ಅತ್ಯಾಧುನಿಕ ವೆಂಟಿಲೇಟರ್, ಸಾಂದ್ರಕ ಸಿದ್ಧಪಡಿಸಿದೆ ಇಸ್ರೋ
Team Udayavani, May 16, 2021, 7:10 AM IST
ಹೊಸದಿಲ್ಲಿ: ಕೊರೊನಾ ಕಾರಣಕ್ಕೆ ಇಸ್ರೋಕ್ಕೂ ಬಾಹ್ಯಾಕಾಶ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಆಗುತ್ತಿಲ್ಲ. ಹಾಗಂತ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸುಮ್ಮನೆ ಕುಳಿತಿಲ್ಲ. ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಸಂಶೋಧನ ಕೇಂದ್ರದಲ್ಲಿರುವ (ವಿಎಸ್‌ಎಸ್‌ಸಿ) ಇಸ್ರೋ ವಿಜ್ಞಾನಿಗಳು ಅತ್ಯಾಧುನಿಕ ಸ್ವದೇಶಿ ತಂತ್ರಜ್ಞಾನದ ವೆಂಟಿಲೇಟರ್‌ಗಳು, ಆಮ್ಲಜನಕ ಸಾಂದ್ರಕಗಳನ್ನು ಸಿದ್ಧಪಡಿಸಿದ್ದಾರೆ. ಮಾತ್ರವಲ್ಲ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ತಂತ್ರಜ್ಞಾನವನ್ನು ವಿವಿಧ ಉದ್ಯಮಗಳಿಗೆ ಉಚಿತವಾಗಿ ಹಂಚಲು ನಿರ್ಧರಿಸಿದ್ದಾರೆ. ಹೀಗೆಂದು ವಿಎಸ್‌ಎಸ್‌ಸಿ ನಿರ್ದೇಶಕ ಡಾ| ಎಸ್.ಸೋಮನಾಥ್ ತಿಳಿಸಿದ್ದಾರೆ.
ಇಸ್ರೋ ಮೂರು ಮಾದರಿಯ ವೆಂಟಿಲೇಟರ್‌ಗಳನ್ನು ತಯಾರಿಸಿದೆ. ಈ ಅಷ್ಟೂ ಪಕ್ಕಾ ಅತ್ಯಾಧುನಿಕವಾಗಿವೆ. ಮೊದಲನೆಯ ವೆಂಟಿಲೇಟರ್ ದಿನಬಳಕೆಯ ಗುಣಮಟ್ಟವನ್ನು ಹೊಂದಿದೆ. ಎರಡನೆಯದ್ದು ಗಾಳಿ ಕಡಿಮೆ ಪ್ರಮಾಣದಲ್ಲಿದ್ದಾಗಲೂ ಕಾರ್ಯನಿರ್ವಹಿಸಬಲ್ಲ ಕ್ಷಮತೆ ಹೊಂದಿದೆ. ಮೂರನೆಯದ್ದರ ವಿಶೇಷವೆಂದರೆ ಇದರಲ್ಲಿ ವಿದ್ಯುತ್ ಮೋಟಾರ್ ಇಲ್ಲ. ಹಾಗೆಯೇ ಇದು ಕಾರ್ಯನಿರ್ವಹಿಸಲು ವಿದ್ಯುತ್ ಅಗತ್ಯವೇ ಇಲ್ಲ! ಸಾಂದ್ರಗೊಂಡ ಗಾಳಿ, ಇತರ ತಂತ್ರಜ್ಞಾನದ ನೆರವಿನಿಂದ ಉಸಿರಾಟಕ್ಕೆ ನೆರವು ನೀಡುತ್ತದೆ.
ಆಮ್ಲಜನಕ ಸಾಂದ್ರಕ: ಇದೇನು ಹೊಸ ವಿಷಯವಲ್ಲ. ಆದರೆ ಭಾರತ ಪ್ರಸ್ತುತ ವಿದೇಶಗಳಿಂದ ಸಾಂದ್ರಕಗಳನ್ನು ತರಿಸಿಕೊಳ್ಳುತ್ತಿದೆ. ಇದನ್ನು ಮನಗಂಡ ಇಸ್ರೋ ಶ್ವಾಸ್ ಹೆಸರಿನ ಸ್ವದೇಶಿ ತಂತ್ರಜ್ಞಾನಾಧಾರಿತ ಸಾಧನವೊಂದನ್ನು ಸಿದ್ಧಪಡಿಸಿದೆ. ಈ ಸಾಧನ ಗಾಳಿಯಲ್ಲಿರುವ ಸಾರಜನಕವನ್ನು ಹೀರಿಕೊಂಡು ಶೇ.95ರಷ್ಟು ಶುದ್ಧ ಆಮ್ಲಜನಕವನ್ನು ಶರೀರಕ್ಕೆ ಪೂರೈಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರೈತರಿಗೆ ಬಡ್ಡಿ ದರ ಇಳಿಕೆ ಸಿಹಿ: ಶೇ.1.5ರಷ್ಟು ಬಡ್ಡಿ ವಿನಾಯಿತಿ
ದಿಲ್ಲಿಗೆ ಮತ್ತೆ ಕೋವಿಡ್ ಏರಿಕೆ: ಸೋಂಕಿತರಲ್ಲಿ ಶೇ.60 ಮಂದಿ ಆಸ್ಪತ್ರೆಗೆ ದಾಖಲು
ಶೇ.72 ಸಚಿವರ ವಿರುದ್ಧ ಕ್ರಿಮಿನಲ್ ಕೇಸು; ಬಿಹಾರ ಸಂಪುಟದ ಬಗ್ಗೆ ಎಡಿಆರ್ ಅಧ್ಯಯನ ವರದಿ
“ರೋಹಿಂಗ್ಯಾ ವಲಸಿಗರಿಗೆ ಫ್ಲ್ಯಾಟ್ ಕೊಡಲು ನಿರ್ದೇಶಿಸಿಲ್ಲ’
ಉಚಿತ ಕೊಡುಗೆ: ಪಕ್ಷಗಳಿಗೆ ತಡೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್
MUST WATCH
ಹೊಸ ಸೇರ್ಪಡೆ
ಮನೆಬಾಗಿಲಿಗೆ ರೈಲ್ವೆ ಪಾರ್ಸೆಲ್ ತರಲಿದ್ದಾನೆ ಅಂಚೆಯಣ್ಣ
ಬೊಮ್ಮಾಯಿಗೆ ಚೌತಿ ಚಂದ್ರನಂತಾದ ಜನೋತ್ಸವ: 28ರ ಜನೋತ್ಸವ ಮತ್ತೆ ಮುಂದಕ್ಕೆ..
ಕೋಡಿ ಹೊಸಬೆಂಗ್ರೆಯಲ್ಲಿ ಕಡಲ್ಕೊರೆತ : ಮನೆ, ರಸ್ತೆ ಅಪಾಯದಲ್ಲಿ; ತಾತ್ಕಾಲಿಕ ಪರಿಹಾರ
ಎಪಿಕ್ ಕಾರ್ಡ್ಗೆ ಆಧಾರ್ ನಂಬರ್ ಲಿಂಕ್ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ
ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್ ಮೇಲೆ ಪೊಲೀಸ್ ಕಣ್ಣು