ಕೆಕೆಆರ್ ಜೆರ್ಸಿಯಲ್ಲೇ ಐಪಿಎಲ್ ನಿವೃತ್ತಿ: ಆಂಡ್ರೆ ರಸೆಲ್
Team Udayavani, May 4, 2020, 6:41 AM IST
ಹೊಸದಿಲ್ಲಿ: ಐಪಿಎಲ್ ಬಗ್ಗೆ ಅಪಾರ ಒಲವು ಹೊಂದಿರುವವರಲ್ಲಿ ವೆಸ್ಟ್ ಇಂಡೀಸಿನ ಬಿಗ್ ಹಿಟ್ಟಿಂಗ್ ಆಲ್ರೌಂಡರ್ ಆಂಡ್ರೆ ರಸೆಲ್ ಕೂಡ ಒಬ್ಬರು. ಕೋಲ್ಕತಾ ನೈಟ್ರೈಡರ್ ತಂಡದ ಸದಸ್ಯನಾಗಿರುವ ಅವರು ಕೊನೆಯ ತನಕವೂ ಈ ಜೆರ್ಸಿಯಲ್ಲೇ ಇದ್ದು, ಇದರಲ್ಲೇ ವಿದಾಯ ಹೇಳಬೇಕು ಎಂದಿದ್ದಾರೆ.
“ನನ್ನ ಪಾಲಿಗೆ ಐಪಿಎಲ್ ಎಂಬುದೊಂದು ರೋಮಾಂಚಕ ಅನುಭವ. ಯಾವಾಗ ನಾನು ಈಡನ್ ಗಾರ್ಡನ್ಸ್ಗೆ ಬಂದು ಆಡತೊಡಗಿದೆನೋ, ಇದಕ್ಕೆ ಸಾಟಿಯಾದುದು ಬೇರೆ ಯಾವುದೂ ಇಲ್ಲ ಅನಿಸತೊಡಗಿತು’ ಎಂದು ರಸೆಲ್ ಕೆಕೆಆರ್ನ “ನೈಟ್ಸ್ ಅನ್ಪ್ಲಗ್ಡ್’ ಆನ್ಲೈನ್ ಶೋದಲ್ಲಿ ಹೇಳಿದರು.
“ಕೋಲ್ಕತಾ ನನಗೆ ಎರಡನೇ ಮನೆ ಇದ್ದಂತೆ. ನಾನು ಕೆಕೆಆರ್ ತಂಡವನ್ನು ಕೊನೆಯ ತನಕವೂ ಪ್ರೀತಿಸುವೆ. ಕೆಕೆಆರ್ ಜೆರ್ಸಿಯಲ್ಲೇ ಐಪಿಎಲ್ಗೆ ವಿದಾಯ ಹೇಳಬೇಕೆಂದಿದ್ದೇನೆ…’ ಎಂದು ರಸೆಲ್ ಹೇಳಿದರು.