ಕೋಳಿ ಮಾಂಸದ ಕೊರತೆ; ಬೆಲೆಯಲ್ಲಿ ಭಾರೀ ಹೆಚ್ಚಳ
ಆಹಾರದ ಅಭಾವ, ಸೆಕೆ
Team Udayavani, May 18, 2020, 6:05 AM IST
ಸಾಂದರ್ಭಿಕ ಚಿತ್ರ.
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಗಳಿಗೆ 15 ದಿನಗಳಿಂದ ಕೋಳಿಗಳ ಪೂರೈಕೆಯಲ್ಲಿ ಭಾರೀ ಇಳಿಕೆ ಯಾಗಿದ್ದು, ಮಾಂಸದ ಬೆಲೆ ಒಂದೇ ಸಮನೆ ಏರುತ್ತಿದೆ.
ಕೋಳಿ ಆಹಾರ (ಫೀಡ್)ದ ತೀವ್ರಅಭಾವ, ಸೆಕೆಯಿಂದಾಗಿ ಫಾರಂಗಳಲ್ಲಿ ಕೋಳಿ ಸಾಕಣೆ ಮಾಡದಿರುವ ಪರಿಣಾಮ ಪೂರೈಕೆ ಕಡಿಮೆಯಾಗಿದೆ ಎಂದು ಮಾರಾಟಗಾರರು ತಿಳಿಸಿದ್ದಾರೆ.
175 ರೂ. ದಾಟಿದ ಬೆಲೆ
ಕೋಳಿ ಮಾಂಸದ ಬೆಲೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿ ರುತ್ತದೆ. ಕಳೆದ ತಿಂಗಳು ಕೆಜಿಗೆ 70 ರೂ. ಇದ್ದ ಬೆಲೆ 15 ದಿನಗಳಲ್ಲಿ 100 ರೂ. ದಾಟಿತು. ಕಳೆದ ವಾರ 130 ರೂ.ಗಳ ಲ್ಲಿದ್ದರೆ, ಕಳೆದೆರಡು ದಿನಗಳಿಂದ 160 ರೂ.ಗೆ ತಲುಪಿದೆ. ಮೇ 15ರ ವೇಳೆಗೆ ಕೆಜಿಯೊಂದಕ್ಕೆ 175ರಿಂದ 190 ರೂ.ಗೇರಿದೆ.
ಕೋಳಿ ಆಹಾರಕ್ಕೆ (ಫೀಡ್) ಬಳಸುವ ಕಚ್ಚಾ ವಸ್ತುಗಳನ್ನು ಬೇರೆ ರಾಜ್ಯಗಳಿಂದ ತರಿಸಲಾಗುತ್ತದೆ. ಲಾಕ್ಡೌನ್ನಿಂದಾಗಿ 2 ತಿಂಗಳಿನಿಂದ ಬಾರದ ಕಾರಣ ಫೀಡ್ ಕೊರತೆಯಾಗಿದೆ.
ತಾಪ ತಾಳಲಾರದೆ ಸಾವು
ಎಪ್ರಿಲ್, ಮೇ ತಿಂಗಳುಯಲ್ಲಿ ಕೋಳಿ ಮರಿ, ಕೋಳಿಗಳ ಸಾವಿನ ಪ್ರಮಾಣ ಹೆಚ್ಚು. ಈ ಬಾರಿ ವಿಪರೀತ ಸೆಕೆಯಿಂದಾಗಿ ಸಾವಿನ ಸಂಖ್ಯೆ ಮತ್ತೂ ಹೆಚ್ಚಿದೆ. ಕೆಲವೆಡೆ ನೀರಿನ ಕೊರತೆಯೂ ಇದೆ ಎನ್ನುತ್ತಾರೆ ಕೋಳಿ ಮಾರಾಟಗಾರರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ