ಜಾಲಿ ಹುಡುಗರ ರಹಸ್ಯ ಪಯಣ

Team Udayavani, May 27, 2020, 4:01 AM IST

ram sur joll

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಲ್ಲವೂ ಸ್ಥಗಿತಗೊಂಡಿದ್ದು ಗೊತ್ತೇ ಇದೆ. ಈಗ ಒಂದಷ್ಟು ಸಡಿಲಗೊಂಡಿರುವುದರಿಂದ ಕನ್ನಡ  ಚಿತ್ರರಂಗದಲ್ಲೂ ಕೂಡ ಚಟುವಟಿಕೆಗಳು ಶುರುವಾಗಿವೆ. ಹೌದು, ಹಲವು ಚಿತ್ರಗಳು ತಮ್ಮ ಪೋಸ್ಟ್‌  ಪ್ರೊಡಕ್ಷನ್‌ ಕೆಲಸಗಳನ್ನು ಶುರುಮಾಡಿವೆ. ಆ ನಿಟ್ಟಿನಲ್ಲೀಗ ಕನ್ನಡದಲ್ಲಿ ಹೊಸ ಬಗೆಯ ಥ್ರಿಲ್ಲರ್‌ ಕಥಾಹಂದರ ಕಟ್ಟಿಕೊಟ್ಟಿರುವ “ರಮೇಶ್‌ ಸುರೇಶ್‌ ‘ ಚಿತ್ರ ಕೂಡ ಸದ್ಯಕ್ಕೆ ಚಿತ್ರೀಕರಣ ಮುಗಿಸುವ ಹಂತದಲ್ಲಿದ್ದು, ಇದೀಗ ಡಬ್ಬಿಂಗ್‌ಗೆ ಅಣಿಯಾಗುತ್ತಿದೆ.

“ರಮೇಶ್‌ ಸುರೇಶ್‌ ‘ ಈಗಾಗಲೇ  ಕನ್ನಡದ ಮಟ್ಟಿಗೆ ಗಾಂಧಿನಗರದಲ್ಲಿ ಸುದ್ದಿಯಾಗಿರುವ ಹೆಸರಿದು. ಈ ಚಿತ್ರದ ಮೂಲಕ ಬಹುತೇಕ ಹೊಸಬರೇ ಗಾಂಧಿನಗರವನ್ನು ಸ್ಪರ್ಶಿಸಿದ್ದಾರೆ. ನಾಗರಾಜ್‌ ಮಲ್ಲಿಗೇನಹಳ್ಳಿ ಮತ್ತು  ರಘುರಾಜ್‌ ಈ ಚಿತ್ರದ ನಿರ್ದೇಶಕರು. ಇವರಿಗೆ ಇದು ಮೊದಲ ಅನುಭವ. ಇನ್ನು,  ಬೆನಕ ಮತ್ತು ಯಶ್‌ರಾಜ್‌ ಇವರಿಬ್ಬರಿಗೂ ಇದು ಮೊದಲ ಸಿನಿಮಾ. ಈ ಪ್ರತಿಭೆಗಳ ಕಥೆ ನಂಬಿಕೊಂಡು ಆರ್‌. ಕೆ.ಟಾಕೀಸ್‌ ಬ್ಯಾನರ್‌ನಡಿ ಕೃಷ್ಣ ಹಾಗೂ  ಶಂಕರ್‌ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಸದ್ಯಕ್ಕೆ ಒಂದು ಹಾಡು, ಫೈಟ್ಸ್‌ ಬಾಕಿ ಉಳಿಸಿಕೊಂಡಿರುವ ಚಿತ್ರತಂಡ, ಲಾಕ್‌ಡೌನ್‌ ನಂತರ ಅನುಮತಿ ಸಿಕ್ಕರೆ ಅದನ್ನು ಪೂರೈಸಿ, ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದೆ.  ಒಂದು ಹಂತದ ಸಂಕಲನ ಕೆಲಸ ಮುಗಿದಿದ್ದು, ಡಬ್ಬಿಂಗ್‌ಗೆ ರೆಡಿಯಾಗಿದೆ. “ರಮೇಶ್‌ ಸುರೇಶ್‌ ‘ ಅಂದಾಕ್ಷಣ, ಟಿವಿಯಲ್ಲಿ ಜನಪ್ರಿಯಗೊಂಡ ಚಾಕೋಲೇಟ್‌ ಜಾಹಿರಾತುವೊಂದು ನೆನಪಾಗುತ್ತೆ. ಹಾಯ್‌ ರಮೇಶ್‌, ಹಾಯ್‌ ಸುರೇಶ್  ದು  ಹೇಳುವ ಅವಳಿ-ಜವಳಿ ಸಹೋದರರ  ನೆನಪಾಗುತ್ತೆ.

ಈ ಚಿತ್ರದಲ್ಲೂ ಇಬ್ಬರ ಹೆಸರು ಕೂಡ “ರಮೇಶ್‌ ಸುರೇಶ್‌ ‘. ಇಬ್ಬರೂ ಆ ಹೆಸರ ಮೂಲಕ ಮಜ ಕೊಡಲು ರೆಡಿಯಾಗಿದ್ದಾರೆ. ಇದೊಂದು ಪಕ್ಕಾ ಹಾಸ್ಯಮಯ ಸಿನಿಮಾ. ಇಬ್ಬರು ಹೀರೋಗಳ ಸುತ್ತವೇ ಸಾಗುವ ಕಥೆಯಲ್ಲಿ ಹಾಸ್ಯದ ಜೊತೆ ಗಂಭೀರ ವಿಷ ಯವೂ ಇದೆ. ಚಿತ್ರದಲ್ಲಿ ತೆಲುಗು ನಟ ಸತ್ಯಪ್ರಕಾಶ್‌, ಚಂದನಾ ಸೇಗು, ಸಾಧುಕೋಕಿಲ, ಮೋಹನ್‌ ಜುನೇಜ ಇತರರು ಇದ್ದಾರೆ.

ಮಾಸ್ಟರ್‌ ರಕ್ಷಿತ್‌, ವನಿತಾ, ನಿರ್ಮಾಪಕ ಕೃಷ್ಣ ಹಾಗು  ಶಂಕರ್‌ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಇಲ್ಲೊಂದು ವಿಶೇಷತೆ ಇದೆ. ಅದೇನೆಂದರೆ, ಕತ್ತಲೆ ಗುಡ್ಡದ ಗೂಢಚಾರಿಗಳು ಎಂಬ ಅಡಿಬರಹವಿದೆ. ಅಲ್ಲೇ ಸಸ್ಪೆನ್ಸ್‌ ಕೂಡ ಇದೆ. ಒಟ್ಟಾರೆ ಇಬ್ಬರು ಸೋಮಾರಿ ಹುಡುಗರ ಲೈಫ‌ಲ್ಲಿ ಒಂದು ಘಟನೆ  ನಡೆಯುತ್ತೆ. ಅದೇನೆಂಬುದೇ ಚಿತ್ರದ ಹೈಲೈಟ್‌.

ಟಾಪ್ ನ್ಯೂಸ್

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

ramarasa kannada movie

Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್‌ ಟೀಂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.