ದಳಪತಿ 67ನೇ ಸಿನಿಮಾಕ್ಕೆ ನಾಯಕಿಯಾಗಿ ತ್ರಿಷಾ ಆಯ್ಕೆ: 14 ವರ್ಷದ ಬಳಿಕ ಒಂದೇ ಸ್ಕ್ರೀನ್ ನಲ್ಲಿ ನಟನೆ
Team Udayavani, Feb 1, 2023, 2:39 PM IST
ಚೆನ್ನೈ: ದಳಪತಿ ವಿಜಯ್ ಅವರ 67ನೇ ಸಿನಿಮಾ ರಿಲೀಸ್ ಗೂ ಮುನ್ನ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದೆ. ಲೋಕೇಶ್ ಕನಕರಾಜ್ ʼಮಾಸ್ಟರ್ʼ ಸಿನಿಮಾದ ಬಳಿಕ ಮತ್ತೆ ವಿಜಯ್ ಅವರೊಂದಿಗೆ ಸಿನಿಮಾ ಮಾಡುತ್ತಿರುವುದರಿಂದ ಅಭಿಮಾನಿಗಳಲ್ಲಿ ಸಿನಿಮಾದ ಬಗ್ಗೆ ಹೈಪ್ ಹೆಚ್ಚಾಗಿದೆ.
ʼವಾರಿಸುʼ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆದ ಬಳಿಕ ದಳಪತಿ ವಿಜಯ್ ಈಗ ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲೋಕೇಶ್ ಕನಕರಾಜ್ – ವಿಜಯ್ ಅವರ ಸಿನಿಮಾಕ್ಕೆ ನಾಯಕಿ ಯಾರಾಗಿರಬಹುದೆನ್ನುವುದರ ಬಗ್ಗೆ ಕುತೂಹಲ ಇತ್ತು. ಇದೀಗ ಸಿನಿಮಾ ತಂಡ ಕುತೂಹಲಕ್ಕೆ ತೆರೆ ಎಳದಿದೆ.
ಈ ಮೊದಲೇ ಹರಿದಾಡಿದ ಗಾಸಿಪ್ ನಿಜವಾಗಿದೆ. ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ಅವರು ದಳಪತಿ ಅವರೊಂದಿಗೆ 14 ವರ್ಷದ ಬಳಿಕ ಮತ್ತೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ. 2008 ರಲ್ಲಿ ʼಕುರುವಿʼ ಎಂಬ ಸಿನಿಮಾದಲ್ಲಿ ತ್ರಿಷಾ ವಿಜಯ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಸಿನಿಮಾ ಅಷ್ಟಾಗಿ ಸದ್ದು ಮಾಡದ ಕಾರಣವೇನೋ ತ್ರಿಷಾ ಹಾಗೂ ವಿಜಯ್ ಮತ್ತೆ ಸ್ಕ್ರೀನ್ ನಲ್ಲಿ ಜೊತೆಯಾಗಿ ನಟಿಸಿಲ್ಲ. ಇದೀಗ ಬಹು ಸಮಯದ ಬಳಿಕ ತ್ರಿಷಾ – ವಿಜಯ್ ನಟಿಸಲಿದ್ದಾರೆ.
ಈ ಬಗ್ಗೆ ಅಧಿಕೃತವಾಗಿ ಚಿತ್ರ ತಂಡ ಪೋಸ್ಟರ್ ರಿಲೀಸ್ ಮಾಡಿ ಸಿನಿಮಾ ತಂಡಕ್ಕೆ ಬರುತ್ತಿರುವ ನಾಯಕಿಗೆ ಸ್ವಾಗತವನ್ನು ಕೋರಿದೆ. ಇತ್ತೀಚೆಗೆ ʼಪೊನ್ನಿಯಿನ್ ಸೆಲ್ವನ್ʼ ತ್ರಿಷಾ ನಟನೆ ಗಮನ ಸೆಳೆದಿತ್ತು.
ದಳಪತಿ ಅವರ ಸಿನಿಮಾದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ನಟಿಸುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಮಾಹಿತಿ ಕೇಳಿ ಬಂದಿಲ್ಲ.
Extremely happy to welcome @trishtrashers mam onboard for #Thalapathy67 ❤️#Thalapathy67Cast #Thalapathy @actorvijay sir @Dir_Lokesh @Jagadishbliss pic.twitter.com/r0zAdCwZ9r
— Seven Screen Studio (@7screenstudio) February 1, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
10 ಕೋಟಿ ಮೌಲ್ಯದ ಕಾರು ಖರೀದಿಸಿದ ಶಾರುಖ್: ಡ್ರೈವ್ ಮಾಡಿಕೊಂಡು ಹೋಗುವ ವಿಡಿಯೋ ವೈರಲ್
ಪ್ರಿಯಾಂಕಾ ಬಾಲಿವುಡ್ ತೊರೆಯಲು ಕರಣ್ ಜೋಹರ್ ಕಾರಣ! ಕಂಗನಾ V/S ಪ್ರಿಯಾಂಕಾ ಚೋಪ್ರಾ
ಆ ದಿನಗಳು.. ಹೃದಯಾಘಾತವಾದ ಕರಾಳ ದಿನಗಳ ಬಗ್ಗೆ ಮೌನ ಮುರಿದ ನಟ ಸುನಿಲ್ ಗ್ರೋವರ್
ಚೇತರಿಕೆಯ ಹಾದಿಯಲ್ಲಿ ಅಮಿತಾಭ್: ಗಾಯದ ಬಳಿಕ ಮೊದಲ ಬಾರಿ ಅಭಿಮಾನಿಗಳ ಮುಂದೆ ಬಂದ ಬಿಗ್ ಬಿ
ಬಾಲಿವುಡ್ ನಟ ಸಿದ್ದಿಖಿಯಿಂದ 100 ಕೋ.ರೂ. ಮಾನನಷ್ಟ ಮೊಕದ್ದಮೆ ದಾಖಲು