ಕಸವು ಕನ್ಯೆ! ಸೀರೆಯಲ್ಲಿ ಸುಂದರಾಂಗಿ…


Team Udayavani, Oct 1, 2020, 7:46 PM IST

ಕಸವುಕನ್ಯೆ! ಸೀರೆಯಲ್ಲಿ ಸುಂದರಾಂಗಿ…

ಮಲಯಾಳಿ ಸೆಟ್‌ ಸೀರೆ ಎಂದೇ ಹೆಸರಾಗಿರುವ ಕಸವು ಸೀರೆಗಳಿಗೆ ವಿದೇಶಗಳಲ್ಲೂ ಬೇಡಿಕೆ ಇದೆ. ನೋಡಲೂ ಅಂದ, ಉಡಲು ಆರಾಮದಾಯಕ ಆಗಿರುವುದು ಈ ಸೀರೆಗಳ ಹೆಚ್ಚುಗಾರಿಕೆ.

ಸ್ವರ್ಣದ ಜರಿ ಉಳ್ಳ ಮಬ್ಬು ಬಿಳುಪು ಅಥವಾ ಬಿಳಿಬಣ್ಣದ ಸೀರೆಯನ್ನು ಮಲಯಾಳಿ ಸೆಟ್‌ ಸೀರೆ ಅಂತ ಕರೆಯುತ್ತಾರೆ. ಆದರೆ ಇದರ ನಿಜವಾದ ಹೆಸರುಕಸವು ಸೀರೆ.ಕೈಮಗ್ಗದಿಂದ ನೇಯಲಾಗುವ ಈ ವಿಶಿಷ್ಟ ಸೀರೆಯನ್ನು ಹಿಂದೆ ರಾಜಮನೆತನಕ್ಕೆ ಸೇರಿದವರು ಉಡುತ್ತಿದ್ದರು. ನಂತರ ಜನಸಾಮಾನ್ಯರು ಮದುವೆ, ಹಬ್ಬ- ಹರಿದಿನಗಳಲ್ಲಿ ಉಡಲು ಆರಂಭಿಸಿದರು.2018ರಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹದಿಂದ, ಬಹಳಷ್ಟು ನೇಕಾರರುಕಷ್ಟಕ್ಕೆ ಸಿಕ್ಕಿಕೊಂಡರು. ಪ್ರವಾಹದ ಸಂದರ್ಭದಲ್ಲಿ ಎಷ್ಟೋ ಕೈಮಗ್ಗಗಳು ನೀರಿನಲ್ಲಿ ಕೊಚ್ಚಿಹೋದವು,ಕೆಲವು ಮುರಿದುಹೋದವು. ಹೀಗಾಗಿ ವ್ಯಾಪಾರದಲ್ಲಿ ವಿಪರೀತ ನಷ್ಟ ಉಂಟಾಯಿತು.

ಆನಂತರದ ದಿನಗಳಲ್ಲಿ ಈ ಕೈಮಗ್ಗಕ್ಕೆ ಬೇಡಿಕೆ ಹೆಚ್ಚಿಸಲುಕೆಲವು ಎನ್‌.ಜಿ.ಓ.ಗಳು ಮುಂದಾದವು. ಮೇಕ್‌ಓವರ್‌ ಪಡೆದಕಸವು ಸೀರೆಗಳನ್ನು ತಯಾರಿಸಿ ಅವುಗಳಿಗೆ ಮಾರುಕಟ್ಟೆ ಸೃಷ್ಟಿಸಲು ಮುಂದೆಬಂದವು. ಇವುಗಳನ್ನು ಮಾಡರ್ನ್ ಕಸವು ಸೀರೆ ಎನ್ನಲಾಗುತ್ತದೆ. ತಿಳಿಹಸಿರು,ಕಂದು, ಬೂದು, ಹಳದಿ, ಗುಲಾಬಿ,ಕೇಸರಿ, ಕೆಂಪು, ನೀಲಿ, ಮುಂತಾದ ತಿಳಿಬಣ್ಣದಕಸವು ಸೀರೆಗಳನ್ನು ನೇಯಲು ನೇಕಾರರಿಗೆ ಉತ್ತೇಜನ ನೀಡಿದವು. ಇಷ್ಟಾದಮೇಲೆ, ಈ ಸೀರೆಗಳಿಗೆಕೇರಳದಲ್ಲಷ್ಟೇ ಅಲ್ಲ, ಅನ್ಯರಾಜ್ಯಗಳಲ್ಲೂ ಬೇಡಿಕೆ ಹೆಚ್ಚಾಯಿತು.

ಆನ್‌ಲೈನ್‌ ಮೂಲಕ ಬಹಳಷ್ಟು ಜನ ಈಗ ಬಟ್ಟೆ-ಬರೆ ಖರೀದಿಸುವ ಕಾರಣ, ಈ ಸೀರೆಗಳು ದೇಶದ ಮೂಲೆಮೂಲೆಗೂ ತಲುಪಿದವು. ನೋಡಲೂ ಅಂದ, ಉಡಲೂ ಆರಾಮದಾಯಿಕ ಆಗಿರುವಕಸವು ಸೀರೆಗಳಿಗ ವಿದೇಶಗಳಲ್ಲೂ ಬೇಡಿಕೆ ಇದೆ! ಇವುಗಳನ್ನುಕಚೇರಿಗೂ ಉಟ್ಟು ಕೊಂಡು ಹೋಗಬಹುದು. ಅಧ್ಯಾಪಕಿಯರು, ವಾರ್ತಾವಾಚಕರು, ಕಲೆಯತ್ತ ಒಲವು ಹೊಂದಿರುವವರು, ಶಾಸ್ತ್ರೀಯ ನೃತ್ಯಗಾರ್ತಿಯರು, ಸಾಹಿತಿಗಳು, ರಂಗಕಲಾವಿದರು, ಹೀಗೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಕೆಲಸ ಮಾಡುವ ಮಹಿಳೆಯರಿಗೆ ಈ ಸೀರೆಗಳ ಮೇಲೆ ಒಲವು ಇದೆ.

ಇವು ತೀರಾ ಸಾಂಪ್ರದಾಯಿಕವೂ ಅಲ್ಲ, ಅತೀ ಆಧುನಿಕವೂ ಅಲ್ಲ. ಹಾಗಾಗಿಯೇ ಇವುಗಳಿಗೆ ಬೇಡಿಕೆ ಹೆಚ್ಚು ಎಂದರೆ ತಪ್ಪಾಗಲಾರದು. ಪೂರ್ತಿ ಸೀರೆ ಸಾಲಿಡ್‌ ಕಲರ್ಡ್‌ (ಒಂದೇ ಬಣ್ಣದ್ದು) ಆಗಿದ್ದು,ಕೇವಲ ರವಿಕೆ ಬೇರೆ ಬಣ್ಣದ್ದೂ ಆಗಿರಬಹುದು. ಸೀರೆಗೆ ಮ್ಯಾಚ್‌ ಆಗದೆ ಇರುವ ಬಣ್ಣದ ರವಿಕೆಯನ್ನೂ ತೊಡಬಹುದು. ನಿಮ್ಮಲ್ಲೂ ಕಸವು ಸೀರೆಗಳಿದ್ದರೆ ಅವುಗಳನ್ನು ಉಟ್ಟು ಮೆರೆಯಿರಿ. ಇಲ್ಲವೇ,ಭಾರತೀಯ ನೇಕಾರರಿಗೆ ಉತ್ತೇಜನ ನೀಡಲು ಒಂದು ಕಸವು ಸೀರೆಯನ್ನಾದರೂ ಖರೀದಿಸಿ.

 

– ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

ಸಂಘರ್ಷದ ನಡುವೆ ಶಾಂತಿ ಪಸರಿಸುವ ನವ ಭಾರತ ನಿರ್ಮಾಣ ಮಾಡಿ : ಯುವಜನತೆಗೆ ಪ್ರಧಾನಿ ಮೋದಿ ಕರೆ

ಸಂಘರ್ಷದ ನಡುವೆ ಶಾಂತಿ ಪಸರಿಸುವ ನವ ಭಾರತ ನಿರ್ಮಾಣ ಮಾಡಿ : ಯುವಜನತೆಗೆ ಪ್ರಧಾನಿ ಮೋದಿ ಕರೆ

ಕಾಂಗ್ರೆಸ್‌ ಭದ್ರಕೋಟೆಗೆ ಹೊಸ ಮುಖಗಳ ಲಗ್ಗೆ

ಕಾಂಗ್ರೆಸ್‌ ಭದ್ರಕೋಟೆಗೆ ಹೊಸ ಮುಖಗಳ ಲಗ್ಗೆ

ಮಸೀದಿಯೋ ಅಥವಾ ಮಂದಿರವೋ…? ಬಾಬ್ರಿ ಮಸೀದಿಯಿಂದ ಕುತುಬ್‌ ಮಿನಾರ್‌ವರೆಗೆ…

ಮಸೀದಿಯೋ ಅಥವಾ ಮಂದಿರವೋ…? ಬಾಬ್ರಿ ಮಸೀದಿಯಿಂದ ಕುತುಬ್‌ ಮಿನಾರ್‌ವರೆಗೆ…

ಆರ್ಥಿಕ ಪ್ರಗತಿಗೆ ತಡೆಯಾಗಿರುವ ಹಣದುಬ್ಬರ

ಆರ್ಥಿಕ ಪ್ರಗತಿಗೆ ತಡೆಯಾಗಿರುವ ಹಣದುಬ್ಬರ

ಲಕ್ನೋ ಎಂಬ ಲಕ್ಷ್ಮಣಪುರಿ…!

ಲಕ್ನೋ ಎಂಬ ಲಕ್ಷ್ಮಣಪುರಿ…!

ಪದವಿಪೂರ್ವ ಕಾಲೇಜುಗಳಲ್ಲಿ ಸೂಕ್ತ ಸೌಲಭ್ಯ ಸಿಗಲಿ

ಪದವಿಪೂರ್ವ ಕಾಲೇಜುಗಳಲ್ಲಿ ಸೂಕ್ತ ಸೌಲಭ್ಯ ಸಿಗಲಿ

ತಾಲೂಕಿನಲ್ಲಿ ಉತ್ತಮ ಮಳೆ : ಹರ್ಷಗೊಂಡ ರೈತಾಪಿ ಜನ

ತಾಲೂಕಿನಲ್ಲಿ ಉತ್ತಮ ಮಳೆ : ಹರ್ಷಗೊಂಡ ರೈತಾಪಿ ಜನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

987554

 ಹೈಹೀಲ್ ಹಾಕುತ್ತಿದ್ದಿರಾ ? ಹಾಗಾದರೆ ಈ ಸ್ಟೋರಿ ತಪ್ಪದೆ ಓದಿ

cats

ತಲೆಹೊಟ್ಟಿನ ಸಮಸ್ಯೆ ನಿವಾರಣೆಗೆ ಸುಲಭ ವಿಧಾನ

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

ಜೂ. ವಿಶ್ವಕಪ್‌ ಶೂಟಿಂಗ್‌: ಭಾರತಕ್ಕೆ ಅಗ್ರಸ್ಥಾನ

ಜೂ. ವಿಶ್ವಕಪ್‌ ಶೂಟಿಂಗ್‌: ಭಾರತಕ್ಕೆ ಅಗ್ರಸ್ಥಾನ

ಸಂಘರ್ಷದ ನಡುವೆ ಶಾಂತಿ ಪಸರಿಸುವ ನವ ಭಾರತ ನಿರ್ಮಾಣ ಮಾಡಿ : ಯುವಜನತೆಗೆ ಪ್ರಧಾನಿ ಮೋದಿ ಕರೆ

ಸಂಘರ್ಷದ ನಡುವೆ ಶಾಂತಿ ಪಸರಿಸುವ ನವ ಭಾರತ ನಿರ್ಮಾಣ ಮಾಡಿ : ಯುವಜನತೆಗೆ ಪ್ರಧಾನಿ ಮೋದಿ ಕರೆ

ಮೆಕಲಮ್‌ಗೆ ಸೋಲಿನ ವಿದಾಯ

ಮೆಕಲಮ್‌ಗೆ ಸೋಲಿನ ವಿದಾಯ

ಕಾಂಗ್ರೆಸ್‌ ಭದ್ರಕೋಟೆಗೆ ಹೊಸ ಮುಖಗಳ ಲಗ್ಗೆ

ಕಾಂಗ್ರೆಸ್‌ ಭದ್ರಕೋಟೆಗೆ ಹೊಸ ಮುಖಗಳ ಲಗ್ಗೆ

2ನೇ ಸ್ಥಾನದ ಮೇಲೆ ರಾಜಸ್ಥಾನ್‌  ಕಣ್ಣು 

2ನೇ ಸ್ಥಾನದ ಮೇಲೆ ರಾಜಸ್ಥಾನ್‌  ಕಣ್ಣು 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.