ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವ ಚಾಂಪಿಯನ್‌ಶಿಪ್: ಭಾರತಕ್ಕೆ 10 ಗೋಲ್ಡ್
Team Udayavani, Oct 8, 2021, 10:55 PM IST
ಲಿಮಾ (ಪೆರು): ಐಎಸ್‌ಎಸ್‌ಎಫ್ ಜೂನಿಯರ್ ಶೂಟಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ 10ನೇ ಬಂಗಾರ ಗೆದ್ದು ತನ್ನ ಅಗ್ರಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಶುಕ್ರವಾರ 25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್ ಮಿಕ್ಸೆಡ್ ತಂಡ ಸ್ಪರ್ಧೆಯಲ್ಲಿ ರಿದಮ್ ಸಂಗ್ವಾನ್-ವಿಜಯವೀರ್ ಸಿಧು ಚಿನ್ನಕ್ಕೆ ಗುರಿ ಇರಿಸಿದರು.
ಸಂಗ್ವಾನ್-ಸಿಧು ಫೈನಲ್‌ನಲ್ಲಿ ಥಾಯ್ಲೆಂಡ್‌ನ ಕನ್ಯಕೋರ್ನ್ ಹಿರುಂ ಫೊಯೆಮ್-ಶ್ವಕೋನ್ ಟ್ರಿನಿಫಕ್ರೋನ್ ವಿರುದ್ಧ 9-1 ಅಂತರದ ಮೇಲುಗೈ ಸಾಧಿಸಿದರು. ಈ ಸ್ಪರ್ಧೆಯ ಕಂಚಿನ ಪದಕ ಕೂಡ ಭಾರತದ ಪಾಲಾಯಿತು. ತೇಜಸ್ವಿನಿ-ಅನೀಷ್ ತೃತೀಯ ಸ್ಥಾನಿಯಾದರು. ಇವರು ಥಾಯ್ಲೆಂಡ್‌ನ ಮತ್ತೂಂದು ಜೋಡಿ ಚವಿಸಾ ಪದುಕ-ರಾಮ್ ಖಮೆಂಗ್ ವಿರುದ್ಧ ಮೇಲುಗೈ ಸಾಧಿಸಿದರು.
ವನಿತೆಯರ 50 ಮೀ. ರೈಫಲ್ 3 ಪೊಸಿಶನ್‌ನಲ್ಲಿ ಪ್ರಸಿದ್ಧಿ ಮಹಂತ್, ನಿಶ್ಚಲ್ ಮತ್ತು ಆಯುಷಿ ಪೋದ್ದರ್ ತಂಡಕ್ಕೆ ಬೆಳ್ಳಿ ಪದಕ ಒಲಿಯಿತು. ಫೈನಲ್‌ನಲ್ಲಿ ಇವರು ಅಮೆರಿಕನ್ ತಂಡಕ್ಕೆ 43-47 ಅಂತರದಿಂದ ಶರಣಾದರು.
ಇದನ್ನೂ ಓದಿ:ನಿಗದಿತ ಅವಧಿಗೇ ಶಬರಿಮಲೆ ಏರ್‌ಪೋರ್ಟ್ ಪೂರ್ಣ: ಕೇರಳ ಸಿಎಂ
ಭಾರತದ ಖಾತೆಯಲ್ಲೀಗ 10 ಚಿನ್ನ, 9 ಬೆಳ್ಳಿ ಹಾಗೂ 4 ಕಂಚಿನ ಪದಕಗಳಿವೆ. ಅಮೆರಿಕ 6 ಚಿನ್ನ, 8 ಬೆಳ್ಳಿ, 6 ಕಂಚು ಗೆದ್ದು ದ್ವಿತೀಯ ಸ್ಥಾನದಲ್ಲಿ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ
ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು
ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ
ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು
ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್
ಹೊಸ ಸೇರ್ಪಡೆ
ಗುಂಡ್ಲುಪೇಟೆ: ಅಪರಿಚಿತ ವಾಹನ ಢಿಕ್ಕಿಯಾಗಿ ಇಬ್ಬರು ಸಾವು
ತಪ್ಪಿಸಿಕೊಳ್ಳಬಾರದೆಂದು ಮಕ್ಕಳನ್ನು ಸರಪಳಿಯಲ್ಲಿ ಕಟ್ಟಿದ ಮದರಸಾದ ಮೌಲಾನಾ
ಮುಂದುವರೆದ ಮಳೆ: ಶಾಲಾ ಆವರಣಕ್ಕೆ ನುಗ್ಗಿದ ನೀರು, ಮರದ ಕೆಳಗೆ ಪಾಠ
ಆಂಧ್ರಪ್ರದೇಶ: ಸಿಲಿಂಡರ್ ಸ್ಫೋಟ- ಮನೆ ಕುಸಿದು ಬಿದ್ದು 3 ವರ್ಷದ ಮಗು ಸೇರಿ ನಾಲ್ವರು ಸಾವು
ಕನ್ನಡಿಗರಿಗೆ ತೊಂದರೆಯಾದರೆ ಕರ್ನಾಟಕ ಸರ್ಕಾರ ಸಹಿಸಿಕೊಳ್ಳುವುದಿಲ್ಲ: ಸಿಎಂ ಬೊಮ್ಮಾಯಿ