ಲಂಕಾಸುರನಿಗೆ ಪಾರ್ವತಿ ನಾಯಕಿ
Team Udayavani, Dec 10, 2020, 10:33 AM IST
ವಿನೋದ್ ಪ್ರಭಾಕರ್ “ಲಂಕಾಸುರ’ ಎಂಬ ಸಿನಿಮಾ ಒಪ್ಪಿಕೊಂಡಿರುವ ವಿಚಾರ ನಿಮಗೆ ಗೊತ್ತೇ ಇದೆ. ಈ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ. ಆಕೆ ಪಾರ್ವತಿ ಅರುಣ್. ಯಾವ ಪಾರ್ವತಿ ಅರುಣ್ ಎಂದರೆ ಮಲಯಾಳಂ ನಟಿ ಎನ್ನಬೇಕು. ಹಾಗಂತ ಆಕೆಕೇವಲ ಮಲಯಾಳಂಗೆ ಸೀಮಿತವಾಗಿಲ್ಲ.
ಈಗಾಗಲೇ ಕನ್ನಡದ ಒಂದು ಚಿತ್ರದಲ್ಲಿ ನಟಿಸಿದ್ದಾರೆ. ಅದು “ಗೀತಾ’. ಗಣೇಶ್ ನಾಯಕರಾಗಿರುವ “ಗೀತಾ’ ಚಿತ್ರದಲ್ಲಿ ಪಾರ್ವತಿ ನಟಿಸಿದ್ದರು. ಈಗ “ಲಂಕಾಸುರ’ ಮೂಲಕ ಮತ್ತೂಮ್ಮೆ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಸಂಕ್ರಾಂತಿಗೆ ಆರಂಭವಾಗಲಿದೆ. ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಪಾರ್ವತಿ ಅರುಣ್ ಅಭಿನಯಿಸಲಿದ್ದಾರೆ. ಎ.ಎಂ.ಎಸ್
ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಮೂರ್ಕಲ್ ಎಸ್ಟೇಟ್ ಚಿತ್ರವನ್ನು ನಿರ್ದೇಶಿಸಿದ್ದ, ಪ್ರಮೋದ್ಕುಮಾರ್ ಲಂಕಾಸುರ ಚಿತ್ರದ ನಿರ್ದೇಶಕರು. ಇದು ಅವರಿಗೆ ಎರಡನೇ ನಿರ್ದೇಶನದ ಚಿತ್ರ. ಚಿತ್ರಕ್ಕೆ ವಿಜೇತ್ಕೃಷ್ಣ ಸಂಗೀತ ನೀಡಿರುವ ಈ ಚಿತ್ರಕ್ಕೆ ಸುಜ್ಞಾನ್ ಅವರ ಛಾಯಾಗ್ರಹಣವಿದೆ.