ಅನುಮಾನಕ್ಕೆ ಎಡೆಮಾಡಿಕೊಟ್ಟ ಶಿಕ್ಷಕ ಹುದ್ದೆ ಸಂದರ್ಶನ
Team Udayavani, Jan 18, 2021, 3:32 PM IST
ಕುಷ್ಟಗಿ: ತುಮಕೂರು ಜಿಲ್ಲೆಯ ಶಿರಾ ಶಿಕ್ಷಣ ಸಂಸ್ಥೆಯ, ರಾಯಚೂರು ಜಿಲ್ಲೆಯ ಸಿಂಧನೂರಿನ ಹಿರೇಬೇಗೇರಿ ಪ್ರೌಢಶಾಲೆಯೊಂದಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ಸಂದರ್ಶನ ಏರ್ಪಡಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆರಂಭಿಕ
ಗೊಂದಲದಿಂದಾಗಿ ನೂರಕ್ಕೂ ಅಧಿಕ ಸಂದರ್ಶನಾರ್ಥಿಗಳಿಗೆ ನಿರಾಸೆಯಾದ ಪ್ರಕರಣ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹಿರೇಬೇಗೇರಿ ಧ್ರುವ ಸಾರ್ವಜನಿಕ ವಿದ್ಯಾ ಸಂಸ್ಥೆ ಮಾಗೋಡ ಸಂಸ್ಥೆಯ ಅಡಿಯಲ್ಲಿ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಹಿರೇಬೇಗೇರಿ ಧ್ರುವ ಗ್ರಾಮಾಂತರ ಪ್ರೌಢಶಾಲೆಗೆ ಶಿಕ್ಷಕ ಹುದ್ದೆ ಅರ್ಜಿ
ಆಹ್ವಾನಿಸಲಾಗಿತ್ತು. ಈ ಅನುದಾನಿತ ಪ್ರೌಢಶಾಲೆಯ 8 ಹುದ್ದೆಗಳಿಗೆ ಸಂದರ್ಶನ ನಡೆಯುವ ಸ್ಥಳ ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ವಿದ್ಯಾಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ಎಂದು ಉಲ್ಲೇಖೀಸಿ ಸಂದರ್ಶನದ ಜಾಹೀರಾತನ್ನು ಪತ್ರಿಕೆಯೊಂದರಲ್ಲಿ
ಪ್ರಕಟಿಸಲಾಗಿತ್ತು. ಆದರೆ ಸಂದರ್ಶನ ಸ್ತಳ ಕುಷ್ಟಗಿ ಪಟ್ಟಣದ ಸಂಗೋಳ್ಳಿ ರಾಯಣ್ಣ ಪ್ರೌಢಶಾಲೆಗೆ ಏಕಾಏಕಿ ಬದಲಾವಣೆಯಾಗಿದ್ದು ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ.
ಈ ಜಾಹೀರಾತು ನಂಬಿ ರಾಜ್ಯದ ತುಮಕೂರು, ದಾವಣಗೆರೆ ಕೊಪ್ಪಳ, ರಾಯಚೂರು ಜಿಲ್ಲೆಗಳ ಶಿಕ್ಷಕ ಆಕಾಂಕ್ಷಿಗಳು ರವಿವಾರ ಸಂದರ್ಶನಕ್ಕೆ ಆಗಮಿಸಿದ್ದರು. ಈ ಸಂದರ್ಶನಕ್ಕೆ ಸ್ಥಳೀಯ ಬಿಇಒ ಹಾಗೂ ಕೊಪ್ಪಳ ಜಿಲ್ಲೆಯ ಡಿಡಿಪಿಐ ಅನುಮತಿ ಇಲ್ಲ ಎನ್ನುವ ಆರೋಪ ವ್ಯಕ್ತವಾಯಿತು. ಅಲ್ಲದೇ ಸಿಂಧನೂರು ತಾಲೂಕಿನ ಹಿರೇಬೇಗೇರಿ ಗ್ರಾಮದಲ್ಲಿನ ಧ್ರುವ ಪ್ರೌಢಶಾಲೆ ಸಂದರ್ಶನದ ಸ್ಥಳ ಬದಲಾವಣೆ ಸಂದರ್ಶನಾರ್ಥಿಗಳ ಪ್ರಶ್ನೆಗಳಿಗೆ ಸಂದರ್ಶಕರು ಕಕ್ಕಾಬಿಕ್ಕಿಯಾದರು. ಅವರ ಜೊತೆಯಲ್ಲಿದ್ದ
ಸಹವರ್ತಿಗಳು ಗೊಂದಲವೇಳುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತರು.
ಇದನ್ನೂ ಓದಿ:ಮಾವಿನ ಬೆಳೆಗೆ ಅಕಾಲಿಕ ಮಳೆ ಕರಿನೆರಳು : ಭರ್ಜರಿ ಇಳುವರಿ ಕನಸು ಈಗ ನುಚ್ಚುನೂರು
ಸಂದರ್ಶನಾರ್ಥಿಗಳು ಸಂದರ್ಶನ ಬಹಿಷ್ಕರಿಸಿ, ಪಾವತಿಸಿದ 1 ಸಾವಿರ ರೂ. ಡಿಡಿ ವಾಪಸ್ ನೀಡಬೇಕೆಂದು ಪಟ್ಟು ಹಿಡಿದರು. ಈ ಹಿನ್ನೆಲೆಯಲ್ಲಿ ಉಂಟಾದ ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸ್‌ಐ ತಿಮ್ಮಣ್ಣ ನಾಯಕ್ ಮಧ್ಯ ಪ್ರವೇಶಿಸಿ, ಇಲ್ಲಿ ಗದ್ದಲ ಮಾಡದಿರಿ ಕೂಡಲೇ ಸಂದರ್ಶನಾರ್ಥಿಗಳ ಡಿಡಿ ಹಣ ವಾಪಸ್ ನೀಡಬೇಕೆಂದು ಸೂಚಿಸಿದರಲ್ಲದೇ, ಸಂದರ್ಶನ ಆಯೋಜಿಸಿದ ಸಂಸ್ಥೆಯ ಮೇಲೆ ಅನುಮಾನವಿದ್ದರೆ ದೂರು ಸಲ್ಲಿಸಿ. ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದರು.
ಸಿಂಧನೂರು ತಾಲೂಕಿನ ಅನುದಾನಿತ ಶಾಲೆಯೊಂದರ ಶಿಕ್ಷಕರ ನೇಮಕಾತಿಗೆ ನೇರ ಸಂದರ್ಶನಕ್ಕೆ ನಮ್ಮ ಸಂಸ್ಥೆಯ (ಸಂಗೊಳ್ಳಿ ರಾಯಣ್ಣ) ಕೊಠಡಿ ಕೇಳಿದ್ದರು. ಸಿಂಧನೂರಿನ ಅನುದಾನಿತ ಶಾಲೆಯ ಅಧ್ಯಕ್ಷರು ಕುಷ್ಟಗಿ ಪಟ್ಟಣದವರಾಗಿದ್ದರಿಂದ ಸಂದರ್ಶನಕ್ಕೆ ಬಳಸಿಕೊಳ್ಳಲು ಕೊಠಡಿ ನೀಡಿದ್ದೆ. ಸದರಿ ಶಾಲೆ ಅಧಿಕೃತವೋ, ಅನಧಿಕೃತವೋ ಮಾಹಿತಿ ಇಲ್ಲ.
– ಸುಂದರ್ ಚೌಡಕಿ, ಸಂಗೋಳ್ಳಿ ರಾಯಣ್ಣ ಶಿಕ್ಷಣ ಸಂಸ್ಥೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತೀರಲಿ ಜನರ ಸಂಕಷ್ಟ : ಇಂದು ಬಿಎಸ್ವೈ 8ನೇ ಬಜೆಟ್
ಸಿ.ಡಿ. ಲೇಡಿಯ ಮಾಹಿತಿ ಪೊಲೀಸರಿಗೆ ಲಭ್ಯ : ಯುವತಿಯ ಪತ್ತೆಗೆ ಬಲೆ ಬಿಸಿದ ಪೊಲೀಸರು
ರಾಜ್ಯದಲ್ಲಿ ಕೋವಿಡ್ ಕಾಟಕ್ಕೆ ಒಂದು ವರ್ಷ :ಮಾ. 8ರಂದು ಮೊದಲ ಪ್ರಕರಣ ಬೆಂಗಳೂರಿನಲ್ಲಿ ಪತ್ತೆ
ಬೆಳ್ಳೂಟಿ ಗೇಟ್ ಬಳಿ ನೀಲಗಿರಿ ತೋಪಿನಲ್ಲಿ ಬೆಂಕಿ ಅವಘಡ : ಬೆಂಕಿ ನಂದಿಸಲು ಹರಸಾಹಸ
ಮಂಗಳೂರು ವೈದ್ಯ ಪದ್ಮನಾಭ್ ಕಾಮತ್ ಜನಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ…!
MUST WATCH
ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021
ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ
ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21
ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್
ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ
ಹೊಸ ಸೇರ್ಪಡೆ
ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ “ಸ್ವಯಂ-ಆರೈಕೆ”ಯ ಉಡುಗೊರೆ
ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಕನಸಿನ ಕನ್ಯೆಯು ಬಾಳ ಸಂಗಾತಿಯಾಗಿ ದೊರಕಲಿದ್ದಾಳೆ
ತೀರಲಿ ಜನರ ಸಂಕಷ್ಟ : ಇಂದು ಬಿಎಸ್ವೈ 8ನೇ ಬಜೆಟ್
ಗಡಿ ಕಾವಲಿಗೆ ಉಪಗ್ರಹದ ಬಲ : ಮಾ.28ರಂದು ಇಸ್ರೋದಿಂದ ಗೇಮ್ಚೇಂಜರ್ ಉಪಗ್ರಹ ಉಡಾವಣೆ
ಸಿ.ಡಿ. ಲೇಡಿಯ ಮಾಹಿತಿ ಪೊಲೀಸರಿಗೆ ಲಭ್ಯ : ಯುವತಿಯ ಪತ್ತೆಗೆ ಬಲೆ ಬಿಸಿದ ಪೊಲೀಸರು