ಪ್ರೀತಿಯ ಅಮ್ಮನಿಗೆ ನಿನ್ನ ಮಗನು ಮಾಡುವ ನಮಸ್ಕಾರಗಳು…

ಇನ್‌ಲ್ಯಾಂಡ್‌ ಲೆಟರ್‌

Team Udayavani, Jun 18, 2020, 10:21 AM IST

ಪ್ರೀತಿಯ ಅಮ್ಮನಿಗೆ ನಿನ್ನ ಮಗನು ಮಾಡುವ ನಮಸ್ಕಾರಗಳು…

ಸಾಂದರ್ಭಿಕ ಚಿತ್ರ

ಪ್ರೀತಿಯ ಅಮ್ಮನಿಗೆ ನಿನ್ನ ಮಗನು ಮಾಡುವ ನಮಸ್ಕಾರಗಳು. ನಾನು ಇಲ್ಲಿ ಕ್ಷೇಮವಾಗಿದ್ದೇನೆ. ನೀನು ಮತ್ತೆ ಅಪ್ಪ ಇಬ್ಬರೂ ಕ್ಷೇಮವಾಗಿದ್ದೀರಾ ಎಂದು ಭಾವಿಸುತ್ತೇನೆ. ಬೆಂಗಳೂರಿನ ಪರಿಸ್ಥಿತಿಯ ಬಗ್ಗೆ ನೀನು ಟಿವಿಯಲ್ಲಿ ನೋಡಿರುತ್ತೀಯಾ ಎಂದು ಭಾವಿಸಿದ್ದೇನೆ. ಅಂದಹಾಗೆ ನಮಗೆ ಇಲ್ಲಿ ಯಾವ ತೊಂದರೆಯೂ ಇಲ್ಲ. ಕಾಲಕಾಲಕ್ಕೆ ಅಂಗಡಿಯಿಂದ ಬೇಕಾದ ತಿನಿಸುಗಳನ್ನು ತಂದು ಆರಾಮದಲ್ಲಿ ತಿಂದು ತೇಗಿ ನಿನ್ನ ಮನದಾಸೆಯಂತೆ ದಪ್ಪ ಆಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

ಆಶ್ಚರ್ಯ ಆಗ್ತಿದ್ಯಾ! ಎಂದೂ ಪತ್ರ ಬರೆಯದ ಮಗ ಯಾಕಿಂದು ದಿಢೀರನೆ ಇಷ್ಟುದ್ದ ಕಾಗದ ಬರೆದಿ¨ªಾನೆ ಎಂದು? ಯಾಕೋ ಗೊತ್ತಿಲ್ಲ, ಇವತ್ತು ನನ್ನೊಳಗಿನ ಮಗ ನಿನ್ನನ್ನು ಬಹಳ ನೆನಪಿಸಿಕೊಳ್ತಾ ಇದ್ದಾನೆ. ಈ ಉಕ್ಕಿ ಬಂದ ಪ್ರೀತಿಯನ್ನು ಅಲೆಗಳಲ್ಲಿ ತೇಲಿಸುವ ಬದಲು ಪದಗಳಲ್ಲಿ ಹಿಡಿದಿಡುವ ಮನಸ್ಸಾಯಿತು ಅಷ್ಟೆ.
ಗಂಡು ಮಗುವೊಂದು ಬೇಕೆಂಬ ಹಂಬಲದಿಂದ ಹುಟ್ಟಿದವನು ನಾನು, ಹಾಗಾಗಿ ನನ್ನನ್ನು ಎತ್ತಿ ಆಡಿಸುವಾಗ ನಿನ್ನ ಪ್ರೀತಿ ಸಹಜಕ್ಕಿಂತಲೂ ಹೆಚ್ಚಿತ್ತೇನೋ. ನೀ ಹೇಳಿದ ನೆನಪು; ಹುಟ್ಟುವಾಗ ನನಗೆ ತಲೆತುಂಬ ಗುಂಗುರು ಕೂದಲು, ಕೆಂಪು ಬಿಳಿ ಬಣ್ಣ, ಅಗಲ ಮುಖ, ಮಲಗಿದರೆ ತೊಟ್ಟಿಲು ತುಂಬುತ್ತಿತ್ತು.

ಎತ್ತಿ ಕೊಂಡಾಡಲು ಭಾರ ಎಂದು; ಎಲ್ಲಿ ತನ್ನ ಕೈ ಜಾರಿ ಶಿಶು ಬೀಳುತ್ತೋ ಎಂಬ ಭಯದಿಂದ ಅಜ್ಜಿ ನನ್ನನ್ನು ಸ್ನಾನ ಮಾಡಿಸಲೂ ಬಾರದಿದ್ದಾಗ, ನೀನೇ ಬಾಣಂತಿಯ ನೋವಿದ್ದರೂ ನನ್ನನ್ನು ಎತ್ತಿ ಮೈಗೆಲ್ಲಾ ತೆಂಗಿನ ಎಣ್ಣೆ ಹಚ್ಚಿ ತಿಕ್ಕಿ ಮಾಂಸದ ಮುದ್ದೆಗೆ ಒಂದು ರೂಪ ಕೊಟ್ಟಿದ್ದು. ನಾನು ಹುಟ್ಟಿದಾಗ ಅಕ್ಕನಿಗಿನ್ನೂ ಎರಡು ವರ್ಷ. ನನ್ನನ್ನು ಎದೆಗಪ್ಪಿ ಹಿಡಿದು ನೀ ನಡೆದರೆ, ಅವಳು ಅಪ್ಪನ ಭುಜದ ಮೇಲೆ ಏರಿ ನಾ ನೋಡದ ಪ್ರಪಂಚವನ್ನು ನೋಡುತ್ತಿದ್ದಳು.
ಶಾಲೆಗೆ ಹೋಗಲಾರೆ ಎಂದು ಅತ್ತು ಹಠ ಹಿಡಿದಾಗ ಒತ್ತಾಯಿಸಿ ಉಳಿದ ಮಕ್ಕಳೊಂದಿಗೆ ಕಳುಹಿಸಿದ್ದೆ. ಅಕಸ್ಮಾತ್‌ ಬಿದ್ದು ಕೈ ಮುರಿದುಕೊಂಡಾಗ ಮನೆಯಲ್ಲೇ ನನಗೆ ಎಲ್ಲಾ ಪಾಠ ಕಲಿಸಿದ್ದೆ. ಆಟ ಆಡುವಾಗ ಬಿದ್ದು ಮಂಡಿ ಗಾಯ ಮಾಡಿಕೊಂಡು ಬಂದಾಗ ಬೈದು ಔಷಧಿ ಹಚ್ಚಿದ್ದೆ. ತೋಟದಲ್ಲೊಮ್ಮೆ ಆಡುವಾಗ ಬಂಡಾರ ಮಡಿಕಿ ಹುಳ ನನ್ನನ್ನು ಮುತ್ತಿದ್ದು, ನನ್ನ ನೋವಿನ ಅಳುವನ್ನು ನೀ ನೋಡಲಾರದೆ ಸೊಂಟದಲ್ಲಿ ಎತ್ತಿಕೊಂಡು ಕೆಲಸದವಳ ಬಳಿ ಓಡಿ ಹೋಗಿ ನನ್ನ ತಲೆಗೆ ಗಟ್ಟಿಯಾಗಿ ಹಿಡಿದಿದ್ದ ಹುಳವನ್ನ ಕಿತ್ತೆಸೆದಿದ್ದು. ಯಾವ ತಾಯಿ ತಾನೇ ತನ್ನ ಮಕ್ಕಳ ನೋವನ್ನು ಸಹಿಸಿಯಾಳು ಹೇಳು?

ಅಮ್ಮಾ, ನಿನ್ನಿಂದ ನಾನು ಹಲವಾರು ವಿಚಾರಗಳನ್ನು ಕಲಿತಿದ್ದೇನೆ. ಆದರೆ ನಿನ್ನ ಸಹನೆ ಮತ್ತು ಮುಗ್ಧತೆ ಮಾತ್ರ ನನಗೆ ಬರಲೇ ಇಲ್ಲ. ನೀವೇನೋ ನಾವು ಮಗುವಾಗಿ¨ªಾಗ ನಮ್ಮನ್ನು ಬಾಚಿ ತಬ್ಬಿ ಮುದ್ದಿಸ್ತೀರಾ, ಅದೇ ಮಗು ತನ್ನ ತೊದಲು ಬಾಯಿಂದ ಅಮ್ಮ.. ಎಂದಾಗ ಸ್ವರ್ಗವನ್ನೇ ಕಾಣಿ¤àರಾ. ಪ್ರತೀದಿನ ಮಕ್ಕಳ ಲಾಲನೆ ಪಾಲನೆಯಲ್ಲಿ ಮುಳುಗಿ ಅವರ ಬೇಕು ಬೇಡಗಳನ್ನು ಪೂರೈಸುವುದರಲ್ಲಿ ಖುಷಿಯನ್ನು ಕಾಣುತ್ತೀರಿ. ಅದೇ ಮಕ್ಕಳು ಬೆಳೆದು ಒಳ್ಳೆಯ ಉದ್ಯೋಗಕ್ಕೆ ತೆರಳಲು ಆರಂಭಿಸಿದಾಗ ಬಂಧು ಬಳಗದವರ ಬಳಿ ಮತ್ತೆ ನಿಮ್ಮ ಮಕ್ಕಳನ್ನೇ ಹೊಗಳಿ ನಿಮ್ಮ ಪ್ರೀತಿಯ ಭಾರವನ್ನು ಹಗುರ ಮಾಡಿಕೊಳ್ಳುತ್ತೀರಿ. ಇವತ್ತು ಈ ಪತ್ರ ಬರೆಯುವ ನಿರ್ಧಾರ ನನ್ನ ಮನಸ್ಸನ್ನು ತಿಳಿ ಮಾಡಿತು ಅಮ್ಮ.

ಮಗುವಾದಾಗ ಅಮ್ಮನಾಗಿ ನನ್ನನ್ನು ಮುದ್ದಿಸಿ ಬೆಳೆಸಿದ್ದಕ್ಕೆ, ಬಾಲ್ಯದಲ್ಲಿ ಶಿಕ್ಷಕಿಯಾಗಿ ನನ್ನನ್ನು ದಂಡಿಸಿ ಸನ್ಮಾರ್ಗದಲ್ಲಿ ನಡೆಸಿದ್ದಕ್ಕೆ, ಈಗ ಯೌವನದಲ್ಲಿ ಒಬ್ಬ ಸ್ನೇಹಿತೆಯಾಗಿ ನನ್ನನ್ನು ಸಲಹುತ್ತಿರುವುದಕ್ಕೆ ಕೃತಜ್ಞತೆ ಹೇಳಿ ನಿನ್ನ ಸಂಬಂಧ ಕಡಿದುಕೊಳ್ಳಲಾರೆ.

-ಇಂತಿ ನಿನ್ನ ಪ್ರೀತಿಯ ಮಗ

ಟಾಪ್ ನ್ಯೂಸ್

ಸಿಎಂ ಅಭ್ಯರ್ಥಿಗಳನ್ನು ಘೋಷಿಸಿ: ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸಿ.ಎಂ.ಇಬ್ರಾಹಿಂ ಸವಾಲು

ಸಿಎಂ ಅಭ್ಯರ್ಥಿಗಳನ್ನು ಘೋಷಿಸಿ: ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸಿ.ಎಂ.ಇಬ್ರಾಹಿಂ ಸವಾಲು

ಬುಮ್ರಾ ವಿಶ್ವದಾಖಲೆ; ಬ್ರಾಡ್ ಒಂದೇ ಓವರ್ ನಲ್ಲಿ 35 ರನ್ ಚಚ್ಚಿದ ಬೂಮ್ ಬೂಮ್ ಬುಮ್ರಾ

ಬುಮ್ರಾ ವಿಶ್ವದಾಖಲೆ; ಬ್ರಾಡ್ ಒಂದೇ ಓವರ್ ನಲ್ಲಿ 35 ರನ್ ಚಚ್ಚಿದ ಬೂಮ್ ಬೂಮ್ ಬುಮ್ರಾ

ಉದಯಪುರ ಆಯ್ತು, ಪ್ರವಾದಿ ಬಗ್ಗೆ ಹೇಳಿಕೆ ನೀಡಿ ಕೊಲೆಯಾಗಿದ್ದ ತಿವಾರಿ ಪತ್ನಿಗೆ ಬೆದರಿಕೆ ಪತ್ರ

ಉದಯಪುರ ಆಯ್ತು, ಪ್ರವಾದಿ ಬಗ್ಗೆ ಹೇಳಿಕೆ ನೀಡಿ ಕೊಲೆಯಾಗಿದ್ದ ತಿವಾರಿ ಪತ್ನಿಗೆ ಬೆದರಿಕೆ ಪತ್ರ

ಪೌರ ಕಾರ್ಮಿಕರ ಬೇಡಿಕೆ ಈಡೇರಿಸಿ ಅಧಿಕೃತ ಆದೇಶ ಹೊರಡಿಸಿ: ಸಿದ್ದರಾಮಯ್ಯ ಆಗ್ರಹ

ಪೌರ ಕಾರ್ಮಿಕರ ಬೇಡಿಕೆ ಈಡೇರಿಸಿ ಅಧಿಕೃತ ಆದೇಶ ಹೊರಡಿಸಿ: ಸಿದ್ದರಾಮಯ್ಯ ಆಗ್ರಹ

ಸಾಗರ : ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ : ಪೇಪರ್ ವಿತರಣೆಗೆ ಹೋಗಿದ್ದ ಯುವಕ ಸ್ಥಳದಲ್ಲೇ ಸಾವು

ಸಾಗರ : ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ : ಪೇಪರ್ ವಿತರಣೆಗೆ ಹೋಗಿದ್ದ ಯುವಕ ಸ್ಥಳದಲ್ಲೇ ಸಾವು

ಸುಳ್ಯದ ತೊಡಿಕಾನದ ದೊಡ್ಡಕುಮೇರಿಯಲ್ಲಿ ಕಂಪಿಸಿದ ಭೂಮಿ

ಸುಳ್ಯದ ತೊಡಿಕಾನದ ದೊಡ್ಡಕುಮೇರಿಯಲ್ಲಿ ಕಂಪಿಸಿದ ಭೂಮಿ

1-sffsfs

ಗುಂಡ್ಲುಪೇಟೆಯಲ್ಲಿ ಹುಲಿ ದಾಳಿ; ರೈತನಿಗೆ ತೀವ್ರ ಗಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾಲಹಳ್ಳಿಯ ಕುರ್ಕನ ಜಾಡು ಹಿಡಿದು…

ಜಾಲಹಳ್ಳಿಯ ಕುರ್ಕನ ಜಾಡು ಹಿಡಿದು…

ಇಂದು ನಾ ಕಂಡ ಜೋಗತಿ

ಜೋಗತಿಗೆ ಗುರು, ಮಾರ್ಗದರ್ಶಕಿ, ದಿಕ್ಕು-ದೆಸೆಯಾಗಿ ಸಿಕ್ಕವರೆ ಕಾಳವ್ವ : ನಾ ಕಂಡ ಜೋಗತಿ

fgdtryy

ಸುತ್ತಿಗೆ ತಲೆ ಹುಳು ಬಗ್ಗೆ ನಿಮಗೆ ತಿಳಿದಿದೆಯೆ ?

hyuty6t

ಸಂಗೀತವೆಂಬ ದೀಪದಲ್ಲಿ ಬೆಳಗುತ್ತಿರುವ ‘ಉಜ್ವಲ’

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

MUST WATCH

udayavani youtube

ದೇಶದ ಮೊದಲ ಮಾನವ ರಹಿತ ವಿಮಾನ ಹಾರಾಟ ಯಶಸ್ವಿ

udayavani youtube

ಭಗವಂತನ ಅನುಗ್ರಹ ಸಂಪಾದಿಸುವುದು ಹೇಗೆ?

udayavani youtube

NEWS BULLETIN 01-07-2022

udayavani youtube

ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು

udayavani youtube

ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್

ಹೊಸ ಸೇರ್ಪಡೆ

ಸಿಎಂ ಅಭ್ಯರ್ಥಿಗಳನ್ನು ಘೋಷಿಸಿ: ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸಿ.ಎಂ.ಇಬ್ರಾಹಿಂ ಸವಾಲು

ಸಿಎಂ ಅಭ್ಯರ್ಥಿಗಳನ್ನು ಘೋಷಿಸಿ: ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸಿ.ಎಂ.ಇಬ್ರಾಹಿಂ ಸವಾಲು

1-sdd

ಉದಯವಾಣಿ ವರದಿಗಾರ ಸಿ.ವೈ.ಮೆಣಶಿನಕಾಯಿರಿಗೆ ಪ್ರಜಾಭೂಷಣ ಪ್ರಶಸ್ತಿ

ತಲೆ ಕೂದಲು ಉದುರಿದ್ದಕ್ಕೆ ನೊಂದು ಯುವತಿ ಆತ್ಮಹತ್ಯೆ

ತಲೆ ಕೂದಲು ಉದುರಿದ್ದಕ್ಕೆ ನೊಂದು ಯುವತಿ ಆತ್ಮಹತ್ಯೆ

ನಾಗರಿಕರ ಸುಲಿಗೆಗೆ ನಿಂತ ನಗರಸಭೆ

ನಾಗರಿಕರ ಸುಲಿಗೆಗೆ ನಿಂತ ನಗರಸಭೆ

1-sf-sdfsf

ಗೋವಾ ದಲ್ಲಿ ಗ್ರಾ.ಪಂ.ಚುನಾವಣೆ; ಮೀಸಲಾತಿಗೆ ಬದ್ದ ಎಂದ ಸಿಎಂ ಸಾವಂತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.