ಡಿಕೆಶಿ ಯಾವುದೇ ತಪ್ಪು ಮಾಡಿಲ್ಲಾ ಎಂದಾದರೆ ತನಿಖೆ ಎದುರಿಸಲಿ ;ಈಶ್ವರಪ್ಪ


Team Udayavani, Oct 8, 2020, 6:20 PM IST

ಡಿಕೆಶಿ ಯಾವುದೇ ತಪ್ಪು ಮಾಡಿಲ್ಲಾ ಎಂದಾದರೆ ತನಿಖೆ ಎದುರಿಸಲಿ ;ಈಶ್ವರಪ್ಪ

ರಾಯಚೂರು: ಹಿಂದೆ ಬಿ.ಎಸ್‌.ಯಡಿಯೂರಪ್ಪರ ಮೇಲೂ ಆರೋಪ ಕೇಳಿ ಬಂದಾಗ ಅವರು ಜೈಲಿಗೆ ಹೋಗಿ ನಿರ್ದೋಷಿಯಾಗಿ ಹೊರಬಂದಿದ್ದರು. ಅವರಂತೆ ಡಿ.ಕೆ. ಶಿವಕುಮಾರ್‌ ಕೂಡ ತಪ್ಪು ಮಾಡದಿದ್ದಲ್ಲಿ ನಿರ್ದೋಷಿಯಾಗಿ ಬರಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಸವಾಲೆಸೆದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ. ಶಿವಕುಮಾರ್‌ ಯಾವುದೇ ತಪ್ಪು ಮಾಡಿಲ್ಲ, ಸೀತೆಯಷ್ಟೆ ಪವಿತ್ರ ಎನ್ನುವುದಾದರೆ ತನಿಖೆ ಎದುರಿಸಲಿ. ಈ ಹಿಂದೆ ಡಿ.ಕೆ. ಶಿವಕುಮಾರ್‌ ಮನೆ ಮೇಲೆ ದಾಳಿ ನಡೆದಾಗ ಹವಾಲಾ ಹಣ, ಅಕ್ರಮ ದಾಖಲೆಗಳು ದೊರಕಿದ್ದವು. ಆಗ ಜೈಲಿಗೆ ಹೋಗಿ ಬಂದಿದ್ದರು. ಈಗ ಪುನಃ ದಾಳಿಯಾಗಿದೆ. ಈಗಲೂ ಹಣ, ದಾಖಲೆಗಳು ದೊರಕಿವೆ.

ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಜೆಪಿಯವರ ಮೇಲೆ ಸಿಬಿಐ ದಾಳಿ ನಡೆದರೆ ಅದು ರಾಜಕೀಯ ಅಲ್ಲ. ಈಗ ಕಾಂಗ್ರೆಸ್‌ನವರ ಮೇಲೆ ದಾಳಿಯಾದರೆ ಮಾತ್ರ ಹೇಗೆ ರಾಜಕೀಯ ಪ್ರೇರಿತವಾಗುತ್ತದೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ :ಆದಿಲ್‌ಶಾಹಿ ಕಾಲದ ನೀರು ಪೂರೈಕೆಯ ಗಾರೆ ಕೊಳವೆ ಪತ್ತೆ

ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಸೌಲಭ್ಯ ಹಿಂದಿನಿಂದಲೂ ಚರ್ಚೆಯಲ್ಲಿದೆ. ವಾಲ್ಮೀಕಿ ಸಮಾಜಕ್ಕೆ ನೀಡಿದ ಮೀಸಲಾತಿಯನ್ನು ಕುರುಬರು ಕಸಿಯುವುದಿಲ್ಲ. ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ಬದ್ಧ ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ವರದಿ ಕೂಡ ಸಲ್ಲಿಕೆಯಾಗಿದೆ. ಕುರುಬ ಸಮಾಜಕ್ಕೆ ಎಸ್‌ಟಿ
ಮೀಸಲಾತಿ ಕೊಡಬೇಕು ಎನ್ನುವ ಕೂಗಿಗೆ ಸ್ವಾಮೀಜಿಗಳು ನೇತೃತ್ವ ವಹಿಸಿದ್ದಾರೆ. ಹಿಂದುಳಿದ ಸಮಾಜಕ್ಕೆ ಮೀಸಲಾತಿ
ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದ್ದು, ಅದಕ್ಕೆ ನನ್ನ ಬೆಂಬಲವಿದೆ ಎಂದರು.

ಗ್ರಾಪಂ ಚುನಾವಣೆಗೆ ಸರ್ಕಾರ ಸಿದ್ಧವಿದೆ. ಆದರೆ, ಜನ ಚುನಾವಣೆಗೆ ಸಿದ್ಧರಿಲ್ಲ. ಕೊರೊನಾ ವೇಳೆ ಚುನಾವಣೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ತಜ್ಞರು ಕೂಡ ಚುನಾವಣೆ ಬೇಡ ಎನ್ನುತ್ತಿದ್ದಾರೆ ಎಂದರು. ಮಾಸ್ಕ್ ಧರಿಸದಿದ್ದಲ್ಲಿ ದಂಡ ಹಾಕಲು ವಿರೋಧ ಬರುತ್ತಿರುವ ಕಾರಣ ದಂಡದ ಮೊತ್ತ ಕಡಿಮೆ ಮಾಡಲಾಗಿದೆ ಎಂದರು.

ಟಾಪ್ ನ್ಯೂಸ್

ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌: ಸೋತರೂ ಸಿಂಧು ಉಪಾಂತ್ಯಕ್ಕೆ ಅಡ್ಡಿಯಿಲ್ಲ

ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌: ಸೋತರೂ ಸಿಂಧು ಉಪಾಂತ್ಯಕ್ಕೆ ಅಡ್ಡಿಯಿಲ್ಲ

ವಿಧಾನಪರಿಷತ್‌ ಚುನಾವಣೆ: ಬಂಟ್ವಾಳ, ಕುಂದಾಪುರದಲ್ಲಿ ಗರಿಷ್ಠ ಮತಗಟ್ಟೆಗಳು

ವಿಧಾನಪರಿಷತ್‌ ಚುನಾವಣೆ: ಬಂಟ್ವಾಳ, ಕುಂದಾಪುರದಲ್ಲಿ ಗರಿಷ್ಠ ಮತಗಟ್ಟೆಗಳು

ದಕ್ಷಿಣ ಕನ್ನಡ ಜಿಲ್ಲೆ: 10 ಮಂದಿಗೆ ಸೋಂಕು

ದಕ್ಷಿಣ ಕನ್ನಡ ಜಿಲ್ಲೆ: 10 ಮಂದಿಗೆ ಸೋಂಕು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಟ್ರಾಫಿಕ್‌ ಪೊಲೀಸರ ಮೇಲೆ ದಾಳಿ ನಡೆಸಿದ್ದು ನಾವೇ: ಐಸಿಸ್‌

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಕೀಲರ ಪರಿಷತ್‌ ಚುನಾವಣೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

ವಕೀಲರ ಪರಿಷತ್‌ ಚುನಾವಣೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆ

ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆ

ರಾಜ್ಯದಲ್ಲಿ 413 ಕೋವಿಡ್‌ ಪಾಸಿಟಿವ್‌ ಸೋಂಕು ಪತ್ತೆ: ನಾಲ್ವರು ಸಾವು 

ರಾಜ್ಯದಲ್ಲಿ 413 ಕೋವಿಡ್‌ ಪಾಸಿಟಿವ್‌ ಸೋಂಕು ಪತ್ತೆ: ನಾಲ್ವರು ಸಾವು 

ಸೂರಜ್‌ ರೇವಣ್ಣ ನಾಮಪಪತ್ರ ಪ್ರಶ್ನಿಸಿ ಅರ್ಜಿ: ಸರಕಾರ, ಆಯೋಗಕ್ಕೆ ನೋಟಿಸ್‌

ಸೂರಜ್‌ ರೇವಣ್ಣ ನಾಮಪಪತ್ರ ಪ್ರಶ್ನಿಸಿ ಅರ್ಜಿ: ಸರಕಾರ, ಆಯೋಗಕ್ಕೆ ನೋಟಿಸ್‌

11-sadsaa

ಎಸ್.ಆರ್. ವಿಶ್ವನಾಥ್ ಗೆ ಸ್ಕೆಚ್: ಆಣೆ ಪ್ರಮಾಣಕ್ಕೆ ಕರೆದ ಗೋಪಾಲಕೃಷ್ಣ

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌: ಸೋತರೂ ಸಿಂಧು ಉಪಾಂತ್ಯಕ್ಕೆ ಅಡ್ಡಿಯಿಲ್ಲ

ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌: ಸೋತರೂ ಸಿಂಧು ಉಪಾಂತ್ಯಕ್ಕೆ ಅಡ್ಡಿಯಿಲ್ಲ

ವಿಧಾನಪರಿಷತ್‌ ಚುನಾವಣೆ: ಬಂಟ್ವಾಳ, ಕುಂದಾಪುರದಲ್ಲಿ ಗರಿಷ್ಠ ಮತಗಟ್ಟೆಗಳು

ವಿಧಾನಪರಿಷತ್‌ ಚುನಾವಣೆ: ಬಂಟ್ವಾಳ, ಕುಂದಾಪುರದಲ್ಲಿ ಗರಿಷ್ಠ ಮತಗಟ್ಟೆಗಳು

ನೆರಿಯ: ಒಂಟಿ ಸಲಗ ಓಡಾಟ, ಬಾಳೆ ಗಿಡಗಳಿಗೆ ಹಾನಿ

ನೆರಿಯ: ಒಂಟಿ ಸಲಗ ಓಡಾಟ, ಬಾಳೆ ಗಿಡಗಳಿಗೆ ಹಾನಿ

ಅಡಿಕೆಗೆ ಸಂಬಂಧಿಸಿ ಸಂಶೋಧನೆ: ನಿಟ್ಟೆ ವಿವಿ, ಎಆರ್‌ಡಿಎಫ್‌, ಕ್ಯಾಂಪ್ಕೋ ನಡುವೆ ಒಪ್ಪಂದ

ಅಡಿಕೆಗೆ ಸಂಬಂಧಿಸಿ ಸಂಶೋಧನೆ: ನಿಟ್ಟೆ ವಿವಿ, ಎಆರ್‌ಡಿಎಫ್‌, ಕ್ಯಾಂಪ್ಕೋ ನಡುವೆ ಒಪ್ಪಂದ

ಮರಳು ಸಮಸ್ಯೆ : ಪರಿಹಾರಕ್ಕೆ ಕ್ರಮ: ಆಗ್ರಹ

ಮರಳು ಸಮಸ್ಯೆ : ಪರಿಹಾರಕ್ಕೆ ಕ್ರಮ: ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.