ಮೇ 4ಕ್ಕೆ ಎಲ್‌ಐಸಿ ಐಪಿಒ ರಂಗಪ್ರವೇಶ; ಮೇ 17ರಂದು ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್
ಪ್ರತಿ ಷೇರಿಗೆ 902 ರೂ.-949 ರೂ.ನಿಗದಿ
Team Udayavani, Apr 28, 2022, 7:40 AM IST
ಮುಂಬೈ: ಬಹು ನಿರೀಕ್ಷಿತ ಎಲ್‌ಐಸಿ ಐಪಿಒ ಮೇ 4ರಂದು ಮಾರುಕಟ್ಟೆ ಪ್ರವೇಶ ಮಾಡಲಿದೆ.
ಪ್ರತಿ ಷೇರುಗಳ ಬೆಲೆ 902 ರೂ.ಗಳಿಂದ 949 ರೂ. ಆಗಿರಲಿದೆ ಎಂದು ಬಂಡವಾಳ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ವಿಭಾಗ (ಡಿಐಪಿಎಎಂ)ದ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.
ಐಪಿಒ ಬಿಡುಗಡೆಯಾದ ಒಂದು ವಾರದ ಬಳಿಕ ಅಂದರೆ ಮೇ 17ರಂದು ಅದು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಲಿದೆ. ಅಂದರೆ, ಅಂದಿನಿಂದ ಸೆಕೆಂಡರಿ ಮಾರುಕಟ್ಟೆಯಲ್ಲಿ ಷೇರುಗಳ ವಹಿವಾಟು ಆರಂಭವಾಗಲಿದೆ.
ಪಾಲಿಸಿದಾರರಿಗೆ ಪ್ರತಿ ಷೇರಿಗೆ 60 ರೂ., ಉದ್ಯೋಗಿಗಳಿಗೆ 45 ರೂ. ರಿಯಾಯಿತಿ ನೀಡಲಾಗುವುದು ಎಂದೂ ಪಾಂಡೆ ತಿಳಿಸಿದ್ದಾರೆ. ವಿಮಾ ಕಂಪನಿಯ ಒಟ್ಟು ಷೇರುಗಳ ಪೈಕಿ ಶೇ.3.5ನ್ನು (21.13 ಕೋಟಿ ಷೇರುಗಳು) ಮಾರಾಟ ಮಾಡಿ, 21 ಸಾವಿರ ಕೋಟಿ ರೂ. ಸಂಗ್ರಹಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದ್ದಾರೆ.
ದೀರ್ಘಾವಧಿಯ ಅಂಶವನ್ನು ಗಮನದಲ್ಲಿ ಇರಿಸಿಕೊಂಡಾಗ, ಎಲ್‌ಐಸಿ ಐಪಿಒ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಜತೆಗೆ ಇದರಿಂದ ಸಂಸ್ಥೆಯ ಮೌಲ್ಯವೂ ವರ್ಧಿಸಲಿದೆ. ಸದ್ಯ ಮಾರಾಟ ಮಾಡಲು ಉದ್ದೇಶಿಸಿರುವ ಕಂಪನಿಯ ಷೇರುಗಳ ಮಾರಾಟದ ಗಾತ್ರ ಸರಿಯಾಗಿಯೇ ಇದೆ ಎಂದು ಪಾಂಡೆ ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನದಿಗೆ ಉರುಳಿ ಬಿದ್ದ ಐಟಿಬಿಪಿ ಸಿಬ್ಬಂದಿಗಳನ್ನು ಹೊತ್ತೊಯ್ದ ಬಸ್ : 6 ಮಂದಿ ಸಾವು
ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅಪ್ರಾಪ್ತ ವಯಸ್ಕ ಸಂಬಂಧಿಯಿಂದಲೇ ಅತ್ಯಾಚಾರ!
ಶೋಪಿಯಾನ್: ಉಗ್ರರ ಗುಂಡಿನ ದಾಳಿಗೆ ಕಾಶ್ಮೀರಿ ಪಂಡಿತ ಸಾವು, ಸಹೋದರನಿಗೆ ಗಾಯ
ಅಮೃತ ಮಹೋತ್ಸವ; 75 ಸಾಮಾಜಿಕ ಕಾರ್ಯ
ಹೆಚ್ಚಿದ ಭದ್ರತೆ: ಶಿವಮೊಗ್ಗ- ಭದ್ರಾವತಿ ನಗರ ವ್ಯಾಪ್ತಿಯಲ್ಲಿ ಮದ್ಯಮಾರಾಟ ನಿಷೇಧ