Udayavni Special

ಟಿ20 ಸರಣಿ : ತಮ್ಮದೇ ನೆಲದಲ್ಲಿ ಮತ್ತೆ ಮುಗ್ಗರಿಸಿದ ಲಂಕಾ ಸಿಂಹಗಳು : ಭಾರತಕ್ಕೆ 38 ರನ್‌ ಜಯ


Team Udayavani, Jul 25, 2021, 11:53 PM IST

ಟಿ20 ಸರಣಿ : ತಮ್ಮದೇ ನೆಲದಲ್ಲಿ ಮತ್ತೆ ಮುಗ್ಗರಿಸಿದ ಲಂಕಾ ಸಿಂಹಗಳು : ಭಾರತಕ್ಕೆ 38 ರನ್‌ ಜಯ

ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸುಲಭ ಜಯ ಸಾಧಿಸಿದೆ. ಬ್ಯಾಟಿಂಗ್‌, ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಆತಿಥೇಯರು ಮುಗ್ಗರಿಸಿದರೆ, ಭಾರತೀಯರು ಈ ಎರಡರಲ್ಲೂ ಯಶಸ್ವಿಯಾದರು.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ, 20 ಓವರ್‌ಗಳಲ್ಲಿ 5 ವಿಕೆಟಿಗೆ 164 ರನ್‌ ಪೇರಿಸಿತು. ಇದನ್ನು ಬೆನ್ನತ್ತಿದ ಲಂಕನ್ನರು 18.3 ಓವರ್‌ಗಳಲ್ಲಿ 126 ರನ್‌ಗಳಿಗೆ ಆಲೌಟಾದರು. ಅಲ್ಲಿಗೆ ಭಾರತ 38 ರನ್‌ಗಳಿಂದ ಜಯಿಸಿತು. ಲಂಕಾ ಪರ ಚರಿಥ ಅಸಲಂಕ 44 ರನ್‌ ಬಾರಿಸಿ ಹೋರಾಡಿದರು. ಆದರೆ ಉಳಿದ ಆಟಗಾರರು ನೆರವಿಗೆ ಬರಲಿಲ್ಲ. ಭಾರತದ ಪರ ವೇಗಿ ಭುವನೇಶ್ವರ್‌ ಕುಮಾರ್‌ ಅಮೋಘ ದಾಳಿ ಸಂಘಟಿಸಿ, 22 ರನ್‌ ನೀಡಿ 4 ವಿಕೆಟ್‌ ಪಡೆದರು.

ಸೂರ್ಯಕುಮಾರ್‌ ಉತ್ತಮ ಬ್ಯಾಟಿಂಗ್‌: ಸೂರ್ಯಕುಮಾರ್‌ ಭಾರತ ಸರದಿಯ ಏಕೈಕ ಅರ್ಧಶತಕ ಹೊಡೆದರೆ, ಧವನ್‌ 46 ರನ್‌ ಕೊಡುಗೆ ಸಲ್ಲಿಸಿದರು. ಪೃಥ್ವಿ ಶಾ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್‌ ಒಪ್ಪಿಸಿ “ಗೋಲ್ಡನ್‌ ಡಕ್‌’ ಅವಮಾನಕ್ಕೆ ಸಿಲುಕಿದರು. ಮುಂದೆ ಶಿಖರ್‌ ಧವನ್‌-ಸಂಜು ಸ್ಯಾಮ್ಸನ್‌ ಯಾವುದೇ ಒತ್ತಡಕ್ಕೊಳಗಾಗಲಿಲ್ಲ. ಇದರಲ್ಲಿ ಸ್ಯಾಮ್ಸನ್‌ ಪಾಲು 27 ರನ್‌.

ಇದನ್ನೂ ಓದಿ :ಟೋಕಿಯೊ ಒಲಿಂಪಿಕ್ಸ್‌ : ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಶುಭಾರಂಭ

ಧವನ್‌-ಸೂರ್ಯಕುಮಾರ್‌ ಯಾದವ್‌ ಸೇರಿಕೊಂಡು 3ನೇ ವಿಕೆಟಿಗೆ ಮತ್ತೂಂದು ಉತ್ತಮ ಜತೆಯಾಟ ನಡೆಸಿದರು. 48 ಎಸೆತಗಳಿಂದ 62 ರನ್‌ ಒಟ್ಟುಗೂಡಿತು. ಒಂದೆಡೆ ನಿಂತು ಇನಿಂಗ್ಸ್‌ ಬೆಳೆಸುತ್ತಿದ್ದ ಧವನ್‌, ಅರ್ಧಶತಕದ ನಿರೀಕ್ಷೆಯಲ್ಲಿದ್ದರು. ಆದರೆ ಕೇವಲ 4 ರನ್ನಿನಿಂದ ಈ ಅವಕಾಶ ತಪ್ಪಿಸಿಕೊಂಡರು (36 ಎಸೆತ, 4 ಬೌಂಡರಿ, 1 ಸಿಕ್ಸರ್‌).

ಆಕರ್ಷಕ ಆಟವಾಡಿದ ಸೂರ್ಯಕುಮಾರ್‌ ಯಾದವ್‌ ಭರ್ತಿ 50 ರನ್‌ ಬಾರಿಸಿದರು (34 ಎಸೆತ, 5 ಬೌಂಡರಿ, 2 ಸಿಕ್ಸರ್‌). ಡೆತ್‌ ಓವರ್‌ ಆರಂಭವಾದೊಡನೆಯೇ ಇವರ ವಿಕೆಟ್‌ ಬಿತ್ತು. ಇಶಾನ್‌ ಕಿಶನ್‌ 14 ಎಸೆತಗಳಲ್ಲಿ 20 ರನ್‌ ಮಾಡಿ ಅಜೇಯರಾಗಿ ಉಳಿದರು. ಕೊನೆಯ 5 ಓವರ್‌ಗಳಲ್ಲಿ 43 ರನ್‌ ಬಂತು.

ಸಂಕ್ಷಿಪ್ತ ಸ್ಕೋರ್‌: ಭಾರತ 20 ಓವರ್‌, 164/5 (ಸೂರ್ಯಕುಮಾರ್‌ 50, ಶಿಖರ್‌ ಧವನ್‌ 46, ದುಷ್ಮಂಥ ಚಮೀರ 24ಕ್ಕೆ 2). ಶ್ರೀಲಂಕಾ 18.3 ಓವರ್‌, 126 (ಚರಿಥ ಅಸಲಂಕ 44, ಭುವನೇಶ್ವರ್‌ 22/4, ದೀಪಕ್‌ ಚಹರ್‌ 24/2).

ಟಾಪ್ ನ್ಯೂಸ್

ಯಶಸ್ಸು ಕಂಡ ಪ್ರಧಾನಿ ಮೋದಿ ಅಮೆರಿಕ ಪ್ರವಾಸ

ಯಶಸ್ಸು ಕಂಡ ಪ್ರಧಾನಿ ಮೋದಿ ಅಮೆರಿಕ ಪ್ರವಾಸ

ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ

ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

ಕೊನೆಯ ಎಸೆತದಲ್ಲಿ ಚೆನ್ನೈ ವಿನ್‌

ಕೊನೆಯ ಎಸೆತದಲ್ಲಿ ಚೆನ್ನೈಗೆ ಜಯ

ಒಸ್ಟ್ರಾವಾ ಓಪನ್‌ ಟೆನಿಸ್‌:ಸಾನಿಯಾ-ಶುಯಿ ಜೋಡಿಗೆ ಪ್ರಶಸ್ತಿ

ಒಸ್ಟ್ರಾವಾ ಓಪನ್‌ ಟೆನಿಸ್‌:ಸಾನಿಯಾ-ಶುಯಿ ಜೋಡಿಗೆ ಪ್ರಶಸ್ತಿ

ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

ಲಡಾಖ್‌ನ ಪೂರ್ವ ಭಾಗದಲ್ಲಿ ಚೀನಾ ಸೇನೆಯ ಡ್ರೋನ್‌ ಹಾರಾಟ

ಲಡಾಖ್‌ನ ಪೂರ್ವ ಭಾಗದಲ್ಲಿ ಚೀನಾ ಸೇನೆಯ ಡ್ರೋನ್‌ ಹಾರಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

ಕೊನೆಯ ಎಸೆತದಲ್ಲಿ ಚೆನ್ನೈ ವಿನ್‌

ಕೊನೆಯ ಎಸೆತದಲ್ಲಿ ಚೆನ್ನೈಗೆ ಜಯ

ಒಸ್ಟ್ರಾವಾ ಓಪನ್‌ ಟೆನಿಸ್‌:ಸಾನಿಯಾ-ಶುಯಿ ಜೋಡಿಗೆ ಪ್ರಶಸ್ತಿ

ಒಸ್ಟ್ರಾವಾ ಓಪನ್‌ ಟೆನಿಸ್‌:ಸಾನಿಯಾ-ಶುಯಿ ಜೋಡಿಗೆ ಪ್ರಶಸ್ತಿ

ಮಾರ್ಗನ್ vs ಮಹೇಂದ್ರ: ಟಾಸ್ ಗೆದ್ದ ಕೆಕೆಆರ್, ಚೆನ್ನೈ ತಂಡಕ್ಕೆ ಕರ್ರನ್ ಸೇರ್ಪಡೆ

ಮಾರ್ಗನ್ vs ಮಹೇಂದ್ರ: ಟಾಸ್ ಗೆದ್ದ ಕೆಕೆಆರ್, ಚೆನ್ನೈ ತಂಡಕ್ಕೆ ಕರ್ರನ್ ಸೇರ್ಪಡೆ

ಮತ್ತೊಂದು ಫೈನಲ್ ಓವರ್ ಥ್ರಿಲ್ಲರ್: ಆಸೀಸ್ ವಿರುದ್ಧ ಅಂತಿಮ ಏಕದಿನ ಪಂದ್ಯ ಮಿಥಾಲಿ ಪಡೆ

ಮತ್ತೊಂದು ಫೈನಲ್ ಓವರ್ ಥ್ರಿಲ್ಲರ್: ಆಸೀಸ್ ವಿರುದ್ಧ ಅಂತಿಮ ಏಕದಿನ ಪಂದ್ಯ ಗೆದ್ದ ಮಿಥಾಲಿ ಪಡೆ

MUST WATCH

udayavani youtube

ಶ್ರೀ ಕ್ಷೇತ್ರ ಕಮಲಶಿಲೆಗೆ ಸಚಿವ ಅಶ್ವಥ್ ನಾರಾಯಣ್ ದಂಪತಿ ಭೇಟಿ, ವಿಶೇಷ ಪೂಜೆ

udayavani youtube

ರೈತರಿಗೆ ನಿರಂತರ ಆದಾಯ ಕೊಡುವ ಲಿಂಬೆ ಬೆಳೆಯ ಬಗ್ಗೆ ಮಾಹಿತಿ

udayavani youtube

ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು

udayavani youtube

ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಸಮಾಜಕ್ಕೆ ಬಹಳಷ್ಟು ಅವಶ್ಯಕತೆ : ಡಾ| ಅಶ್ವತ್ಥನಾರಾಯಣ

udayavani youtube

ಕೋವಿಡ್ ಆತಂಕದ ನಡುವೆ ಜಾನಪದ ಸಮ್ಮೇಳನದಲ್ಲಿ ಶಾಲಾ ಮಕ್ಕಳು ಭಾಗಿ

ಹೊಸ ಸೇರ್ಪಡೆ

ಇಂದು ಭಾರತ್‌ ಬಂದ್‌ಗೆ ಕರೆ: ಪ್ರತಿಭಟನ ಸಭೆಗೆ ಸೀಮಿತ: ಬಸ್‌ ಸಂಚಾರ ಯಥಾಸ್ಥಿತಿ

ಇಂದು ಭಾರತ್‌ ಬಂದ್‌ಗೆ ಕರೆ: ಪ್ರತಿಭಟನ ಸಭೆಗೆ ಸೀಮಿತ: ಬಸ್‌ ಸಂಚಾರ ಯಥಾಸ್ಥಿತಿ

ದಾಖಲಾತಿಯಲ್ಲಿ ದಾಖಲೆ: ಮೂಲಸೌಕರ್ಯ ಕೊರತೆ

ದಾಖಲಾತಿಯಲ್ಲಿ ದಾಖಲೆ: ಮೂಲಸೌಕರ್ಯ ಕೊರತೆ

ಯಶಸ್ಸು ಕಂಡ ಪ್ರಧಾನಿ ಮೋದಿ ಅಮೆರಿಕ ಪ್ರವಾಸ

ಯಶಸ್ಸು ಕಂಡ ಪ್ರಧಾನಿ ಮೋದಿ ಅಮೆರಿಕ ಪ್ರವಾಸ

ಕೃಷಿಯಿಂದ ವಿಮುಖರಾಗುತ್ತಿರುವ ರೈತರು

ಕೃಷಿಯಿಂದ ವಿಮುಖರಾಗುತ್ತಿರುವ ರೈತರು

ತವರು ಸೇರಿದ ಕಲಾಕೃತಿಗಳು

ತವರು ಸೇರಿದ ಕಲಾಕೃತಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.