ಒಲಿಂಪಿಕ್ಸ್ : ಭಾರತದ 148 ಆ್ಯತ್ಲೀಟ್ಗಳಿಗೆ ಲಸಿಕೆ
Team Udayavani, May 22, 2021, 11:40 PM IST
ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿರುವ ಆಟಗಾರರೂ ಸೇರಿದಂತೆ ಭಾರತದ ಬಹುತೇಕ ಕ್ರೀಡಾಪಟುಗಳು ಕೋವಿಡ್-19 ಮೊದಲ ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ ಎಂದು ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ (ಐಒಎ) ತಿಳಿಸಿದೆ.
ವ್ಯಾಕ್ಸಿನ್ ಪಡೆದ 148 ಕ್ರೀಡಾಪಟುಗಳಲ್ಲಿ 17 ಮಂದಿ ದ್ವಿತೀಯ ಡೋಸ್ ಕೂಡ ತೆಗೆದುಕೊಂಡಿದ್ದಾರೆ. ಇನ್ನುಳಿದ 131 ಆ್ಯತ್ಲೀಟ್ಗಳು ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ ಎಂದು ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಹೇಳಿದರು.
ಜುಲೈ 23ರಿಂದ ಆರಂಭಗೊಳ್ಳಲಿರುವ ಟೊಕಿಯೊ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಪ್ರಮುಖ ಆ್ಯತ್ಲೀಟ್ಗಳು ಲಸಿಕೆ ಪಡೆದವರಲ್ಲಿ ಸೇರಿದ್ದಾರೆ. ಇದರ ಜತೆಗೆ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲಿರುವ 13 ಆ್ಯತ್ಲೀಟ್ಗಳು ಕೂಡ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ನರೀಂದರ್ ಬಾತ್ರಾ ತಿಳಿಸಿದರು.