ಕಾಸರಗೋಡು ಅಪರಾಧ ಸುದ್ದಿಗಳು

Team Udayavani, May 17, 2022, 5:02 PM IST

ಕಾಸರಗೋಡು ಅಪರಾಧ ಸುದ್ದಿಗಳು

ನಿಲ್ಲಿಸಿದ್ದ ಬಸ್‌ನಿಂದ ಕಂಡೆಕ್ಟರ್‌ ನಾಪತ್ತೆ
ಕಾಸರಗೋಡು: ಪ್ರಯಾಣಿಕರನ್ನು ಹತ್ತಿಸಲೆಂದು ನಿಲ್ಲಿಸಿದ್ದ ಖಾಸಗಿ ಬಸ್‌ವೊಂದರ ಕಂಡೆಕ್ಟರ್‌ ನಾಪತ್ತೆಯಾದ ಘಟನೆ ನಡೆದಿದೆ.

ಬಂದಡ್ಕ-ಕಾಂಞಂಗಾಡ್‌ ರೂಟ್‌ನಲ್ಲಿ ಸಂಚರಿಸುತ್ತಿದ್ದ ಶ್ರೀಯ ಬಸ್‌ನ ಕಂಡೆಕ್ಟರ್‌ ಕುತ್ತಿಕೋಲ್‌ ಕರಿವೇಡಗಂ ನಿವಾಸಿ ಗಣೇಶನ್‌(37) ನಾಪತ್ತೆಯಾಗಿದ್ದಾರೆ.

ಮೇ 16 ರಂದು ಮಧ್ಯಾಹ್ನ ಕಾಂಞಂಗಾಡ್‌ ಬಸ್‌ ನಿಲ್ದಾಣದಲ್ಲಿ ಬಸ್‌ ನಿಲ್ಲಿಸಲಾಗಿತ್ತು. ಈ ವೇಳೆ ಚಾಲಕನೊಂದಿಗೆ ಈಗ ಬರುವುದಾಗಿ ಹೇಳಿ ಹೋದ ಗಣೇಶನ್‌ ವಾಪಸಾಗಿಲ್ಲ. ಬಸ್‌ ಹೊರಡಲು ಸಿದ್ಧವಾದಾಗ ಕಂಡೆಕ್ಟರ್‌ ಇಲ್ಲವೆಂಬ ವಿಷಯ ತಿಳಿಯಿತು. ಕೂಡಲೇ ಪರಿಸರದಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ.

ಮೊಬೈಲ್‌ ಫೋನ್‌ಗೆ ಕರೆ ಮಾಡಿದಾಗ ಅದು ಸ್ವಿಚ್‌ ಆಫ್‌ ಆಗಿತ್ತು. ಇದೇ ಸಂದರ್ಭದಲ್ಲಿ ಕಂಟೆಕ್ಟರ್‌ನ ಬ್ಯಾಗ್‌ ಮತ್ತು ಟಿಕೆಟ್‌ ಮೆಶಿನ್‌ ಬಸ್‌ನೊಳಗೆ ಪತ್ತೆಯಾಗಿದೆ. ಬೇರೊಬ್ಬ ಕಂಡೆಕ್ಟರ್‌ನ ನೆರವಿನಿಂದ ಬಸ್‌ ಪ್ರಯಾಣ ಮುಂದುವರಿಸಲಾಯಿತು. ಆದರೆ ಕಂಡೆಕ್ಟರ್‌ ನಾಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಬಸ್‌ ಚಾಲಕ ಗೋಪಾಲಕೃಷ್ಣನ್‌ ಹೊಸದುರ್ಗ ಪೊಲೀಸರಿಗೆ ದೂರು ನೀಡಿದ್ದಾರೆ.

ಮದ್ಯ ಸಹಿತ ಬಂಧನ
ಬದಿಯಡ್ಕ: ವ್ಯಾನ್‌ನಲ್ಲಿ ಸಾಗಿಸುತ್ತಿದ್ದ 17.28 ಲೀಟರ್‌ ವಿದೇಶಿ ಮದ್ಯವನ್ನು ಪಯರ್‌ಪಳ್ಳದಿಂದ ವಶಪಡಿಸಿಕೊಂಡ ಬದಿಯಡ್ಕ ರೇಂಜ್‌ ಅಬಕಾರಿ ದಳ ಈ ಸಂಬಂಧ ಪಯೋಲಂ ನಿವಾಸಿ ಸುರೇಂದ್ರನ್‌ ಟಿ. (40) ಅನ್ನು ಬಂಧಿಸಿದೆ. ಮದ್ಯ ಸಾಗಾಟದ ಕುರಿತಾಗಿ ರಹಸ್ಯ ಮಾಹಿತಿಯಂತೆ ಅಬಕಾರಿ ದಳ ಕಾರ್ಯಾಚರಣೆ ನಡೆಸಿತ್ತು.

ತೋಡಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು
ಕಾಸರಗೋಡು: ಸ್ನೇಹಿತರೊಂದಿಗೆ ತೋಡಿನಲ್ಲಿ ಸ್ನಾನ ಮಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಸಾವಿಗೀಡಾದ ಘಟನೆ ನಡೆದಿದೆ.

ಮಾವಿಲ ಕಡಪ್ಪುರ ವೆಳುತ್ತ ಪೊಯ್ಯೆಲ್‌ ನಿವಾಸಿ ಕೆ.ಸಿ.ಶುಕೂರ್‌ ಅವರ ಪುತ್ರ ವಿ.ಬಿಲಾಲ್‌(17) ಸಾವಿಗೀಡಾದ ವಿದ್ಯಾರ್ಥಿ. ಕಯ್ಯೂರು ಚೀಮೇನಿ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಪೋತ್ತಕಂಡಂ ಅರುಕರ ತೋಡಿನಲ್ಲಿ ಸ್ನಾನ ಮಾಡುತ್ತಿದ್ದಾಗ ಈ ಘಟನೆ ನಡೆಯಿತು.

2.50 ಕೋಟಿ ರೂ. ಮೌಲ್ಯದ ಚಿನ್ನ ಸಹಿತ ಐವರ ಬಂಧನ
ಕಾಸರಗೋಡು: ಅಕ್ರಮವಾಗಿ ಸಾಗಿಸುತ್ತಿದ್ದ 2.50 ಕೋಟಿ ರೂ. ಮೌಲ್ಯದ 4.15 ಕಿಲೋ ಚಿನ್ನ ಸಹಿತ ಐವರನ್ನು ಕರಿಪೂರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ದಳ ಬಂಧಿಸಿದೆ.

ಕಾಸರಗೋಡು ನಿವಾಸಿಗಳಾದ ರಂಶಾದ್‌(32), ಮುಹಮ್ಮದ್‌ ಅಜ್ಮಲ್‌ ನಿಯಾಸ್‌(23), ಮುಹಮ್ಮದ್‌ ನಿಶಾದ್‌(24), ಮಲಪ್ಪುರಂ ನಿವಾಸಿ ಸಾಹಿರ್‌(42), ನಿಸಾರ್‌(23)ನನ್ನು ಬಂಧಿಸಲಾಗಿದೆ.

ಕಳವಿಗೆ ಯತ್ನ
ಕಾಸರಗೋಡು: ಎಡನೀರು ಚಾತಪ್ಪಾಡಿ ಸಿಂಧ್ಯಾ ತರವಾಡು ಮನೆಯ ಕ್ಷೇತ್ರದಿಂದ ಕಳವಿಗೆ ಯತ್ನಿಸಿದ ಘಟನೆ ನಡೆದಿದೆ.

ಕ್ಷೇತ್ರದ ಹೊರಗಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಗರ್ಭಗುಡಿಯ ಬಾಗಿಲ ಬೀಗ ಮುರಿದಿದ್ದಾರೆ. ಕ್ಷೇತ್ರದಿಂದ ಕಳವಾದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್

nirani

ಆ.15 ರೊಳಗೆ ಇ-ಕಚೇರಿಯನ್ನಾಗಿ ಪರಿವರ್ತಿಸಲು ಅಧಿಕಾರಿಗಳಿಗೆ ನಿರಾಣಿ ತಾಕೀತು

1-gfdgdf-g-gg-g

ಗೋವಾದಿಂದ ಮುಂಬಯಿಯತ್ತ ಪ್ರಯಾಣ ಬೆಳೆಸಿದ ರೆಬೆಲ್ ಶಾಸಕರು

ಪಣಜಿ : ರಸ್ತೆ ಮಧ್ಯೆಯೇ ಮಾಜಿ ಫುಟ್ ಬಾಲ್ ಆಟಗಾರನ ಕಾರು ಬೆಂಕಿಗಾಹುತಿ

ಪಣಜಿ : ರಸ್ತೆ ಮಧ್ಯೆಯೇ ಮಾಜಿ ಫುಟ್ ಬಾಲ್ ಆಟಗಾರನ ಕಾರು ಬೆಂಕಿಗಾಹುತಿ

Watch: ಜೈಪುರ- ಕನ್ನಯ್ಯಲಾಲ್ ಹತ್ಯೆಗೈದ ನಾಲ್ವರು ಹಂತಕರಿಗೆ ಕೋರ್ಟ್ ಹೊರಗೆ ಥಳಿತ

Watch: ಜೈಪುರ- ಕನ್ನಯ್ಯಲಾಲ್ ಹತ್ಯೆಗೈದ ನಾಲ್ವರು ಹಂತಕರಿಗೆ ಕೋರ್ಟ್ ಹೊರಗೆ ಥಳಿತ

ಕನ್ಹಯ್ಯಲಾಲ್ ಹಂತಕರಿಗೆ ಕಠಿಣ ಶಿಕ್ಷೆಯಾಗಲಿ: ಶ್ರೀಶೈಲಶ್ರೀ

ಕನ್ಹಯ್ಯಲಾಲ್ ಹಂತಕರಿಗೆ ಕಠಿಣ ಶಿಕ್ಷೆಯಾಗಲಿ: ಶ್ರೀಶೈಲಶ್ರೀ

ಈ ಹಾಡನ್ನು ನೀವೂ ಕೇಳಿ… ವಿಕ್ರಾಂತ್ ರೋಣ ಸಿನಿಮಾದ ಎರಡನೇ ಲಿರಿಕಲ್ ಹಾಡು ಬಿಡುಗಡೆ

ಈ ಹಾಡನ್ನು ನೀವೂ ಕೇಳಿ… ವಿಕ್ರಾಂತ್ ರೋಣ ಸಿನಿಮಾದ ಎರಡನೇ ಲಿರಿಕಲ್ ಹಾಡು ಬಿಡುಗಡೆ

ಸುಳ್ಯ: ವಿದ್ಯುತ್ ಶಾಕ್ ತಗುಲಿ ನಾಲ್ಕು ವರ್ಷದ ಬಾಲಕ ಮೃತ್ಯು

ಸುಳ್ಯ: ವಿದ್ಯುತ್ ಶಾಕ್ ತಗುಲಿ ನಾಲ್ಕು ವರ್ಷದ ಬಾಲಕ ಮೃತ್ಯುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-20

ಹಾರಂಗಿ ಜಲಾಶಯ ಭರ್ತಿ: ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ಶಾಸಕ ಅಪ್ಪಚ್ಚು ರಂಜನ್

ಮಡಿಕೇರಿ: ಫ‌ಲಾನುಭವಿಗಳ ಜತೆ ರಾಜ್ಯಪಾಲ ಗೆಹ್ಲೋಟ್‌ ಸಂವಾದ

ಮಡಿಕೇರಿ: ಫ‌ಲಾನುಭವಿಗಳ ಜತೆ ರಾಜ್ಯಪಾಲ ಗೆಹ್ಲೋಟ್‌ ಸಂವಾದ

5

ಕೊಡಗಿನಲ್ಲಿ ಮತ್ತೆ ಭಾರೀ ಶಬ್ಧದೊಂದಿಗೆ ಅದುರಿದ ಭೂಮಿ; ಹೆಚ್ಚುತ್ತಿದೆ ಜನತೆಯ ಆತಂಕ

ಕುಂಬಳೆ :ಕೊಲೆ ಪ್ರಕರಣ; ಆರೋಪಿಗಳ ಪತ್ತೆಗಾಗಿ ಲುಕೌಟ್‌ ನೋಟಿಸ್‌ ಬಿಡುಗಡೆ

ಕುಂಬಳೆ :ಕೊಲೆ ಪ್ರಕರಣ; ಆರೋಪಿಗಳ ಪತ್ತೆಗಾಗಿ ಲುಕೌಟ್‌ ನೋಟಿಸ್‌ ಬಿಡುಗಡೆ

ಕುಂಬಳೆ : ನೇಣು ಬಿಗಿದ ಸ್ಥಿತಿಯಲಿ ಪೊಲೀಸ್‌ ಅಧಿಕಾರಿಯ ಮೃತದೇಹ ಪತ್ತೆ

ಕುಂಬಳೆ : ನೇಣು ಬಿಗಿದ ಸ್ಥಿತಿಯಲಿ ಪೊಲೀಸ್‌ ಅಧಿಕಾರಿಯ ಮೃತದೇಹ ಪತ್ತೆ

MUST WATCH

udayavani youtube

ದೇಶದ ಮೊದಲ ಮಾನವ ರಹಿತ ವಿಮಾನ ಹಾರಾಟ ಯಶಸ್ವಿ

udayavani youtube

ಭಗವಂತನ ಅನುಗ್ರಹ ಸಂಪಾದಿಸುವುದು ಹೇಗೆ?

udayavani youtube

NEWS BULLETIN 01-07-2022

udayavani youtube

ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು

udayavani youtube

ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್

ಹೊಸ ಸೇರ್ಪಡೆ

nirani

ಆ.15 ರೊಳಗೆ ಇ-ಕಚೇರಿಯನ್ನಾಗಿ ಪರಿವರ್ತಿಸಲು ಅಧಿಕಾರಿಗಳಿಗೆ ನಿರಾಣಿ ತಾಕೀತು

1-gfdgdf-g-gg-g

ಗೋವಾದಿಂದ ಮುಂಬಯಿಯತ್ತ ಪ್ರಯಾಣ ಬೆಳೆಸಿದ ರೆಬೆಲ್ ಶಾಸಕರು

ನವಮಾಧ್ಯಮ ವಿಶ್ವಾಸಾರ್ಹತೆ ಉಳಿಸಿಕೊಳ್ಳಲಿ; ಓಂಕಾರ್‌ ಕಾಕಡೆ

ನವಮಾಧ್ಯಮ ವಿಶ್ವಾಸಾರ್ಹತೆ ಉಳಿಸಿಕೊಳ್ಳಲಿ; ಓಂಕಾರ್‌ ಕಾಕಡೆ

ಪಣಜಿ : ರಸ್ತೆ ಮಧ್ಯೆಯೇ ಮಾಜಿ ಫುಟ್ ಬಾಲ್ ಆಟಗಾರನ ಕಾರು ಬೆಂಕಿಗಾಹುತಿ

ಪಣಜಿ : ರಸ್ತೆ ಮಧ್ಯೆಯೇ ಮಾಜಿ ಫುಟ್ ಬಾಲ್ ಆಟಗಾರನ ಕಾರು ಬೆಂಕಿಗಾಹುತಿ

ನೌಕರರಿಗೆ ನೇರ ವೇತನ ನೀಡಿ; ಹೊರಗುತ್ತಿಗೆ ನೌಕರರ ಧರಣಿ

ನೌಕರರಿಗೆ ನೇರ ವೇತನ ನೀಡಿ; ಹೊರಗುತ್ತಿಗೆ ನೌಕರರ ಧರಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.