ಎಫ್ಐಎಚ್ ಪ್ರೊ ಲೀಗ್ ವನಿತಾ ಹಾಕಿ : ಸ್ಪೇನ್ ವಿರುದ್ಧ ವನಿತೆಯರಿಗೆ ಜಯ
Team Udayavani, Feb 26, 2022, 11:14 PM IST
ಭುವನೇಶ್ವರ: ಬಲಿಷ್ಠ ಸ್ಪೇನ್ ವಿರುದ್ಧದ ಎಫ್ಐಎಚ್ ಪ್ರೊ ಲೀಗ್ ವನಿತಾ ಹಾಕಿ ಪಂದ್ಯದಲ್ಲಿ ಭಾರತ ಗೆಲುವಿನ ಆರಂಭ ಮಾಡಿದೆ. ಇಲ್ಲಿನ “ಕಳಿಂಗ ಸ್ಟೇಡಿಯಂ’ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ವಿಶ್ವದ 6ನೇ ರ್ಯಾಂಕಿಂಗ್ ತಂಡಕ್ಕೆ 2-1 ಅಂತರದ ಸೋಲುಣಿಸಿದೆ.
ಪಂದ್ಯದ ಮೊದಲ ಗೋಲು 18ನೇ ನಿಮಿಷದಲ್ಲಿ ಸ್ಪೇನ್ನಿಂದಲೇ ದಾಖಲಾಯಿತು. ಮಾರ್ತಾ ಸೆಗು ಫೀಲ್ಡ್ ಗೋಲ್ ಮೂಲಕ ಸ್ಪೇನ್ಗೆ ಮುನ್ನಡೆ ಒದಗಿಸಿದರು. ಆದರೆ ಕೂಡಲೇ ಜ್ಯೋತಿ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು. ಭಾರತದ ಗೆಲುವಿನ ಗೋಲು 52ನೇ ನಿಮಿಷದಲ್ಲಿ ನೇಹಾ ಗೋಯಲ್ ಅವರಿಂದ ದಾಖಲಾಯಿತು. ರವಿವಾರ ಮತ್ತೆ ಇತ್ತಂಡಗಳು ಮುಖಾಮುಖೀಯಾಗಲಿವೆ.