Udayavni Special

ಸಂಪುಟ ವಿಸ್ತರಣೆ ಜ.17, 18ಕ್ಕೆ?

Team Udayavani, Jan 8, 2020, 5:58 AM IST

14

ಬೆಂಗಳೂರು: ಸ್ವಿಟ್ಜರ್‌ಲ್ಯಾಂಡ್‌ನ‌ ದಾವೋಸ್‌ನಲ್ಲಿ ಜ.20ರಿಂದ 24ರವರೆಗೆ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪಾಲ್ಗೊಳ್ಳುವ ಬಗ್ಗೆ ಶನಿವಾರ ಅಂತಿಮವಾಗಲಿದ್ದು, ಅದರ ಮೇಲೆ ಸಂಪುಟ ವಿಸ್ತರಣೆ ಪ್ರಕ್ರಿಯೆ ನಿರ್ಧಾರವಾಗಲಿದೆ.

ಸಂಕ್ರಾಂತಿ ಹಬ್ಬದ ರಾತ್ರಿ ಇಲ್ಲವೇ ಜ.16ಕ್ಕೆ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚಿಸಿ ಸಂಪುಟ ಪುನಾರಚನೆ ಇಲ್ಲವೇ ವಿಸ್ತರಣೆಗೆ ಒಪ್ಪಿಗೆ ಪಡೆಯುವ ಚಿಂತನೆಯಲ್ಲಿ ಮುಖ್ಯಮಂತ್ರಿಗಳಿದ್ದಾರೆ. ಒಂದೊಮ್ಮೆ ವರಿಷ್ಠರನ್ನು ಭೇಟಿಯಾಗಿ ಒಪ್ಪಿಗೆ ಪಡೆದರೆ ಜ.17 ಇಲ್ಲವೇ 18ರಂದು ನೂತನ ಸಚಿವರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ. ಜ.19ರಂದು ದಾವೋಸ್‌ ಪ್ರವಾಸ
ಕೈಗೊಂಡರೆ ಜ.23ರ ಬಳಿಕ ಖಾತೆ ಹಂಚಿಕೆಯಾಗುವ ಸಂಭವವಿದೆ ಎಂದು ಮೂಲಗಳು ಹೇಳಿವೆ.

ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ನಡೆದರೆ ಸಚಿವ ಸ್ಥಾನದ ಆಕಾಂಕ್ಷಿಗಳು ಅಸಮಾಧಾನ ಹೊರಹಾಕುವ ಸಾಧ್ಯತೆ ಇದೆ. ಹಾಗಾಗಿ, ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ಮುಗಿಸಿ ವಿದೇಶ ಪ್ರವಾಸ ಕೈಗೊಂಡರೆ ಸ್ಥಾನ ವಂಚಿತರ ಅಸಮಾಧಾನವೂ ತಕ್ಕ ಮಟ್ಟಿಗೆ ಶಮನವಾದಂತಾಗಲಿದೆ. ವಿದೇಶ ಪ್ರವಾಸದಿಂದ ಹಿಂತಿರುಗಿದ ಬಳಿಕ ಎಲ್ಲರನ್ನೂ ಸಮಾಧಾನಪಡಿಸಿ ಖಾತೆ ಹಂಚಿಕೆ ಪ್ರಕ್ರಿಯೆ ಸುಗಮಗೊಳಿಸಬಹುದು ಎಂಬ ಲೆಕ್ಕಾಚಾರವೂ ಇದೆ ಎನ್ನಲಾಗಿದೆ. ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಸಭೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಆಹ್ವಾನವಿದೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರು ಖ್ಯಾತಿ ಪಡೆದಿದ್ದು, ರಾಜ್ಯವನ್ನು ವಾರ್ಷಿಕ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳು ಪ್ರತಿನಿಧಿಸಬೇಕು ಎಂಬುದು ಕೇಂದ್ರ ಸರ್ಕಾರದ ಆಶಯವಾಗಿದೆ. ಆದರೆ, ವಿದೇಶ ಪ್ರವಾಸಕ್ಕೆ ಯಡಿಯೂರಪ್ಪ ಅವರು ಹೆಚ್ಚಿನ ಆಸಕ್ತಿ ತೋರಿಲ್ಲ. ದಾವೋಸ್‌ ಪ್ರವಾಸ ಕೈಗೊಳ್ಳುವ ಬಗ್ಗೆ ಶನಿವಾರ ನಿರ್ಧಾರ ಅಂತಿಮವಾಗಲಿದೆ. ಮುಖ್ಯಮಂತ್ರಿಗಳ ನಿಲುವಿನ ಮೇಲೆ ಸಂಪುಟ ವಿಸ್ತರಣೆ ನಿರ್ಧಾರವಾಗಲಿದೆ ಎನ್ನಲಾಗಿದೆ.

ಮುಖ್ಯಮಂತ್ರಿಗಳು ದಾವೋಸ್‌ ಪ್ರವಾಸ ಕೈಗೊಳ್ಳುವುದು ಖಚಿತವಾದರೆ ಜ.19ರಿಂದ 23ರವರೆಗೆ ಮಾತ್ರ ಪ್ರವಾಸ ಕೈಗೊಳ್ಳಲಿದ್ದಾರೆ. ಇದಕ್ಕೂ ಮೊದಲೇ ವರಿಷ್ಠರ ಭೇಟಿಗೆ ಅವಕಾಶ ಸಿಗುವುದೇ ಎಂಬುದರ ಮೇಲೆ ಸಂಪುಟ ವಿಸ್ತರಣೆ ನಿರ್ಧಾರವಾಗಲಿದೆ. ಜ.18ರಂದು ಕೇಂದ್ರ ಗೃಹ ಸಚಿವರಾದ
ಅಮಿತ್‌ ಶಾ ಅವರು ಹುಬ್ಬಳ್ಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಅದಕ್ಕೂ ಮೊದಲೇ ಯಡಿಯೂರಪ್ಪ ಅವರು ವರಿಷ್ಠರನ್ನು ಭೇಟಿಯಾಗಿ ಚರ್ಚಿಸಿ ಒಪ್ಪಿಗೆ ಪಡೆಯಬೇಕಿದೆ. ಫೆ.17ರಿಂದ 21ರವರೆಗೆ ವಿಧಾನಮಂಡಲದ ಜಂಟಿ ಅಧಿವೇಶನ ನಡೆಯಲಿದ್ದು, ಅದಕ್ಕೂ ಮೊದಲು ಸಚಿವರಾಗಬೇಕು ಎಂಬುದು ನೂತನ ಶಾಸಕರ ಆಗ್ರಹ. ಹಾಗಾಗಿ, ವರಿಷ್ಠರ ಒಪ್ಪಿಗೆ, ಯಡಿಯೂರಪ್ಪ ಅವರ ನಿಲುವಿನ ಮೇಲೆ ಸಂಪುಟ ವಿಸ್ತರಣೆ ನಿರ್ಧಾರವಾಗಲಿದೆ.

ಟಾಪ್ ನ್ಯೂಸ್

ಕೋವಿಡ್, ಪ್ರವಾಹವೇ ಹೊಸ ಸಂಪುಟದ ಮುಂದಿರುವ ಸವಾಲು

ಕೋವಿಡ್, ಪ್ರವಾಹವೇ ಹೊಸ ಸಂಪುಟದ ಮುಂದಿರುವ ಸವಾಲು

ಅಡುಗೆ ಉಪ್ಪಿನಲ್ಲಿದೆ ಸೂಕ್ಷ್ಮ ಪ್ಲಾಸ್ಟಿಕ್‌: ಮೂರು ಸಂಸ್ಥೆಗಳ ಅಧ್ಯಯನದಿಂದ ದೃಢ

ಅಡುಗೆ ಉಪ್ಪಿನಲ್ಲಿದೆ ಸೂಕ್ಷ್ಮ ಪ್ಲಾಸ್ಟಿಕ್‌: ಮೂರು ಸಂಸ್ಥೆಗಳ ಅಧ್ಯಯನದಿಂದ ದೃಢ

ಪಿಎಕೆ ಲೀಗ್‌ನಲ್ಲಿ ಆಡಲ್ಲವೆಂದ ಮಾಂಟಿ ಪನೇಸರ್‌

ಪಿಎಕೆ ಲೀಗ್‌ನಲ್ಲಿ ಆಡಲ್ಲವೆಂದ ಮಾಂಟಿ ಪನೇಸರ್‌

ಉಡುಪಿ : ಆ. 16 ರವರೆಗೆ ನೈಟ್ ಕರ್ಫ್ಯೂ ವಿಸ್ತರಣೆ : ಜಿಲ್ಲಾಧಿಕಾರಿ ಜಿ.ಜಗದೀಶ್  ಆದೇಶ 

ಉಡುಪಿ : ಆ. 16 ರವರೆಗೆ ನೈಟ್ ಕರ್ಫ್ಯೂ ವಿಸ್ತರಣೆ : ಜಿಲ್ಲಾಧಿಕಾರಿ ಜಿ.ಜಗದೀಶ್  ಆದೇಶ 

ರಾಜ್ಯಪಾಲರಿಗೆ ಕೈದಿಗಳ ಬಿಡುಗಡೆ ಅಧಿಕಾರ: ಸುಪ್ರೀಂಕೋರ್ಟ್‌

ರಾಜ್ಯಪಾಲರಿಗೆ ಕೈದಿಗಳ ಬಿಡುಗಡೆ ಅಧಿಕಾರ: ಸುಪ್ರೀಂಕೋರ್ಟ್‌

ಮನೆಯೊಳಗೆ ಅಕ್ರಮ ಪ್ರವೇಶಿಸಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಸಾರ್ವಜನಿಕರಿಂದ ಧರ್ಮದೇಟು

ಮನೆಯೊಳಗೆ ಅಕ್ರಮ ಪ್ರವೇಶಿಸಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಸಾರ್ವಜನಿಕರಿಂದ ಧರ್ಮದೇಟು

ಲೈಂಗಿಕವಾಗಿ ಬಳಸಿ ವಂಚಿಸುವ ಪ್ರಕರಣಗಳಿಗೆ ವಿಶೇಷ ಕಾನೂನು ಬೇಕು: ಅಲಹಾಬಾದ್‌ ಹೈಕೋರ್ಟ್‌

ಲೈಂಗಿಕವಾಗಿ ಬಳಸಿ ವಂಚಿಸುವ ಪ್ರಕರಣಗಳಿಗೆ ವಿಶೇಷ ಕಾನೂನು ಬೇಕು: ಅಲಹಾಬಾದ್‌ ಹೈಕೋರ್ಟ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮನೆಯೊಳಗೆ ಅಕ್ರಮ ಪ್ರವೇಶಿಸಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಸಾರ್ವಜನಿಕರಿಂದ ಧರ್ಮದೇಟು

ಮನೆಯೊಳಗೆ ಅಕ್ರಮ ಪ್ರವೇಶಿಸಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಸಾರ್ವಜನಿಕರಿಂದ ಧರ್ಮದೇಟು

ಕುರುಗೋಡು : ಮನೆ ಬೀಗ ಮುರಿದು ಕಳ್ಳತನ ನಡೆಸಿದ್ದ ಖದೀಮರ ಬಂಧನ

ಕುರುಗೋಡು : ಮನೆ ಬೀಗ ಮುರಿದು ಕಳ್ಳತನ ನಡೆಸಿದ್ದ ಖದೀಮರ ಬಂಧನ

ಅಂಕೋಲಾ: ಹೆಚ್ಚಾದ ಚಿರತೆ ಹಾವಳಿ :ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಅಂಕೋಲಾ: ಹೆಚ್ಚಾದ ಚಿರತೆ ಹಾವಳಿ :ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕೃಷ್ಣಾ ಹಾಗೂ ಘಟಪ್ರಭಾ ನದಿಯಲ್ಲಿ ತಗ್ಗಿದ ಪ್ರವಾಹ : ಮುಕ್ತವಾದ ಸೇತುವೆ ಹಾಗೂ ರಸ್ತೆಗಳು

ಕೃಷ್ಣಾ ಹಾಗೂ ಘಟಪ್ರಭಾ ನದಿಯಲ್ಲಿ ತಗ್ಗಿದ ಪ್ರವಾಹ : ಮುಕ್ತವಾದ ಸೇತುವೆ ಹಾಗೂ ರಸ್ತೆಗಳು

ಹುಬ್ಬಳ್ಳಿ : ಕಾರಾಗೃಹದಿಂದ ಪರಾರಿಯಾಗಿದ್ದ ಕೊಲೆ ಆರೋಪಿ ಶವವಾಗಿ ಪತ್ತೆ

ಹುಬ್ಬಳ್ಳಿ : ಕಾರಾಗೃಹದಿಂದ ಪರಾರಿಯಾಗಿದ್ದ ಕೊಲೆ ಆರೋಪಿ ಶವವಾಗಿ ಪತ್ತೆ

MUST WATCH

udayavani youtube

ಭಾರಿ ಮಳೆಗೆ ತತ್ತರಿಸಿದ ಮಧ್ಯಪ್ರದೇಶ

udayavani youtube

ಉಳ್ಳಾಲದ ಮಾಜಿ ಶಾಸಕನ ಮನೆಮೇಲೆ NIA ದಾಳಿ

udayavani youtube

ಕೃಷಿ ಕ್ಷೇತ್ರ ಯಾರಿಗೂ ಆತ್ಮಹತ್ಯೆ ಮಾಡಲು ಬಿಡೂದಿಲ್ಲ

udayavani youtube

ಆರೋಗ್ಯಕರ ಜೀವನಕ್ಕೆ ಸರಳ ಸೂತ್ರ ದಿನಚರಿ

udayavani youtube

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದ ಅಧಿಕಾರ ಸ್ವೀಕಾರ ಕಾರ್ಯಕ್ರಮ

ಹೊಸ ಸೇರ್ಪಡೆ

ಕೋವಿಡ್, ಪ್ರವಾಹವೇ ಹೊಸ ಸಂಪುಟದ ಮುಂದಿರುವ ಸವಾಲು

ಕೋವಿಡ್, ಪ್ರವಾಹವೇ ಹೊಸ ಸಂಪುಟದ ಮುಂದಿರುವ ಸವಾಲು

ಕೊರೊನಾ ಆತಂಕ ನಡುವೆ ಸಣ್ಣ ಗಾತ್ರದ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆ

ಕೊರೊನಾ ಆತಂಕ ನಡುವೆ ಸಣ್ಣ ಗಾತ್ರದ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆ

ಕರಾವಳಿ, ಮಲೆನಾಡಿನಲ್ಲಿ ಮಳೆ ಕೊರತೆ !

ಕರಾವಳಿ, ಮಲೆನಾಡಿನಲ್ಲಿ ಮಳೆ ಕೊರತೆ !

ಸರಳ ಬೋಧನೆಗೆ ಬಹುವಿಧ ಕಲಿಕೆ ಕಾರ್ಡ್‌

ಸರಳ ಬೋಧನೆಗೆ ಬಹುವಿಧ ಕಲಿಕೆ ಕಾರ್ಡ್‌

ವರ್ಷದಿಂದ ಉದ್ಘಾಟನೆಯಾಗದೆ ಉಳಿದ ಇ-ಗ್ರಂಥಾಲಯ

ವರ್ಷದಿಂದ ಉದ್ಘಾಟನೆಯಾಗದೆ ಉಳಿದ ಇ-ಗ್ರಂಥಾಲಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.