿಯಲ್ ಮೀಡಿಯಾದಲ್ಲಿ ತಮ್ಮ 10 ನೇ ತರಗತಿ ಅಂಕಪಟ್ಟಿ ಹಂಚಿಕೊಂಡ ಕಿಂಗ್ ಕೊಹ್ಲಿ!

ಹೈದರಾಬಾದ್ ತಂಡದ ನಾಯಕತ್ವ ಬದಲಾವಣೆ? ಮಾಕ್ರಮ್ ಬದಲು ಕಾಣಸಿಕೊಂಡ ಭುವನೇಶ್ವರ್

ಈ ಬಾರಿಯಾದರೂ ಅರ್ಜುನ್ ತೆಂಡೂಲ್ಕರ್ ಗೆ ಸಿಗುತ್ತಾ ಚಾನ್ಸ್?: ಉತ್ತರ ನೀಡಿದ ರೋಹಿತ್

ಐಪಿಎಲ್ 2023: ಆರ್ ಸಿಬಿಯ ಮೊದಲ ಪಂದ್ಯಕ್ಕೆ ಲಭ್ಯವಿಲ್ಲ ಹೇಜಲ್ವುಡ್, ಮ್ಯಾಕ್ಸವೆಲ್

ಮುಂಬೈನಲ್ಲಿ ವಿಶ್ವಕಪ್ ಸೆಮಿಫೈನಲ್ ಮ್ಯಾಚ್; ಭಾರತ- ಪಾಕ್ ಪಂದ್ಯ ನಡೆಯುವುದು ಎಲ್ಲಿ?