
ಅಚ್ಚೇ ದಿನ್ ಬರಬೇಕು ಎಂದರೆ ಕೆಆರ್ ಪಿಪಿ ಪಕ್ಷಕ್ಕೆ ಬೆಂಬಲ ನೀಡಿ: ಧರಪ್ಪ ನಾಯಕ
Team Udayavani, Feb 28, 2023, 1:12 PM IST

ಕುರುಗೋಡು: ಮೋದಿ ಸರ್ಕಾರ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ವಧು-ವರರು ಕೂಡ ಇಂದು ತಾಳಿ ಕಟ್ಟುವ ಬದಲು ಅರಿಸಿನ ಕೊಂಬಿನ ದಾರ ಕಟ್ಟುವ ಪರಿಸ್ಥಿತಿಗೆ ತಂದೂಡ್ಡಿದೆ ಎಂದು ಕೆಆರ್ ಪಿಪಿ ಪಕ್ಷದ ಅಭ್ಯರ್ಥಿ ಧರಪ್ಪ ನಾಯಕ ಹೇಳಿದರು.
ಸಮೀಪದ ಮಣ್ಣೂರು ಗ್ರಾಮಕ್ಕೆ ಭೇಟಿ ಕೊಟ್ಟು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಇವತ್ತಿನ ದಿನಗಳಲ್ಲಿ ಗ್ಯಾಸ್, ಎಣ್ಣೆ, ಬಸ್, ಅಕ್ಕಿ, ಬೇಳೆ ಸೇರಿದಂತೆ ಇತರೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿ ಸಾರ್ವಜನಿಕರ ಬದುಕು ಅತಂತ್ರವಾಗಿ ಬಿಟ್ಟಿದೆ. ಡಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಿದ್ದಾರೆ. ಆದ್ರೆ ಜನಪರ ಕೆಲಸ ಮಾಡುತ್ತಿಲ್ಲ. ಅದರ ಬದಲಾಗಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಎಲ್ಲಿ ನೋಡಿದರೂ 40% ಕಮಿಷನ್ ಗುತ್ತಿಗೆದಾರರ ಬಳಿ ಹೋಗಿ ಕೇಳಿ ಶಾಸಕರ ಮತ್ತು ಸರ್ಕಾರದ ಬಗ್ಗೆ ನಿಮಗೆ ಸಂಪೂರ್ಣ ಗೊತ್ತಾಗುತ್ತದೆ ಎಂದರು.
2004 ರಲ್ಲಿ ಸಿರುಗುಪ್ಪ ಕ್ಷೇತ್ರ ಜೆಡಿಎಸ್ ಮತ್ತು ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು. ಅದನ್ನು ಛಿದ್ರ ಮಾಡಿ ಕಮಲ ಬಾವುಟ ಹರಿಸಿದ್ದೆ ಜನಾರ್ದನ ರೆಡ್ಡಿ ಹೊರತು ಸೋಮಲಿಂಗಪ್ಪ ಅಲ್ಲ ಎಂದರು.
20 ವರ್ಷ ಕಳೆದ ನಂತರ ಹೊಸ ಇತಿಹಾಸ ಮರುಕಳಿಸುತ್ತಿದ್ದೆ 40% ಕಮಿಷನ್ ಸರಕಾರ ಮತ್ತು ಜೆಡಿಎಸ್ ಹಾಗೂ ಕಾಂಗ್ರೆಸ್ ಭದ್ರ ಕೋಟೆಯನ್ನು ಛಿದ್ರ ಮಾಡಲು ಇವತ್ತು ಜನಾರ್ದನ ರೆಡ್ಡಿ ಕಂಕಣ ಬದ್ಧರಾಗಿದ್ದಾರೆ ಎಂದು ಹೇಳಿದರು.
ಇನ್ನೂ ಕಲ್ಯಾಣ ಕರ್ನಾಟಕದಲ್ಲಿ 6 ಜಿಲ್ಲೆಗಳಲ್ಲಿ ಜನಾರ್ದನ ರೆಡ್ಡಿ ಬಂದಿರುವುದರಿಂದ ಎರಡು ಪಕ್ಷದವರಿಗೆ ನಡುಕು ಶುರುವಾಗಿದೆ ಎಂದರು.
ಬಹಳ ದಿನಗಳಿಂದ ಮೋದಿ ದೇಶದ ಜನರಿಗೆ ಅಚ್ಚೇದಿನ್ ಆಯೆಗಾ ಎಂದು ಹೇಳುತ್ತಾ, ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಮತ್ತೆ ಅಚ್ಚೇದಿನ್ ಆಯಾಗ ಎಂದು ಹೇಳುತ್ತಿದ್ದಾರೆ. ಅದಕ್ಕಾಗಿ ಸಿರುಗುಪ್ಪ ಕ್ಷೇತ್ರದಲ್ಲಿ ಅಚ್ಚೇದಿನ್ ಬರಬೇಕು ಎಂದರೆ ಕೆಆರ್ ಪಿಪಿ ಪಕ್ಷಕ್ಕೆ ಬೆಂಬಲ ನೀಡಿ ಎಂದು ತಿಳಿಸಿದರು.
ಜನಾರ್ದನ ರೆಡ್ಡಿ ಶೀಘ್ರದಲ್ಲಿ ರೈತರ ಪರವಾಗಿ ಹೊಸ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಒಂದು-ಎರಡು ಎಕರೆ ಹೊಂದಿರುವ ಪ್ರತಿಯೊಬ್ಬ ರೈತನ ಕುಟುಂಬಕ್ಕೆ 15 ಸಾವಿರ ಸಿಗಲಿದೆ. ರೈತರಿಗೆ 7 ತಾಸು ವಿದ್ಯುತ್ ಸೌಲಭ್ಯವಿದ್ದು, ಅದು ಕೂಡ ಸರಿಯಾಗಿ ಕೊಡುತ್ತಿಲ್ಲ ಎಂದ ಅವರು, ಭತ್ತ ನಾಟಿ, ಕಾಳು ಕಟ್ಟುವ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆಯಾಗುತ್ತಿದ್ದು, ಆದ್ದರಿಂದ 9 ತಾಸು ವಿದ್ಯುತ್ ನೀಡಲಿದ್ದಾರೆ ಎಂದು ತಿಳಿಸಿದರು.
ಗ್ರಾಮದ ವಾಲ್ಮೀಕಿ ವೃತ್ತದಿಂದ ಪ್ರಾರಂಭಗೊಂಡ ಮೆರವಣಿಗೆ ಆಂಜನೇಯ ದೇವಸ್ಥಾನಕ್ಕೆ ಕೊನೆಗೊಂಡಿತು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಸಿದ್ದಯ್ಯ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಂಡ್ರಳು ಮಲ್ಲಿಕಾರ್ಜುನ, ಮುಖಂಡ
ಚಿಕ್ಕಬಳ್ಳಾರಿ ನಾಗಪ್ಪ, ಬಾಗೇವಾಡಿ ಗ್ರಾ.ಪಂ. ಉಪದ್ಯಕ್ಷ ನಾಗರಾಜ್, ಸತ್ಯನಾರಾಯಣ, ಪಂಪಾಪತಿ, ಸೇರಿದಂತೆ ಕೆಆರ್ ಪಿಪಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು, ಅಭಿಮಾನಿಗಳು ಇತರರು ಇದ್ದರು.
ಟಾಪ್ ನ್ಯೂಸ್
