ನ್ಯಾಯಾಧೀಶರ ಹತ್ಯೆ ಖಂಡನೀಯ


Team Udayavani, Jul 31, 2021, 6:30 AM IST

ನ್ಯಾಯಾಧೀಶರ ಹತ್ಯೆ ಖಂಡನೀಯ

ನ್ಯಾಯಾಲಯದಲ್ಲಿ ಅನುಕೂಲವಾಗುವಂತೆ ತೀರ್ಪು ಬಂದಿಲ್ಲ ಎಂಬ ಅಸಮಾಧಾನ ಅತಿರೇಕಕ್ಕೆ ಹೋದರೆ, ಪರಿಣಾಮ ಏನಾಗುತ್ತದೆ ಎನ್ನುವುದಕ್ಕೆ ಝಾರ್ಖಂಡ್‌ನ‌ ಧನ್‌ಬಾದ್‌ ಜಿಲ್ಲಾ ನ್ಯಾಯಾಧೀಶ ಉತ್ತಮ್‌ ಆನಂದ್‌ ಹತ್ಯೆ ಪ್ರಕರಣದಿಂದ ವೇದ್ಯವಾಗುತ್ತದೆ. ಅದಕ್ಕೆ ಪೂರಕವಾಗಿ ಉತ್ತರ ಪ್ರದೇಶದ ಫ‌ತೇಪುರ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್‌ ಕೋರ್ಟ್‌ ನಲ್ಲಿ ಪೋಸ್ಕೋ ಪ್ರಕರಣಗಳ ಕೋರ್ಟ್‌ನ ನ್ಯಾಯಾಧೀಶ ಮೊಹಮ್ಮದ್‌ ಅಹ್ಮದ್‌ ಖಾನ್‌ ಪ್ರಯಾಣಿಸುತ್ತಿದ್ದ ಕಾರ್‌ಗೆ ಟೊಯೊಟಾ ಇನೋವಾವನ್ನು ಹಲವು ಬಾರಿ ಢಿಕ್ಕಿ ಹೊಡೆಸಿ ಕೊಲ್ಲುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಾರ್ವಜನಿಕರಿಗೆ ಇನ್ನೂ ವಿಶ್ವಾಸ ಉಳಿದಿದೆ. ಅಲ್ಲಿ ಕೆಲಸ ಮಾಡುವ ನ್ಯಾಯಾಧೀಶರು ಮತ್ತು ಸಂಬಂಧಿತ ಅಧಿಕಾರಿಗಳ ಮೇಲೆ ಹಲ್ಲೆ, ಹತ್ಯೆ ಮಾಡುವುದು ತೀರಾ ಖಂಡನಾರ್ಹವೇ ಆಗಿದೆ. ಸದ್ಯ ಬೆಳಕಿಗೆ ಬಂದು ಸುದ್ದಿಯಾಗಿರುವುದು ಧನ್‌ಬಾದ್‌ ಮತ್ತು ಫ‌ತೇಪುರ್‌ನ ಘಟನೆಗಳು ಉತ್ತಮ ವ್ಯವಸ್ಥೆಗೆ ಹೇಳಿಸಿದ್ದಂತೂ ಅಲ್ಲ. ಇಂಥ ಕಿಡಿಗೇಡಿ ಕೃತ್ಯಗಳನ್ನು ಮರುಕಳಿಸದಂತೆ ಮಾಡಲು ಆಯಾ ರಾಜ್ಯ ಸರಕಾರಗಳು ಮತ್ತು ನ್ಯಾಯಾಂಗ ವ್ಯವಸ್ಥೆ ಕ್ಷಿಪ್ರವಾಗಿ ಕ್ರಮ ಕೈಗೊಳ್ಳಬೇಕಾಗಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಸ್ವಯಂ ಪ್ರೇರಿತರಾಗಿ ಈ ಘಟನೆಯನ್ನು ವಿಚಾರಣೆ ನಡೆಸಲು ತೀರ್ಮಾನಿಸಿದ್ದು ಸ್ವಾಗತಾರ್ಹವೇ. ಒಂದು ವಾರದ ಒಳಗಾಗಿ ಘಟನೆಯ ಬಗ್ಗೆ ವರದಿ ಸಲ್ಲಿಸಲು ಝಾರ್ಖಂಡ್‌ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ. ವರದಿ ಪರಿಶೀಲನೆ ಬಳಿಕ ವಿಚಾರಣೆ ನಡೆಸಲಾಗುತ್ತದೆ ಎಂದು ಮುಖ್ಯ ನ್ಯಾಯ ಮೂರ್ತಿಗಳು ಹೇಳಿದ್ದಾರೆ.

ಯಾವ ಕಾರಣಕ್ಕಾಗಿ ನ್ಯಾಯಾಧೀಶ ಉತ್ತಮ್‌ ಆನಂದ್‌ ಹತ್ಯೆ ನಡೆದಿದೆ ಎನ್ನುವುದು ಖಚಿತವಾಗಿಲ್ಲ. ಇಬ್ಬರನ್ನು ಬಂಧಿಸಲಾಗಿದ್ದರೂ ಅವರೇ ಈ ಕೃತ್ಯವೆಸಗಿದ್ದಾರೆಯೋ ಇಲ್ಲವೋ ಎನ್ನುವುದು ಸದ್ಯಕ್ಕೆ ನಿಗೂಢವೇ ಆಗಿದೆ. ಹತ್ಯೆಗೀಡಾಗಿರುವ ನ್ಯಾಯಾಧೀಶರು ಹಾಲಿ ತಿಂಗಳಲ್ಲಿ ಇದುವರೆಗೆ 36 ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ.

ಆ ಪೈಕಿ 34 ಜಾಮೀನು ಅಥವಾ ನಿರೀಕ್ಷಣ ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳಾಗಿದ್ದವು. ಅದರಲ್ಲಿ ಕೆಲವು ಕಲ್ಲಿದ್ದಲು ಕಳ್ಳಸಾಗಣೆಯ ಪ್ರಕರಣ, ಕೊಲೆಯ 6 ಪ್ರಕರಣಗಳಿದ್ದವು. ಝಾರ್ಖಂಡ್‌ನ‌ ಶಾಸಕರೊಬ್ಬರ ನಿಕಟವರ್ತಿಯೊಬ್ಬರ ಕೊಲೆ ಪ್ರಕರಣ ವಿಚಾರಣೆಯನ್ನೂ ಅವರು ನಡೆಸಿದ್ದರು.

ಫ‌ತೇಪುರ ಜಿಲ್ಲಾ ನ್ಯಾಯಾಧೀಶ ಮೊಹಮ್ಮದ್‌ ಅಹ್ಮದ್‌ ಖಾನ್‌ ಹತ್ಯೆ ಯತ್ನ ಕೂಡ ಕಳವಳಕಾರಿ. ಅವರು ದೂರಿನಲ್ಲಿ ಉಲ್ಲೇಖೀಸಿದ ಪ್ರಕಾರ 2020ರ ಡಿಸೆಂಬರ್‌ನಲ್ಲಿ ಯುವಕನಿಗೆ ಜಾಮೀನು ನೀಡದೇ ಇದ್ದ ಕಾರಣಕ್ಕೆ ಬೆದರಿಕೆಯ ಕರೆಗಳೂ ಬರುತ್ತಿವೆ ಎಂದು ಹೇಳಿದ್ದರು. ತಮಗೆ ಅನುಕೂಲವಾಗಿ ತೀರ್ಪು ನೀಡಿಲ್ಲ ಎಂಬ ಕಾರಣಕ್ಕೆ ಸ್ಥಳೀಯ ಕೋರ್ಟ್‌ ನ್ಯಾಯಾಧೀಶರನ್ನು ಕೊಲ್ಲುವವರೆಗೆ ಹೋಗುತ್ತಾರೆ ಎಂದರೆ ಅದಕ್ಕೆ ಕ್ಷಿಪ್ರಾತಿ ಕ್ಷಿಪ್ರವಾಗಿ ಪೂರ್ಣ ವಿರಾಮ ಹಾಕಲೇ ಬೇಕು.
ನ್ಯಾಯ ದೇವತೆಯ ಪ್ರತಿನಿಧಿ ಎಂದರೆ ನ್ಯಾಯಾಧೀಶರು ಎಂಬುದು ನಮ್ಮ ದೇಶದಲ್ಲಿನ ನಂಬಿಕೆ. ಅಂಥ ನಂಬಿಕೆಯ ಮೇಲೆಯೇ ಘಾಸಿಗೊಳಿಸುವಂಥ 2 ಘಟನೆಗಳು ಸಂಭವಿಸಿವೆ. ಅದನ್ನು ಎಸಗಿದವರು ಕೂಡಲೇ ಕಾನೂನಿನ ಅನ್ವಯ ಶಿಕ್ಷೆಗೆ ಒಳಗಾಗಲಿ ಎನ್ನುವುದೇ ಆಶಯ. ಹಾಗೆಯೇ ನ್ಯಾಯ ಸ್ಥಾನದಲ್ಲಿರುವವರಿಗೆ ಗರಿಷ್ಠ ಮಟ್ಟದ ಭದ್ರತೆ ಕೊಡಬೇಕಾದದ್ದೂ ಆಡಳಿತದಲ್ಲಿರುವವರ ಜವಾಬ್ದಾರಿ ಕೂಡ.

ಟಾಪ್ ನ್ಯೂಸ್

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

14-editorial

Campaigns: ಪ್ರಚಾರದಲ್ಲಿ ದ್ವೇಷ ಭಾಷಣ: ಸ್ವಯಂ ನಿಯಂತ್ರಣ ಅಗತ್ಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.