ಕೋಲ್ಕತಾ : ವಿದ್ಯಾರ್ಥಿಗಳಿಗೆ ಸಿಕ್ಕಿತು ಭಾರೀ ವೇತನದ ಉದ್ಯೋಗ
Team Udayavani, Jul 11, 2020, 11:51 AM IST
ಕೋಲ್ಕತಾ: ಕೋವಿಡ್ ಲಾಕ್ಡೌನ್, ಇತರ ಸಂಕಷ್ಟಗಳ ಹೊರತಾಗಿಯೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕೋರ್ಸ್ ಮುಕ್ತಾಯಗೊಳಿಸಿದ ವಿದ್ಯಾರ್ಥಿಗಳಿಗೆ ಉತ್ತಮ ವೇತನದ ಉದ್ಯೋಗ ಲಭಿಸಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಲ್ಕತ್ತಾ, ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ (ಐಎಸ್ಐ) ಖರಗ್ಪುರ ಐಐಟಿ ಮೂರು ಸೇರಿಕೊಂಡು ರಚಿಸಿರುವ ಪಿಜಿಡಿ ಬಿಎ ಕೋರ್ಸ್ ಮುಕ್ತಾಯಗೊಳಿಸಿದ ವಿದ್ಯಾರ್ಥಿಗಳಿಗೆ ವಾರ್ಷಿಕ 41.29 ಲಕ್ಷ ರೂ. ವೇತನ ಇರುವ ಉದ್ಯೋಗ ಲಭಿಸಿದೆ.
ಆಶಾದಾಯಕ ವಿಚಾರವೆಂದರೆ ಮೂಲ ವೇತನ ಕಳೆದ ವರ್ಷಕ್ಕಿಂತ ಶೇ.6ರಷ್ಟು ಏರಿಕೆಯಾಗಿದೆ. ವಿದ್ಯಾರ್ಥಿಗಳ ಸರಾಸರಿ ವಾರ್ಷಿಕ ವೇತನ 26.31 ಲಕ್ಷ ರೂ. ಇದೆ. ಕಳೆದ ವರ್ಷ ವಿದ್ಯಾರ್ಥಿ ಗಳಿಗೆ 25.05 ಲಕ್ಷ ರೂ. ವೇತನ ನೀಡಲಾಗಿತ್ತು ಎಂದು ಮೂರು ಸಂಸ್ಥೆಗಳು ಹೇಳಿಕೊಂಡಿವೆ.
ಪಿಜಿಡಿಬಿಎ ಪದವಿ ಪಡೆಯುತ್ತಿರುವ ನಾಲ್ಕನೇ ಬ್ಯಾಚ್ ಇದಾಗಿದ್ದು, ಅದಾನಿ, ಅಲ್ಶಯಾ ಗ್ರೂಪ್, ಐಸಿಐಸಿಐ ಬ್ಯಾಂಕ್ ಸೇರಿದಂತೆ ಪ್ರಮುಖ ಸಂಸ್ಥೆಗಳಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಉದ್ಯೋಗ ಲಭಿಸಿದೆ ಎಂದು ಸಂಸ್ಥೆಗಳು ಹೇಳಿಕೊಂಡಿವೆ.