ಕೆ.ಎಲ್. ರಾಹುಲ್ ತಾತ್ಕಾಲಿಕ ಕೀಪರ್: ಪಾರ್ಥಿವ್ ಪಟೇಲ್
Team Udayavani, May 21, 2020, 6:06 AM IST
ಹೊಸದಿಲ್ಲಿ: ಟೀಮ್ ಇಂಡಿಯಾದ ವಿಕೆಟ್ ಕೀಪಿಂಗ್ ಜವಾಬ್ದಾರಿಗೆ ಕೆ.ಎಲ್. ರಾಹುಲ್ ಕೇವಲ ತಾತ್ಕಾಲಿಕ ಪರಿಹಾರವಷ್ಟೇ ಎಂದು ಪಾರ್ಥಿವ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಕೀಪಿಂಗ್ ಜವಾಬ್ದಾರಿ ಅತ್ಯುತ್ತಮವಾಗಿ ನಿಭಾಯಿಸಬಲ್ಲರು. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ರಿಷಭ್ ಪಂತ್ ಅವರಲ್ಲಿ ದೀರ್ಘ ಅವಧಿಗೆ ಕೀಪಿಂಗ್ ಸೇವೆ ನೀಡುವ ಸಾಮರ್ಥ್ಯವಿದೆ. ಪಂತ್ ಅವರನ್ನು ಭೇಟಿಯಾದಾಗಲೆಲ್ಲ ಅವರ ಬಳಿ ಇದನ್ನೇ ಹೇಳಿದ್ದೇನೆ. ನಿನ್ನ ಬಳಿ ಪ್ರತಿಭೆ ಇರುವ ಸಲುವಾಗಿಯೇ ಜನರು ಮಾತನಾಡುತ್ತಿದ್ದಾರೆ. ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಕೆಲವೊಮ್ಮೆ ಕಳೆದು ಹೋಗಿರುವ ಲಯವನ್ನು ಮರಳಿ ಪಡೆಯಲು ದೇಶಿ ಟೂರ್ನಿ ಗಳಲ್ಲಿ ಆಡಬೇಕು. ನಿನ್ನ ಜಾಗದಲ್ಲಿ ನಾನಿದ್ದರೂ ಕೂಡ ಒಂದೆರಡು ವರ್ಷ ದೇಶಿ ಕ್ರಿಕೆಟ್ ಆಡಿ ಲಯಕ್ಕೆ ಮರಳುತ್ತಿದ್ದೆ ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಪಾರ್ಥಿವ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಟೈಟಾನ್ಸ್-ರಾಯಲ್ಸ್; ಐಪಿಎಲ್ ಟೈಟಲ್ಗೆ ಬಿಗ್ ಫೈಟ್
ಮಹಿಳಾ ಟಿ20 ಚಾಲೆಂಜ್: ಸೂಪರ್ ನೋವಾಸ್ಗೆ ಪ್ರಶಸ್ತಿ
ಫೈನಲ್ ಮೊದಲು ಸಮಾರೋಪ ಸಮಾರಂಭ; ರಣವೀರ್ ಸಿಂಗ್, ಎ.ಆರ್, ರೆಹಮಾನ್ರಿಂದ ಕಾರ್ಯಕ್ರಮ
ಏಷ್ಯಾ ಕಪ್ ಹಾಕಿ: ಜಪಾನ್ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡ ಭಾರತ
ಫೈನಲ್ ಪ್ರವೇಶದ ಖುಷಿಯಲ್ಲಿ ಪುಟ್ಟ ಅಭಿಮಾನಿಗೆ ಜೆರ್ಸಿ ಗಿಫ್ಟ್ ನೀಡಿದ ಟ್ರೆಂಟ್ ಬೌಲ್ಟ್