ಇಂಡಿಯನ್ ಆಯಿಲ್ ದಕ್ಷಿಣ ವಲಯಕ್ಕೆ ಶೈಲೇಂದ್ರ ರೂವಾರಿ
Team Udayavani, Feb 23, 2021, 6:15 AM IST
ಚೆನ್ನೈ: ಇಂಡಿಯನ್ ಆಯಿಲ್ ಎಲ್ಪಿಜಿ ಗ್ರೂಪ್ನ ಕರ್ನಾಟಕ ಮುಖ್ಯಸ್ಥ ಕೆ. ಶೈಲೇಂದ್ರ ಅವರನ್ನು ಸಂಸ್ಥೆ ದಕ್ಷಿಣ ವಲಯದ ಕಾರ್ಯನಿರ್ವಾಹಕ ನಿರ್ದೇಶಕ (ಪ್ರಾದೇಶಿಕ ಸೇವೆಗಳು) ಹುದ್ದೆಗೆ ನೇಮಕ ಮಾಡಿದೆ. ಇದರ ಅನ್ವಯ ಶೈಲೇಂದ್ರ ಅವರು ಕರ್ನಾಟಕ, ತಮಿಳುನಾಡು- ಪುದುಚೇರಿ, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ಲಕ್ಷದ್ವೀಪಗಳನ್ನೊಳಗೊಂಡ ಇಂಡಿಯನ್ ಆಯಿಲ್ ದಕ್ಷಿಣ ವಲಯಕ್ಕೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಮಾನವ ಸಂಪನ್ಮೂಲ, ಫೈನಾನ್ಸ್, ಎಲ್ಪಿಜಿ ಮತ್ತು ಇಂಧನ ಸಾಗಣೆ, ಒಪ್ಪಂದ , ಸೇಫ್ಟಿ ಮತ್ತು ಸೆಕ್ಯುರಿಟಿ, ವಿಮಾನಯಾನ ಮತ್ತು ಗುಣಮಟ್ಟ ನಿಯಂತ್ರಣ ವಿಭಾಗಗಳನ್ನು ನಿರ್ವಹಿಸಲಿದ್ದಾರೆ. ಹೈದರಾಬಾದ್ನ ಒಸ್ಮಾನಿಯಾ ವಿವಿಯಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪೂರೈಸಿರುವ ಶೈಲೇಂದ್ರ, ಎಲ್ಪಿಜಿ ಉದ್ದಿಮೆಯಲ್ಲಿ 3 ದಶಕಗಳಿಂದ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಅನುಭವಿ.