ರಸ್ಸೆಲ್ ಸೂಪರ್ ಸ್ಟ್ರೈಕರ್, ರಾಹುಲ್ ಸ್ಟೈಲಿಶ್: ಇಲ್ಲಿದೆ ಐಪಿಎಲ್ ಪ್ರಶಸ್ತಿ ಪಟ್ಟಿ

Team Udayavani, May 13, 2019, 12:41 PM IST

ಹೈದರಾಬಾದ್: ವರ್ಣರಂಜಿತ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಅದ್ದೂರಿ ತೆರೆ ಬಿದ್ದಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ನಾಲ್ಕನೇ ಬಾರಿಗೆ ಚಾಂಪಿಯನ್ ಆಗಿ ದಾಖಲೆ ನಿರ್ಮಿಸಿದೆ. ಐಪಿಎಲ್ ನಲ್ಲಿ ಪ್ರಥಮ, ದ್ವಿತೀಯ, ಪಂದ್ಯ ಪುರುಷ ಪ್ರಶಸ್ತಿಗಳ ಜೊತೆಗೆ ಇತರ ಕೆಲವು ಪ್ರಶಸ್ತಿಗಳನ್ನೂ ನೀಡಲಾಗುತ್ತದೆ. ಅವು ಯಾವುದು, ಯಾರಿಗೆ ಸಿಕ್ಕಿದೆ ? ಇಲ್ಲಿದೆ ಫುಲ್ ಡಿಟೈಲ್ಸ್.

ಆರೆಂಜ್ ಕ್ಯಾಪ್ ( ಅತೀ ಹೆಚ್ಚು ರನ್): ಡೇವಿಡ್ ವಾರ್ನರ್ – ಸನ್ ರೈಸರ್ಸ್ ಹೈದರಾಬಾದ್ ( 692 ರನ್- 12 ಪಂದ್ಯ).

ಪರ್ಪಲ್ ಕ್ಯಾಪ್ ( ಅತೀ ಹೆಚ್ಚು ವಿಕೆಟ್) : ಇಮ್ರಾನ್ ತಾಹೀರ್ – ಚೆನ್ನೈ ಸೂಪರ್ ಕಿಂಗ್ಸ್ (26 ವಿಕೆಟ್- 17 ಪಂದ್ಯ)

ಗೇಮ್ ಚೇಂಜರ್ ಆಫ್ ದಿ ಸೀಸನ್: ರಾಹುಲ್ ಚಾಹರ್ – ಮುಂಬೈ ಇಂಡಿಯನ್ಸ್

ಸ್ಟೈಲಿಶ್ ಆಟಗಾರ: ಕೆ.ಎಲ್. ರಾಹುಲ್ – ಕಿಂಗ್ಸ್ ಇಲವೆನ್ ಪಂಜಾಬ್

ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್: ಆಂದ್ರೆ ರಸ್ಸೆಲ್ – ಕೊಲ್ಕತ್ತಾ ನೈಟ್ ರೈಡರ್ಸ್ ( 204.81 ಸ್ಟ್ರೈಕ್ ರೇಟ್)

ಸರಣಿಯ ಅತುತ್ತಮ ಕ್ಯಾಚ್: ಕೈರನ್ ಪೊಲಾರ್ಡ್ – ಮುಂಬೈ ಇಂಡಿಯನ್ಸ್ ( ಲೀಗ್ ಹಂತದಲ್ಲಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಸುರೇಶ್ ರೈನಾ ನೀಡಿದ ಕ್ಯಾಚ್ )

ಅತೀ ವೇಗದ ಅರ್ಧ ಶತಕ
: ಹಾರ್ದಿಕ್ ಪಾಂಡ್ಯ – ಮುಂಬೈ ಇಂಡಿಯನ್ಸ್ ( ಕೊಲ್ಕತ್ತಾ ವಿರುದ್ಧ 17 ಎಸೆತಗಳಲ್ಲಿ ಅರ್ಧಶತಕ)

ಮೋಸ್ಟ್ ವ್ಯಾಲ್ಯೂವೇಬಲ್ ಆಟಗಾರ: ಆಂದ್ರೆ ರಸ್ಸೆಲ್ – ಕೊಲ್ಕತ್ತಾ ನೈಟ್ ರೈಡರ್ಸ್ ( 510 ರನ್- 11 ವಿಕೆಟ್)

ಫೇರ್ ಪ್ಲೇ ಅವಾರ್ಡ್: ಸನ್ ರೈಸರ್ಸ್ ಹೈದರಾಬಾದ್ ತಂಡ

ಉದಯೋನ್ಮುಖ ಆಟಗಾರ: ಶುಭ್ ಮನ್ ಗಿಲ್ – ಕೊಲ್ಕತ್ತಾ ನೈಟ್ ರೈಡರ್ಸ್

ಅತ್ಯುತ್ತಮ ಪಿಚ್ ಮತ್ತು ಗ್ರೌಂಡ್
: ಮೊಹಾಲಿ ಮತ್ತು ಹೈದರಾಬಾದ್.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ