6 ಕೋಟಿ ಮೌಲ್ಯದ ಹ್ಯಾಶಿಷ್‌ ಆಯಿಲ್‌ ವಶ

ಸಿಸಿಬಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: ನಾಲ್ವರು ಅಂತಾರಾಜ್ಯ ಡ್ರಗ್ಸ್‌ ಪೆಡ್ಲರ್‌ಗಳ ಸೆರೆ

Team Udayavani, Aug 7, 2021, 2:06 PM IST

Hashish-Oil

ಬೆಂಗಳೂರು: ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರ ಕಾರ್ಯಾಚರಣೆಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಏಕಕಾಲದಲ್ಲಿ ದಾಳಿ ನಡೆಸಿ ಆರು ಕೋಟಿ ರೂ. ಮೌಲ್ಯದ ಹ್ಯಾಶಿಷ್‌ ಆಯಿಲ್‌, ಹೈಡ್ರೋ ಗಾಂಜಾ ಸಸಿಗಳು ಸೇರಿ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದು, ನಾಲ್ವರು ಅಂತಾರಾಜ್ಯ ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ.

ಅಸ್ಸಾಂ ಮೂಲದ ನಬರನ್‌ ಚಕ್ಮಾ(30), ಆತನ ಸಹಚರರಾದ ಆಂಧ್ರಪ್ರದೇಶದ ಮೊಬಿನ್‌ ಬಾಬು(32), ಬೆಂಗಳೂರಿನ ರೋಲ್ಯಾಂಡ್‌ ರೋಡ್ನಿ ರೋಜರ್‌ (26) ಮತ್ತು ತಮಿಳುನಾಡು ಚೆನ್ನೈ ಮೂಲದ ತರುಣ್‌ ಕುಮಾರ್‌ ಲಾಲ್‌ಚಂದ್‌(40) ಬಂಧಿತರು. ಅವರಿಂದ ಆರು ಕೋಟಿ ರೂ. ಮೌಲ್ಯದ 15 ಕೆ.ಜಿ. ಹ್ಯಾಶಿಷ್‌ ಆಯಿಲ್‌, 11 ಕೆ.ಜಿ. ಗಾಂಜಾ, 530 ಗ್ರಾಂಚರಸ್‌ ಉಂಡೆ, ನಾಲ್ಕು ಹೈಡ್ರೋ ಗಾಂಜಾ ಸಸಿಗಳು ಹಾಗೂ ಮೊಬೈಲ್‌ಗ‌ಳು, ಕಾರು, ಬೈಕ್‌, ತೂಕದ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಮೂರು ವರ್ಷಗಳಿಂದ ಹೆಣ್ಣೂರು ಠಾಣಾ ವ್ಯಾಪ್ತಿಯ ಬೇರೆ ಬೇರೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದುಕೊಂಡು ಮಾದಕ ವಸ್ತುಗಳನ್ನು ಗ್ರಾಹಕರಿಗೆ ಪೂರೈಕೆ ಮಾಡುತ್ತಿದ್ದರು ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದರು.

ಆರೋಪಿಗಳ ಪೈಕಿ ನಬರನ್‌ ಚಕ್ಮಾ ಮಾದಕ ವಸ್ತುಗಳ ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದಲೇ ನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಾಗಿದ್ದ. ಕಳೆದ ಮೂರು ವರ್ಷಗಳಿಂದ ತನ್ನ ಸಹಚರರೊಂದಿಗೆ ಸೇರಿಕೊಂಡು ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ ಕಂಪನಿಗಳಉದ್ಯೋಗಿಗಳು,ಉದ್ಯಮಿಗಳನ್ನುಪರಿಚಯಿಸಿಕೊಂಡು ಅವರುಗಳಿಗೆ ಮಾದಕ ವಸ್ತು ಗಾಂಜಾ ಮತ್ತು ಹ್ಯಾಶಿಶ್‌ ಆಯಿಲ್‌ ಮಾರಾಟ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಹೇಳಿದರು.

ಇದನ್ನೂ ಓದಿ: ಬಿಎಸ್‌ವೈ ಮಾಜಿ ಸಿಎಂ ಎನ್ನಲು ಮನಸ್ಸು ಒಪ್ಪುತ್ತಿಲ್ಲ : ಸಚಿವ ಆನಂದ ಸಿಂಗ್‌

ಡ್ರಗ್ಸ್‌ ಪ್ರಕರಣವೊಂದರಲ್ಲಿ ಕಳೆದ ವರ್ಷ ಸಿಸಿಬಿ ಪೊಲೀಸರು ರಾಮ ಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ದಾಳಿ ಮಾಡಿ ಈತನ ಪ್ರಮುಖ ಸಹಚರ ಸಿಂಟೋ ಥಾಮಸ್‌ನನ್ನು ಬಂಧಿಸಲಾಗಿತ್ತು. ಈ ವೇಳೆ ನಬರನ್‌ ಚಕ್ಮಾನಾಪತ್ತೆಯಾಗಿದ್ದ. ನಂತರ ನೆರೆ ರಾಜ್ಯದಲ್ಲಿ ತಲೆಮರೆಸಿಕೆದ್ದ ಬಹಳಷ್ಟು ಮಂದಿ ಸಹಚರರನ್ನು ಬಳಸಿಕೊಂಡು ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಮಾಡಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ನಾಲ್ವರ ವಿರುದ್ಧ ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್‌ ಆಯುಕ್ತರು ಹೇಳಿದರು.

ಒಂದು ಲಕ್ಷ ಬಹುಮಾನ
ಈ ಎರಡು ಪ್ರಕರಣಗಳ ಕಾರ್ಯಾಚರಣೆ ನಡೆಸಿದ ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್‌ ಆಯುಕ್ತರಾದಕಮಲ್‌ ಪಂತ್‌ ಶ್ಲಾಘಿಸಿ ಒಂದು ಲಕ್ಷ ಬಹುಮಾನ ಘೋಷಿಸಿದ್ದಾರೆ.

ಲಾರಿ ಚಾಲಕನ ಬಂಧನ
ಆಂಧ್ರಪ್ರದೇಶದಿಂದ ಗಾಂಜಾವನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಲಾರಿ ಚಾಲಕ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆಂಧ್ರಪ್ರದೇಶ ಮೂಲದ ತಮಿನ್‌ (43) ಬಂಧಿತ. ಆತನಿಂದ ಎರಡು ಲಕ್ಷ ರೂ. ಮೌಲ್ಯದ 8 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಆರೋಪಿ ಆಂಧ್ರಪ್ರದೇಶದಿಂದ ತನ್ನ ಲಾರಿಯಲ್ಲಿ ಗಾಂಜಾವನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ. ಇತ್ತೀಚೆಗೆ ಶಿವಾಜಿನಗರ, ತೊಪ್ಪ ಮೊದಲಿಯಾರ್‌ ಸ್ಟ್ರೀಟ್‌, ನಾಲಾ ಹತ್ತಿರ ವ್ಯಕ್ತಿಯೊಬ್ಬ ಗಾಂಜಾ ಮಾದಕ ವಸ್ತುವನ್ನು ಮಾರಾಟಕ್ಕೆ ಮುಂದಾಗಿದ್ದ. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ನೈಜೀರಿಯಾ ಪ್ರಜೆ ಸೆರೆ
ಮತ್ತೊಂದು ಪಕ್ರರಣದಲ್ಲಿ ಅಕ್ರಮವಾಗಿ ನೆಲೆಸಿದಲ್ಲದೆ, ಡ್ರಗ್ಸ್‌ ಮಾರಾಟ ದಂಧೆಯಲ್ಲಿ ತೊಡಗಿದ್ದ ನೈಜಿರಿಯಾ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಒನ್ಯಾಕ ಇಮ್ಯಾನುಲ್‌ ಜೇಮ್ಸ್‌ (31) ಬಂಧಿತ. ಈತನಿಂದ ಐದು ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾತ್ರಗೆಳು ಮತ್ತು ಎಲ್‌ಎಸ್‌ಡಿ ಸ್ಟ್ರೀಪ್ಸ್‌ಗಳು, ಬೈಕ್‌, ಮೊಬೈಲ್‌ ವಶಕ್ಕೆ ಪಡೆಯಲಾಗಿದೆ.

ಆರೋಪಿ ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಹಳೇ ಮದ್ರಾಸ್‌ ರಸ್ತೆಯ ಸ್ವಾಮಿ ವಿವೇಕಾನಂದ ರಸ್ತೆಯ ಬಳಿ ಡ್ರಗ್ಸ್‌ ಮಾರಾಟಕ್ಕೆ ಮುಂದಾಗಿದ್ದ. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಮಾಲು ಸಮೇತ ಬಂಧಿಸಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಯ ವೀಸಾ, ಪಾಸ್‌ ಪೋರ್ಟ್‌ ಅವಧಿ ಮುಕ್ತಾಯಗೊಂಡಿದ್ದು, ಅಕ್ರಮವಾಗಿ ವಾಸವಾಗಿರುವುದು ಪತ್ತೆಯಾಗಿದೆ. ಅಲ್ಲದೆ, ಮಾದಕ ವಸ್ತು ಮಾರಾಟ ಜಾಲದಲ್ಲಿ
ತೊಡಗಿ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.ಈ ಹಿಂದೆಯೂ ಈತನ ವಿರುದ್ಧ ಹಲಸೂರು ಪೊಲೀಸ್‌ ಠಾಣೆಯಲ್ಲಿ ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಹೊರ ಬಂದು ಪುನಃ ಅದೇ ದಂಧೆಯಲ್ಲಿ ತೊಡಗಿದ್ದಾನೆ
ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

satish jarkiholi

ರಮೇಶ ಜಾರಕಿಹೊಳಿ ನಮ್ಮ ಪಕ್ಷಕ್ಕೆ ಬುದ್ದಿ ಹೇಳುವ ಅವಶ್ಯಕತೆ ಇಲ್ಲ: ಸತೀಶ್ ಜಾರಕಿಹೊಳಿ

ಶೀಘ್ರದಲ್ಲೇ ಘನತ್ಯಾಜ್ಯ, ಕೊಳಚೆ ನೀರಿನಿಂದಲೂ ಸಂಚರಿಸಲಿದೆ ಬಸ್, ಕಾರು: ಗಡ್ಕರಿ ಕನಸು

ಶೀಘ್ರದಲ್ಲೇ ಘನತ್ಯಾಜ್ಯ, ಕೊಳಚೆ ನೀರಿನಿಂದಲೂ ಸಂಚರಿಸಲಿದೆ ಬಸ್, ಕಾರು: ಗಡ್ಕರಿ ಕನಸು

ಸಫಾರಿ ವಾಹನದ ಮೇಲೆ ದಾಳಿ ಮಾಡಿದ 13 ಅಡಿ ಎತ್ತರದ ಆನೆ: ಓಟಕ್ಕಿತ್ತ ಜನರು! ವಿಡಿಯೋ ವೈರಲ್

ಸಫಾರಿ ವಾಹನದ ಮೇಲೆ ದಾಳಿ ಮಾಡಿದ 13 ಅಡಿ ಎತ್ತರದ ಆನೆ: ಓಟಕ್ಕಿತ್ತ ಜನರು! ವಿಡಿಯೋ ವೈರಲ್

ನಥಿಂಗ್‍ ಇಯರ್ (1) ಹೊಸ ಆವೃತ್ತಿ ಬಿಡುಗಡೆ: ಏನಿದರ ವಿಶೇಷತೆ?

ನಥಿಂಗ್‍ ಇಯರ್ (1) ಹೊಸ ಆವೃತ್ತಿ ಬಿಡುಗಡೆ: ಏನಿದರ ವಿಶೇಷತೆ?

vote

ಮೈಸೂರಿನಲ್ಲಿ ಸಂವಾದ ;ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪರಿಷತ್ ಅಭ್ಯರ್ಥಿಗಳು ತಬ್ಬಿಬ್ಬು

ಕೋವಿಡ್ ತಡೆಗೆ ಅಂತಾರಾಷ್ಟ್ರೀಯ ವಿಮಾನಗಳನ್ನು ನಿಲ್ಲಿಸಿ: ಸಿದ್ದರಾಮಯ್ಯ ಸಲಹೆ

ಕೋವಿಡ್ ತಡೆಗೆ ಅಂತಾರಾಷ್ಟ್ರೀಯ ವಿಮಾನಗಳನ್ನು ನಿಲ್ಲಿಸಿ: ಸಿದ್ದರಾಮಯ್ಯ ಸಲಹೆ

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್ ಸೋಂಕು ತಗುಲಿದ 12 ಮಂದಿ ಆಸ್ಪತ್ರೆಗೆ ದಾಖಲು

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್ ಸೋಂಕು ತಗುಲಿದ 12 ಮಂದಿ ಆಸ್ಪತ್ರೆಗೆ ದಾಖಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒಮಿಕ್ರಾನ್ ಭೀತಿ: ಸಿಎಂ ನೇತೃತ್ವದಲ್ಲಿ ತುರ್ತು ಸಭೆ

ಒಮಿಕ್ರಾನ್ ಭೀತಿ: ಸಿಎಂ ನೇತೃತ್ವದಲ್ಲಿ ತುರ್ತು ಸಭೆ

vote

ಮೈಸೂರಿನಲ್ಲಿ ಸಂವಾದ ;ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪರಿಷತ್ ಅಭ್ಯರ್ಥಿಗಳು ತಬ್ಬಿಬ್ಬು

ಕೆಲವು ಕಠಿಣ ನಿಯಮಗಳನ್ನು ಮತ್ತೆ ಜಾರಿ ಮಾಡಬೇಕಾಗಬಹುದು: ಗೌರವ್ ಗುಪ್ತಾ

ಕೆಲವು ಕಠಿಣ ನಿಯಮಗಳನ್ನು ಮತ್ತೆ ಜಾರಿ ಮಾಡಬೇಕಾಗಬಹುದು: ಗೌರವ್ ಗುಪ್ತಾ

1-fsfd

ಒಮಿಕ್ರಾನ್ ವಿಚಾರದಲ್ಲೂ ಲಂಚ ಹೊಡೆಯುವುದನ್ನು ಸರಕಾರ ಬಿಡಬೇಕು : ಡಿಕೆಶಿ

ಕಾಂಗ್ರೆಸ್ ಸೇರುವ ಜನರು ಎಷ್ಟು ಸಮರ್ಥರು?: ಡಿಕೆಶಿ ಗೆ ಬಿಜೆಪಿ ಪ್ರಶ್ನೆ

ಕಾಂಗ್ರೆಸ್ ಸೇರುವ ಜನರು ಎಷ್ಟು ಸಮರ್ಥರು?: ಡಿಕೆಶಿ ಗೆ ಬಿಜೆಪಿ ಪ್ರಶ್ನೆ

MUST WATCH

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

ಹೊಸ ಸೇರ್ಪಡೆ

13protest

ಗೋವುಗಳ ಸಮೇತ ಗ್ರಾಪಂಗೆ ರೈತರ ಮುತ್ತಿಗೆ

milk rate

ರೈತರ ಹಾಲಿನ ಖರೀದಿ ದರ ಕನಿಷ್ಠ 30ರೂ.ಗೆ ಏರಿಸಿ

12protest

ಬೆಳೆ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ

satish jarkiholi

ರಮೇಶ ಜಾರಕಿಹೊಳಿ ನಮ್ಮ ಪಕ್ಷಕ್ಕೆ ಬುದ್ದಿ ಹೇಳುವ ಅವಶ್ಯಕತೆ ಇಲ್ಲ: ಸತೀಶ್ ಜಾರಕಿಹೊಳಿ

ಶೀಘ್ರದಲ್ಲೇ ಘನತ್ಯಾಜ್ಯ, ಕೊಳಚೆ ನೀರಿನಿಂದಲೂ ಸಂಚರಿಸಲಿದೆ ಬಸ್, ಕಾರು: ಗಡ್ಕರಿ ಕನಸು

ಶೀಘ್ರದಲ್ಲೇ ಘನತ್ಯಾಜ್ಯ, ಕೊಳಚೆ ನೀರಿನಿಂದಲೂ ಸಂಚರಿಸಲಿದೆ ಬಸ್, ಕಾರು: ಗಡ್ಕರಿ ಕನಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.