ಮುಠ್ಠಾಳ ಎಂದು ಕೂಗಿದರೆ ಬಹುಮಾನ ಉಂಟು!

Team Udayavani, Jan 19, 2021, 3:54 PM IST

ಮುಠ್ಠಾಳ ಎಂದು ಕೂಗಿದರೆ ಬಹುಮಾನ ಉಂಟು!

1959-60ರ ಸಮಯದಲ್ಲಿ ಅಮೆರಿಕ ಮತ್ತು ಸೋವಿಯೆಟ್‌ ಒಕ್ಕೂಟಗಳ ನಡುವೆ ಶೀತಲ ಸಮರ ನಡೆಯುತ್ತಿತ್ತು. ಅಮೆರಿಕ ಏನೇ
ಮಾಡಿದರೂ ಅದನ್ನು ಹಂಗಿಸಿ ಅಪಹಾಸ್ಯ ಮಾಡಬೇಕೆಂದು ಸೋವಿಯೆಟ್‌ ಒಕ್ಕೂಟ ಕಾಯುತ್ತಿತ್ತು. ಈ ಕಮ್ಯುನಿಸ್ಟ್ ಸರಕಾರದ ಎಲ್ಲ ಕೆಲಸಗಳನ್ನೂ ಭಂಗಿಸಿ ಆರತಿ ಎತ್ತಬೇಕೆಂದು ಅಮೆರಿಕ ಹೊಂಚುಹಾಕುತ್ತಿತ್ತು. ಅದೇ ಸಮಯದಲ್ಲಿ ವಿಶ್ವಸಂಸ್ಥೆಯಲ್ಲಿ ವಾರ್ಸಿಕ ಸಭೆ ಕರೆಯಲಾಯಿತು. ಅಮೆರಿಕ ಮತ್ತು ಸೋವಿಯೆಟ್‌ ರಾಷ್ಟ್ರ ಗಳ ಅಧ್ಯಕ್ಷರೂ ಹಾಜರಿದ್ದರು. ಸಭೆಯಲ್ಲಿ ಮಾತಾಡುವ ಮೊದಲ ಅವಕಾಶ ಸಿಕ್ಕಿದ್ದು ಆಗಿನ ಅಮೆರಿಕನ್‌ ಅಧ್ಯಕ್ಷ ಐಸೆನ್‌ ಹೋವೆರ್‌ಗೆ. ಆತ “ಅಮೆರಿಕ ಮುಕ್ತ ಸ್ವಾತಂತ್ರ್ಯವನ್ನು ಗೌರವಿಸುವ ರಾಷ್ಟ್ರ. ಒಂದು ವೇಳೆ ಯಾರಾದರೂ ಟೈಮ್ಸ್ ಸ್ಕ್ವೇರ್‌ನಲ್ಲಿ ನಿಂತು ಅಮೆರಿಕದ ಅಧ್ಯಕ್ಷ ಮುಠ್ಠಾಳ ಎಂದು ಕೂಗಿದರೂ ಅವನನ್ನು ಬಂಧಿಸಿ ವಿಚಾರಣೆಗೊಳಪಡಿಸುವ ಸಾಧ್ಯತೆ ತೀರಾ ಕಡಿಮೆ. ಅಷ್ಟೇಕೆ, ಇಂತಹ ಉದ್ಧಟತನ ಪ್ರದರ್ಶಿಸಿದ ಮೇಲೆ ಅವನಿಗೆ ಒಂದಷ್ಟು ಬೆಂಬಲಿಗರು ಕೂಡ ಹುಟ್ಟಿಕೊಂಡಾರು’ ಎಂದ. ಅಮೆರಿಕದಲ್ಲಿ ಎಷ್ಟೊಂದು ವ್ಯಕ್ತಿಸ್ವಾತಂತ್ರ್ಯ ಇದೆ, ಪ್ರಜಾಪ್ರಭುತ್ವವನ್ನು ತನ್ನ ದೇಶ ಎಷ್ಟು ಗೌರವಿಸುತ್ತಿದೆ ಎನ್ನುವುದನ್ನು ಹೇಳಿ
ಪರೋಕ್ಷವಾಗಿ ಸೋವಿಯೆಟ್‌ ಒಕ್ಕೂಟದ ಅಧ್ಯಕ್ಷನಿಗೆ ಇರಿಸುಮುರಿಸು ಉಂಟು ಮಾಡಬೇಕು ಎನ್ನುವುದೇ ಐಸೆನ್‌ ಹೋವರನ ಉದ್ದೇಶವಾಗಿತ್ತು.

ಅವನ ಭಾಷಣದ ಬಳಿಕ ಮಾತಾಡಬೇಕಿದ್ದವನು ಸೋವಿಯೆಟ್‌ ಒಕ್ಕೂಟದ ಅಧ್ಯಕ್ಷ ಕ್ರುಶ್ಚೇವ್‌. ಆತ ಎದ್ದು ನಿಂತು ಹೇಳಿದ: “ನನಗೆ ವ್ಯಕ್ತಿ ಸ್ವಾತಂತ್ರ್ಯ – ಪ್ರಜಾಪ್ರಭುತ್ವ ಇವುಗಳ ಬಗ್ಗೆ ಎಲ್ಲ ಗೊತ್ತಿಲ್ಲ. ಆದರೆ ಒಂದಂತೂ ನಿಜ. ಯಾವುದಾದರೂ ವ್ಯಕ್ತಿ ನಮ್ಮ ದೇಶದ ರೆಡ್‌ ಸ್ಕ್ವೇರ್‌ನಲ್ಲಿ ನಿಂತು, ಅಮೆರಿಕನ್‌ ಅಧ್ಯಕ್ಷ ಮುಠ್ಠಾಳ ಎಂದು ಕೂಗಿದರೆ, ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸುವ ಮಾತು ಹಾಗಿರಲಿ, ಅವನಿಗೆ ರಾಷ್ಟ್ರದ ಗೌರವ ಪದಕ ಕೂಡ ಸಿಗುವ ಸಾಧ್ಯತೆ ಉಂಟು!

– ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.