ಕಾಸರಗೋಡು: 153 ಮಂದಿಗೆ ಪಾಸಿಟಿವ್
Team Udayavani, Aug 2, 2020, 10:10 AM IST
ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ 153 ಮಂದಿಗೆ ಕೋವಿಡ್ ಸೋಂಕು ದೃಢವಾಗಿದೆ. 28 ಮಂದಿ ಗುಣಮುಖರಾಗಿದ್ದಾರೆ. 151 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ.
ಕೇರಳದಲ್ಲಿ 1,129 ಪ್ರಕರಣ
ಕೇರಳದಲ್ಲಿ ಶನಿವಾರ 1,129 ಮಂದಿಗೆ ಸೋಂಕು ದೃಢವಾಗಿದೆ. 752 ಮಂದಿ ಗುಣಮುಖರಾಗಿದ್ದಾರೆ. ಕಾಸರಗೋಡು ತೃಕ್ಕರಿಪುರದ 72 ವರ್ಷದ ವ್ಯಕ್ತಿ ಸೇರಿದಂತೆ 8 ಮಂದಿ ಮೃತ ಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಮೃತರ ಸಂಖ್ಯೆ 81ಕ್ಕೇರಿತು. ಬಾಧಿತರಲ್ಲಿ 89 ಮಂದಿ ವಿದೇಶದಿಂದ, 114 ಮಂದಿ ಇತರ ರಾಜ್ಯಗಳಿಂದ ಬಂದವರು. 880 ಮಂದಿಗೆ ಸಂಪರ್ಕದ ಮೂಲಕ ತಗಲಿದೆ. 24 ಮಂದಿ ಆರೋಗ್ಯ ಕಾರ್ಯಕರ್ತರು, 11 ಮಂದಿ ಕೆಎಸ್ಇ ಸಿಬಂದಿ, ಐವರು ಕೆಎಲ್ಎಫ್ ಸಿಬಂದಿ, ನಾಲ್ವರು ಐಎನ್ಎಚ್ಎಸ್ ಸಿಬಂದಿ ಬಾಧಿತರಲ್ಲಿದ್ದಾರೆ.
9 ಮಂದಿ ಬಂಧನ
ಲಾಕ್ಡೌನ್ ಉಲ್ಲಂಘನೆ ಆರೋಪದಲ್ಲಿ ಜಿಲ್ಲೆಯಲ್ಲಿ 7 ಪ್ರಕರಣಗಳು ದಾಖಲಾಗಿವೆ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿ 9 ಮಂದಿಯನ್ನು ಬಂಧಿಸಿದ್ದು, 9 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾಸ್ಕ್ ಧರಿಸದ 292 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ