Udayavni Special

ಪರಿಸರದ ಅಭಿವೃದ್ಧಿಗೆ ಮೂಕಾಂಬಿಕೆ ಅನುಗ್ರಹಿಸಲಿ: ಸಂಸದ ಗೋಪಾಲ ಶೆಟ್ಟಿ

ಗರ್ಭಗುಡಿಯಲ್ಲಿ ಶ್ರೀ ಮೂಕಾಂಬಿಕೆ ದೇವರ ಪುನರ್‌ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕ ನಡೆಯಿತು.

Team Udayavani, Jun 25, 2021, 12:35 PM IST

ಪರಿಸರದ ಅಭಿವೃದ್ಧಿಗೆ ಮೂಕಾಂಬಿಕೆ ಅನುಗ್ರಹಿಸಲಿ: ಸಂಸದ ಗೋಪಾಲ ಶೆಟ್ಟಿ

ಮುಂಬಯಿ, ಜೂ. 24: ಮಲಾಡ್‌ ಪರಿಸರದಲ್ಲಿ ಬಹಳಷ್ಟು ತುಳು, ಕನ್ನಡಿಗರು ಧಾರ್ಮಿಕ ಹಾಗೂ ಸಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಿಂದೂ ಧರ್ಮದ ಪುನರುದ್ಧಾರಕ್ಕೆ ದೇವಸ್ಥಾನಗಳು ಅಗತ್ಯ. ಇಲ್ಲಿ ನಡೆಯುತ್ತಿರುವ ಸೇವಾ ಕಾರ್ಯಗಳಿಂದ ಕುರಾರ್‌ ವಿಲೇಜ್‌ ಪರಿಸರವು ಇನ್ನೂ ಅಭಿವೃದ್ಧಿಗೊಳ್ಳಲಿ. ಜನಸಾಮಾನ್ಯರ ಕಷ್ಟ-ದುಃಖಗಳು ದೂರವಾಗಲಿ. ಪರಿಸರದ ಅಭಿವೃದ್ಧಿಗೆ ಮೂಕಾಂಬಿಕೆ ಅನುಗ್ರಹಿಸಲಿ. ಕೊರೊನಾ ಮಹಾಮಾರಿಯಿಂದ ಧಾರ್ಮಿಕ ಸೇವೆಗಳು ದೂರವಾಗಿವೆ. ಇಲ್ಲಿನ ಎಲ್ಲ ಸೇವೆಗಳಿಗೆ ನನ್ನ ಪೂರ್ಣ ಬೆಂಬಲವಿದೆ ಎಂದು ಬೊರಿವಲಿಯ ಸಂಸದ ಗೋಪಾಲ ಶೆಟ್ಟಿ ತಿಳಿಸಿದರು.

ಸುಮಾರು 60 ವರ್ಷಗಳ ಹಿಂದೆ ಮಲಾಡ್‌ ಕುರಾರ್‌ ವಿಲೇಜಿನ ಆದರ್ಶ್‌ ನಗರದ ಸಣ್ಣ ಚಾಲ್‌ವೊಂದರಲ್ಲಿ ಕೈವಲ್ಯ ಶ್ರೀ ಪ್ರೇಮಾನಂದ ಸ್ವಾಮೀಜಿ ಸ್ಥಾಪಿಸಿರುವ ಶ್ರೀ ಮೂಕಾಂಬಿಕಾ ದೇವಸ್ಥಾನ ಇದೀಗ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣ ಜೀರ್ಣೋದ್ಧಾರಗೊಂಡಿದ್ದು, ಜೂ. 13ರಿಂದ 17ರ ವರೆಗೆ ಬ್ರಹ್ಮಕಲಶೋತ್ಸವದ ಪ್ರಯುಕ್ತ ವಿವಿಧ ಪೂಜಾ ಕಾರ್ಯಗಳು ನೆರವೇರಿ ಜೂ. 18ರಂದು ಬೆಳಗ್ಗೆ ನೂತನ ಗರ್ಭಗುಡಿಯಲ್ಲಿ ಶ್ರೀ ಮೂಕಾಂಬಿಕೆ ದೇವರ ಪುನರ್‌ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕ ನಡೆಯಿತು. ಈ ಸಂದರ್ಭ ದೇವಸ್ಥಾನಕ್ಕೆ
ಸ್ಥಳೀಯ ಸಂಸದ ಗೋಪಾಲ ಶೆಟ್ಟಿ ಆಗಮಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ದೇವಸ್ಥಾನದ ಬಗ್ಗೆ ವಿವರವನ್ನು ನೀಡಿದ ದೇವಸ್ಥಾನದ ಧರ್ಮದರ್ಶಿ ವೇದಾನಂದ ಸ್ವಾಮೀಜಿಯವರು ಸಂಸದರನ್ನು ಶಾಲು ಹೊದೆಸಿ, ಪ್ರಸಾದ ನೀಡಿ ಗೌರವಿಸಿದರು. 6 ದಿನಗಳ ಕಾಲ ನಡೆದ ಎಲ್ಲ ಪೂಜಾವಿಧಿ ಗಳನ್ನು ಶ್ರೀ ವೇದಾನಂದ ಸ್ವಾಮೀಜಿ ಯವರ ಮಾರ್ಗದರ್ಶನದಲ್ಲಿ ಕೇರಳದ ಪ್ರಸಿದ್ಧ ಪುರೋಹಿತರಾದ ಪ್ರದೀಶ ತಂತ್ರಿ ನೆರವೇರಿಸಿದರು.

ದೇವಸ್ಥಾನದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ, ದೀಪಕ್‌ ಶಾನ್‌ಭೋಗ್‌, ಕಾರ್ಯ ದರ್ಶಿ ವಿಜಯ ಕಸ್ಕಾಡೆ, ಕೋಶಾಧಿಕಾರಿ ರಘು ಶಾನ್‌ಭೋಗ್‌, ಸದಸ್ಯರಾದ ಪರೇಶ್‌ ಮೆಹ್ತಾ, ಪ್ರಶಾಂತ್‌, ರಾಜೇಂದ್ರ ಸುರ್ವೆ, ಡಾಕ್ಟರ್‌ ಶ್ರೀಕಾಂತ್‌, ಪ್ರಕಾಶ್‌, ಗಿರೀಶ್‌ ಸುತಾರ್‌, ಆಡಳಿತ ಮಂಡಳಿಯ ಯೋಗೀಶ್‌ ಕೋಟ್ಯಾನ್‌, ಯದೇಶ್‌ ಕೋಟ್ಯಾನ್‌, ಆನಂದ ಪೂಜಾರಿ, ಕಲಾ ಜಗದೀಶ್‌ ಅಂಚನ್‌, ಕರಿಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದು ಧಾರ್ಮಿಕ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದರು.

ಜೂ. 18ರಂದು ನಡೆದ ಮೂಕಾಂಬಿಕೆ ಮೂರ್ತಿ ಪುನರ್‌ ಪ್ರತಿಷ್ಠಾಪನೆ ಬಳಿಕ ನಡೆದ ಶ್ರೀ ವೇದಾನಂದ ಸ್ವಾಮೀಜಿ ಅವರ ದರ್ಶನ ಸೇವೆಯಲ್ಲಿ ಹರೀಶ್‌ ಶಾಂತಿ ಹೆಜಮಾಡಿ ಯವರು ಮಧ್ಯಸ್ಥಿಕೆಯಲ್ಲಿ ಸಹಕರಿಸಿದರು. ಪೂಜಾ ಕಾರ್ಯಗಳು ಕೇರಳದ ಪ್ರಸಿದ್ಧ ಪುರೋಹಿತರಾದ ಪ್ರದೀಶ್‌ ತಂತ್ರಿಯವರಿಂದ ನೆರವೇ ರಿತು. ದೇವಸ್ಥಾನದ ವಿನ್ಯಾಸ, ಕೆತ್ತನೆ ಕೆಲಸಗಳು ಗಿರೀಶ್‌ ಸುತಾರ್‌ ಅವರಿಂದ ಆಗಿದೆ. ಪೂಜಾ ಕಾರ್ಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಜಗನ್ನಾಥ ಶೆಟ್ಟಿ, ಕೋಶಾಧಿಕಾರಿ ಜಗನ್ನಾಥ್‌ ಮೆಂಡನ್‌ ಸಾಲಿಗ್ರಾಮ, ಸಂಚಾಲಕ ದಿನೇಶ್‌ ಬಿ. ಕುಲಾಲ್, ಬಿಲ್ಲವರ ಅಸೋಸಿಯೇಶನ್‌ ಮಲಾಡ್‌ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಸಂತೋಷ ಪೂಜಾರಿ, ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಆನಂದ ಕೋಟ್ಯಾನ್‌, ಶ್ರೀ ಮಹಮ್ಮಾಯಿ ದುರ್ಗಾಪರಮೇಶ್ವರೀ ದೇವಸ್ಥಾನದ ರಘು ಗುರುಸ್ವಾಮಿ, ಕಲಾವತಿ ಕೋಟ್ಯಾನ್‌, ನಳಿನಿ ಕೋಟ್ಯಾನ್‌, ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಮಹಿಳಾ ವಿಭಾಗದ ಸರ್ವಸದಸ್ಯೆಯರು, ಶನಿ ಮಂದಿರದ ಮಹಿಳಾ ವಿಭಾಗದ
ಸದಸ್ಯೆಯರು ಪಾಲ್ಗೊಂಡು ಮಹಾಪ್ರಸಾದ ಅನ್ನದಾನವನ್ನು ಸ್ವೀಕರಿಸಿದರು.

ಕುರಾರ್‌ ವಿಲೇಜಿನ ಪ್ರಪ್ರಥಮ ಕ್ಷೇತ್ರ
ದೇವಸ್ಥಾನದ ಧರ್ಮದರ್ಶಿ ವೇದಾನಂದ ಸ್ವಾಮೀಜಿ ಮಾಹಿತಿ ನೀಡಿ, ಕುರಾರ್‌ ವಿಲೇಜಿನಲ್ಲಿ ಪ್ರಪ್ರಥಮವಾಗಿ ಪ್ರಾರಂಭಗೊಂಡ ಕ್ಷೇತ್ರ ಮೂಕಾಂಬಿಕಾ ಕ್ಷೇತ್ರವಾಗಿದೆ. ಈ ಮಂದಿರದಲ್ಲಿ ನಡೆಯುವ ಭಜನೆ, ಪೂಜೆಗಳಿಗೆ ಮುಂಬಯಿ ಹಾಗೂ ಉಪ ನಗರಗಳಿಂದಲೂ ಭಕ್ತರು ಅಪಾರ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಶ್ರೀ ಪ್ರೇಮಾನಂದ ಸ್ವಾಮೀಜಿ ನುಡಿದ ಮಾತುಗಳು, ನೀಡಿದ ಪ್ರಸಾದಗಳು ವರಪ್ರಸಾದವಾದವು. ಇವರಿಂದ ಪ್ರಸಾದವನ್ನು ಪಡೆದ ಭಕ್ತರು ದೇಶ-ವಿದೇಶದಲ್ಲಿ ಯಶಸ್ವಿ ಉದ್ಯಮಿಗಳಾಗಿ, ಧಾರ್ಮಿಕ-ರಾಜಕೀಯ ಮುಖಂಡರಾಗಿದ್ದಾರೆ. ಸ್ವಾಮೀಜಿಯವರು ತಮ್ಮ ಹುಟ್ಟೂರಾದ ಕಿನ್ನಿಗೋಳಿಯ ತಾಳಿಪಾಡಿ ಗ್ರಾಮದಲ್ಲಿ ಕೂಡ ಭವ್ಯ ಮೂಕಾಂಬಿಕ ದೇಗುಲವನ್ನು ಸ್ಥಾಪಿಸಿ ಭಕ್ತರಿಗೆ ಸಮರ್ಪಿಸಿದ್ದಾರೆ ಎಂದು ತಿಳಿಸಿದರು.

ಟಾಪ್ ನ್ಯೂಸ್

fghffhf

ಕೋವಿಡ್ :ರಾಜ್ಯದಲ್ಲಿಂದು 1987 ಹೊಸ ಪ್ರಕರಣ ಪತ್ತೆ, 1632 ಸೋಂಕಿತರು ಗುಣಮುಖ

uiyuiyi

ಅತಿವೃಷ್ಠಿಯಿಂದ ರೈತ ಕಂಗಾಲು: ಮೊಳಕೆ ಮಣ್ಣಾಗಿಸಿದ ಮಳೆ

erte’

ಪ್ರತಿಪಕ್ಷದವರು ರೌಡಿಗಳಂತೆ ವರ್ತಿಸಿದ್ದಾರೆ : ಸಿಎಂ ಪ್ರಮೋದ್ ಸಾವಂತ್

jail

ಮಧ್ಯಪ್ರದೇಶ : ಕಾರಾಗೃಹದ ಗೋಡೆ ಕುಸಿದು 22 ಕೈದಿಗಳಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

ಪಶ್ಚಿಮಬಂಗಾಳ: ಬಿಜೆಪಿ ಮುಖಂಡ, ಸಂಸದ ಬಾಬುಲ್ ಸುಪ್ರೀಯೊ ಸಕ್ರಿಯ ರಾಜಕೀಯಕ್ಕೆ ಗುಡ್ ಬೈ

ಪಶ್ಚಿಮಬಂಗಾಳ: ಬಿಜೆಪಿ ಮುಖಂಡ, ಸಂಸದ ಬಾಬುಲ್ ಸುಪ್ರೀಯೊ ಸಕ್ರಿಯ ರಾಜಕೀಯಕ್ಕೆ ಗುಡ್ ಬೈ

trterter

ಟ್ವಿಟರ್-ಇನ್ಸ್ಟಾದಲ್ಲಿ ‘ಸಮಂತಾ ಅಕ್ಕಿನೇನಿ’ ಹೆಸರು ಮಾಯ: ಹೀಗೇಕೆ ಮಾಡಿದ್ರು ಸ್ಯಾಮ್ ?  

ಟೋಕಿಯೊ ಒಲಿಂಪಿಕ್ಸ್: ಸೆಮಿ ಫೈನಲ್ ನಲ್ಲಿ ಮುಗ್ಗರಿಸಿದ ಪಿ.ವಿ.ಸಿಂಧು

ಟೋಕಿಯೊ ಒಲಿಂಪಿಕ್ಸ್: ಸೆಮಿ ಫೈನಲ್ ನಲ್ಲಿ ಮುಗ್ಗರಿಸಿದ ಪಿ.ವಿ.ಸಿಂಧುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Doctor

ವೈದ್ಯರ ವೃತ್ತಿಯಲ್ಲಿ ನೈತಿಕತೆ ಇರಲಿ: ಕೋಶ್ಯಾರಿ

Meera-road

ಜು. 31: ಶ್ರೀ ಶನಿ ಮಹಾಪೂಜೆ, ಯಕಗಾನ ತರಬೇತಿ ಕೇಂದ್ರ ಉದ್ಘಾಟನೆ

Billava

ಬಿಲವರ ಅಸೋಸಿಯೇಶನ್‌ ಡೊಂಬಿವಲಿ ಸ್ಥಳೀಯ ಕಚೇರಿ: ಗುರುಪೂರ್ಣಿಮೆ ಆಚರಣೆ

ನೂತನ ಕಾರ್ಯಾಧ್ಯಕ್ಷರಾಗಿ ಜೋನ್‌ ಡಿ’ಸಿಲ್ವಾ ಕಾರ್ಕಳ ಆಯ್ಕೆ

ನೂತನ ಕಾರ್ಯಾಧ್ಯಕ್ಷರಾಗಿ ಜೋನ್‌ ಡಿ’ಸಿಲ್ವಾ ಕಾರ್ಕಳ ಆಯ್ಕೆ

Mumbai

ವೀರ ತಾಯಂದಿರ ಧೈರ್ಯದಿಂದಾಗಿ ದೇಶ ಸುರಕ್ಷಿತ: ಕೋಶ್ಯಾರಿ

MUST WATCH

udayavani youtube

ಅದು ಹೇಳಿದ್ರೆ ಅವರಿಗೂ , ನನಗೂ ಒಳ್ಳೇದಲ್ಲ !

udayavani youtube

ಸತತ 4ನೇ ದಿನವೂ ಭಾರತದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

udayavani youtube

IT ಬದುಕಿಗಿಂತ ಕೃಷಿ ತೃಪ್ತಿ ನೀಡುತ್ತೆ??

udayavani youtube

ಚಿಕ್ಕಮಗಳೂರಿನಲ್ಲಿ ದನಗಳ್ಳರ ಹಾವಳಿ ?: ಮಲಗಿದ್ದ ದನವನ್ನೇ ಕಾರಿಗೆ ತುಂಬಿಸಿ ಕದ್ದೊಯ್ದರು

udayavani youtube

ಬೀಜವಿಲ್ಲದ ಲಿಂಬೆ ಹಣ್ಣಿನ ಕುರಿತ ಸಂಕ್ಷಿಪ್ತ ಮಾಹಿತಿ

ಹೊಸ ಸೇರ್ಪಡೆ

fghffhf

ಕೋವಿಡ್ :ರಾಜ್ಯದಲ್ಲಿಂದು 1987 ಹೊಸ ಪ್ರಕರಣ ಪತ್ತೆ, 1632 ಸೋಂಕಿತರು ಗುಣಮುಖ

uiyuiyi

ಅತಿವೃಷ್ಠಿಯಿಂದ ರೈತ ಕಂಗಾಲು: ಮೊಳಕೆ ಮಣ್ಣಾಗಿಸಿದ ಮಳೆ

erte’

ಪ್ರತಿಪಕ್ಷದವರು ರೌಡಿಗಳಂತೆ ವರ್ತಿಸಿದ್ದಾರೆ : ಸಿಎಂ ಪ್ರಮೋದ್ ಸಾವಂತ್

oiiu

ಮನೆ ನಿರ್ಮಾಣಕ್ಕೆ ಚೆಕ್ ವಿತರಿಸಿದ ಶಾಸಕ ವಿ.ಸೋಮಣ್ಣ

rr

ಶೌಚಾಲಯಕ್ಕೆ ಮೀಸಲಾದ ಬನ್ನಿಗಿಡದ ಪಾರ್ಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.