ಲಾಕ್‌ಡೌನ್: ಕಬಡ್ಡಿ ಸ್ಟಾರ್ ಅನೂಪ್ ಪೊಲೀಸ್ ಡ್ಯೂಟಿ
Team Udayavani, May 29, 2020, 6:51 AM IST
ಚಂಡೀಗಢ: ಭಾರತಕ್ಕೆ 2016ರ ಕಬಡ್ಡಿ ವಿಶ್ವಕಪ್ ತಂದಿತ್ತ ಕಪ್ತಾನ ಅನೂಪ್ ಕುಮಾರ್ ಲಾಕ್‌ಡೌನ್ ಸಮಯದಲ್ಲಿ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿಭಾಯಿಸುತ್ತ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ಅವರು ಹರ್ಯಾಣ ಪೊಲೀಸ್ ವಿಭಾಗದಲ್ಲಿ ಅಧಿಕಾರಿಯಾಗಿದ್ದು, ರೆವಾರಿ ಎಂಬಲ್ಲಿ ಕೆಲಸ ಮಾಡುತ್ತಿದ್ದಾರೆ.
“ಸದ್ಯ ನನಗೆ ರೆವಾರಿಯಲ್ಲಿ ಪೋಸ್ಟಿಂಗ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಕೋವಿಡ್-19 ಕುರಿತು ಜನಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದೇನೆ. ಸರಕಾರದ ಹಾಗೂ ಆರೋಗ್ಯ ಇಲಾಖೆಯ ನಿಯಮವನ್ನು ಪಾಲಿಸಿ, ದಯವಿಟ್ಟು ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಕೋವಿಡ್-19 ದೂರ ಮಾಡಲು ಇದೊಂದೇ ದಾರಿ…’ ಎಂದು ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು “ಬಿಯಾಂಡ್ ದಿ ಮ್ಯಾಟ್’ ಕಾರ್ಯಕ್ರಮದ ವೇಳೆ ಅನೂಪ್ ಕುಮಾರ್ ಹೇಳಿದರು.