ಕಾಸರಗೋಡು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ: ಜಿಲ್ಲೆಯಲ್ಲಿ ಒಟ್ಟು 10,46,226 ಮತದಾತರು
Team Udayavani, Nov 13, 2020, 5:41 PM IST
ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಂತಿಮ ಮತದಾತರ ಪಟ್ಟಿ ಪ್ರಕಟಗೊಂಡಿದೆ. ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 10,46,226 ಮತದಾತರು ಇದ್ದು. ಇವರಲ್ಲಿ 5,01,876 ಮಂದಿ ಪುರುಷರು, 5,44,344 ಮಂದಿ ಮಹಿಳೆಯರು, 6 ಮಂದಿ ಟ್ರಾನ್ಸ್ ಜೆಂಟರ್ ಗಳಿದ್ದಾರೆ.
ಅಂತಿಮ ಮತದಾತರ ಪಟ್ಟಿ ಪ್ರಕಾರ ಕಾಸರಗೋಡು ಜಿಲ್ಲೆಯ 38 ಗ್ರಾ.ಪಂ.ಗಳಲ್ಲಿ ಒಟ್ಟು 9,17,663 ಮಂದಿ ಮತದಾತರಿದ್ದು. ಇವರಲ್ಲಿ 4,42,113 ಮಂದಿ ಪುರುಷರು, 4,75,545 ಮಂದಿ ಮಹಿಳೆಯರು, 5 ಮಂದಿ ಟ್ರಾನ್ಸ್ ಜೆಂಡರ್ ಇದ್ದಾರೆ. 70 ಮಂದಿ ಅನಿವಾಸಿಗಳು ಮತದಾತರಲ್ಲಿ ಸೇರಿದ್ದಾರೆ.
ಅತ್ಯಧಿಕ ಮತದಾತರು ಚೆಂಗಳ ಗ್ರಾಮ ಪಂಚಾಯತ್ನಲ್ಲಿದ್ದಾರೆ. ಇಲ್ಲಿ ಒಟ್ಟು 42,704 ಮಂದಿ ಮತದಾತರಿದ್ದಾರೆ. ಇವರಲ್ಲಿ 21,207 ಮಂದಿ ಪುರುಷರು, 21,496 ಮಂದಿ ಮಹಿಳೆಯರು, ಓರ್ವರು ಟ್ರಾನ್ಸ್ ಜೆಂಟರ್ ಇದ್ದಾರೆ.
ಇದನ್ನೂ ಓದಿ:ಕೇರಳ ಸಿಪಿಎಂ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಕೊಡಿಯೇರಿ ಬಾಲಕೃಷ್ಣನ್ ರಾಜೀನಾಮೆ?
ಅತಿ ಕಡಿಮೆ ಬೆಳ್ಳೂರು ಗ್ರಾಮ ಪಂಚಾಯತ್ನಲ್ಲಿದ್ದಾರೆ. ಇಲ್ಲಿ ಒಟ್ಟು 7,993 ಮಂದಿ ಮತದಾತರಿದ್ದಾರೆ. ಇವರಲ್ಲಿ 3,970 ಮಂದಿ ಪುರುಷರು, 4,023 ಮಂದಿ ಮಹಿಳೆಯರು ಇದ್ದಾರೆ.
ಕಾಸರಗೋಡು, ಕಾಂಞಂಗಾಡ್, ನೀಲೇಶ್ವರ ನಗರಸಭೆಗಳ ಮತದಾತರ ಅಂತಿಮ ಪಟ್ಟಿ ಪ್ರಕಟಗೊಂಡಿದೆ. ಈ ಪ್ರಕಾರ ಅತಿ ಹೆಚ್ಚು ಮತದಾತರು ಕಾಂಞಂಗಾಡ್ ನಗರಸಭೆಯಲ್ಲಿದ್ದಾರೆ. ಇಲ್ಲಿ 57,989 ಮಂದಿ ಮತದಾತರಿದ್ದಾರೆ. ಅತಿ ಕಡಿಮೆ ನೀಲೇಶ್ವರ ನಗರಸಭೆಯಲ್ಲಿದ್ದಾರೆ. ಇಲ್ಲಿ 31.435 ಮಂದಿ ಮತದಾರರಿದ್ದಾರೆ. ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ 39,138ಮಂದಿ ಮತದಾರರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್