ಕಿಚ್ಚ ಸುದೀಪ್ ನಕಲಿ ಪೋಸ್ಟರ್ ವೈರಲ್!
Team Udayavani, Jan 5, 2022, 1:04 PM IST
ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಮ್ಮೆ ಸ್ಟಾರ್ ನಟರ ಬಗ್ಗೆ ಹರಿದಾಡುವ ಅಂತೆ-ಕಂತೆ ಸುದ್ದಿಗಳು ಅಭಿಮಾನಿಗಳಿಗೂ ತಪ್ಪು ಸಂದೇಶ ನೀಡಿ, ಹಾದಿ ತಪ್ಪಿಸುತ್ತವೆ. ಈಗ ನಟ ಕಿಚ್ಚ ಸುದೀಪ್ ಅವರ ವಿಷಯದಲ್ಲೂ ಅವರ ಅಭಿಮಾನಿಗಳಿಗೆ ಇಂಥದ್ದೇ ತಪ್ಪು ಸಂದೇಶವೊಂದು ರವಾನೆಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ನಟ ಕಿಚ್ಚ ಸುದೀಪ್, “ನಮಸ್ತೆ ಗೋಷ್ಟ್’ ಎಂಬ ಹಾರರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾವನ್ನು “ಬಾಹುಬಲಿ’ ಖ್ಯಾತಿಯ ಪ್ರಭಾಸ್ ಅವರಿಗೆ “ಸಾಹೋ’ ಸಿನಿಮಾವನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ಸುಜಿತ್ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ಫಸ್ಟ್ಲುಕ್ ಪೋಸ್ಟರ್ ಎಂದು ಹೇಳಲಾದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇನ್ನು ಈ ಪೋಸ್ಟರ್ ಅನ್ನು ಸುದೀಪ್ ಅಭಿಮಾನಿಗಳು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡು ತಮ್ಮ ನೆಚ್ಚಿನ ನಟನ ಹೊಸ ಸಿನಿಮಾಕ್ಕೆ ಶುಭಾಶಯವನ್ನು ಕೋರುತ್ತಿದ್ದಾರೆ. ಆದರೆ ಅಸಲಿ ಸಂಗತಿ ಎಂದರೆ, “ನಮಸ್ತೆ ಗೋಷ್ಟ್’ ಎಂಬ ಹೆಸರಿನ ಯಾವುದೇ ಸಿನಿಮಾದಲ್ಲಿ ಸದ್ಯಕ್ಕೆ ಸುದೀಪ್ ಅಭಿನಯಿಸುತ್ತಿಲ್ಲ ಎಂಬುದು ಅವರ ಆಪ್ತ ಮೂಲಗಳ ಅಧಿಕೃತ ಮಾಹಿತಿ. ಈ ಸಿನಿಮಾದ ಬಗ್ಗೆ ಸ್ವತಃ ಸುದೀಪ್ ಅವರಾಗಲಿ, ಅಥವಾ ನಿರ್ದೇಶಕ ಸುಜಿತ್ ಅವರಾಗಲಿ, ಅಧಿಕೃತವಾಗಿ ಯಾವುದೇ ಪೋಸ್ಟರ್ ಆಗಲಿ ಅಥವಾ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನಾಗಲಿ ಹಂಚಿಕೊಂಡಿಲ್ಲ. ಸುಮ್ಮನೆ ಯಾರೋ ವಿನ್ಯಾಸ ಮಾಡಿರುವ “ನಮಸ್ತೆ ಗೋಷ್ಟ್’ ಹೆಸರಿನ ಇಂಥದ್ದೊಂದು ಪೋಸ್ಟರ್ ಕಿಚ್ಚನ ಅಭಿಮಾನಿಗಳಿಗೆ ತಪ್ಪು ಸಂದೇಶ ನೀಡಿರುವುದಂತೂ ಸುಳ್ಳಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್ನಿಂದ ಸುಳ್ಳಿನ ರಾಜಕಾರಣ: BYR
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?