Udayavni Special

ಇರದುದರೆಡೆಗೆ ತುಡಿವುದೇ ಜೀವನ


Team Udayavani, Feb 28, 2021, 6:25 AM IST

jeevana

ಮನುಷ್ಯ ಅನ್ನಿಸಿಕೊಂಡ ಮೇಲೆ ಎಲ್ಲರೂ ಒಂದೇ ರೀತಿ ಇರಲು, ಬದುಕಲು ಸಾಧ್ಯವಿಲ್ಲ. ಐದು ಬೆರಳು ಯಾವತ್ತೂ ಒಂದೇ ಸಮನಾಗಿರುವುದಿಲ್ಲ. ಹಾಗೆಯೇ ಯಾವುದೇ ವ್ಯಕ್ತಿಗೆ ಬಯಸಿ¨ªೆಲ್ಲ ಸಿಗು ವುದು ಸಾಧ್ಯವೂ ಇಲ್ಲ. ಇದು ಗೊತ್ತಿದ್ದರೂ ಕೈಗೆ ಎಟು ಕದ ದ್ರಾಕ್ಷಿಗೇ ಎಲ್ಲರೂ ಆಸೆ ಪಡುತ್ತಾರೆ. ಈ ಮಾತಿಗೆ ಹಲವು ಉದಾಹರಣೆ ಹೇಳುತ್ತಾ ಹೋಗಬಹುದು.

– ಅದು ದುಬಾರಿ ಡೊನೇಷನ್‌ ಪಡೆಯುವ ಶಾಲೆ. ತಿಂಗಳು ತಿಂಗಳಿಗೂ ಶುಲ್ಕದ ಹೆಸರಿನಲ್ಲಿ 5 ಸಾವಿರ ಕೊಡಬೇಕು. ಒಂದು ಸಂತೋಷವೆಂದರೆ, ಆ ಶಾಲೆಯಲ್ಲಿ ಆಟ, ಪಾಠ, ಶಿಸ್ತು ಎಲ್ಲವನ್ನೂ ಚೆನ್ನಾಗಿ ಕಲಿಸುತ್ತಾರೆ. ಈ ಶಾಲೆಯಲ್ಲಿ ಆರನೇ ತರಗತಿಯಲ್ಲಿದ್ದಾಳೆ ಪ್ರಿಯಾಂಕ. ತಮ್ಮ ಶಾಲೆಯಿಂದ ಅರ್ಧ ಕಿ.ಮೀ ದೂರವಿರುವ ಇನ್ನೊಂದು ಶಾಲೆಯ ಮೇಲೆ ಅವಳಿಗೆ ಮೋಹ. ಅದನ್ನೇ ಮುಂದಿಟ್ಟುಕೊಂಡು ಅಪ್ಪನ ಬಳಿ ಹೇಳುತ್ತಾಳೆ: “ನೋಡಿ ಪಪ್ಪಾ, ನಂಗೆ ಈ ಸ್ಕೂಲು ಇಷ್ಟವಾಗೊಲ್ಲ. ಆ ಸ್ಕೂಲಿನಲ್ಲಿ ಹೋಂವರ್ಕೇ ಕೊಡಲ್ಲ, ಗೊತ್ತಾ? ಆದ್ರೂ ಎ ಗ್ರೇಡ್‌ ಕೊಡ್ತಿದಾರೆ. ಮುಂದಿನ ವರ್ಷ ನನ್ನನ್ನು ಅಲ್ಲಿಗೇ ಸೇರಿಸಿ.’

– ಹೆಂಡತಿ ಸ್ವಲ್ಪ ಫ್ಯಾಷನೇಬಲ್‌ ಆಗಿಲ್ಲ ಎನ್ನುವುದು ಮೈಕಲ್‌ನ ಚಿಂತೆಗೆ ಕಾರಣ. ಅವಳಿಗೆ ಹಸಿ ಬಿಸಿ ಪ್ರೀತಿಯಲ್ಲಿ ಆಸಕ್ತಿಯಿಲ್ಲ. ಬೆಳಗ್ಗೆ ಎದ್ದವಳೇ ಗಂಡನಿಗೆ ಕಾಫಿ ಮಾಡಿಕೊಟ್ಟು, ಅಡುಗೆ ಮನೆ ಸೇರಿ ಬಿಡುತ್ತಾಳೆ. ಅನಂತರ ಪಾತ್ರೆ ತೊಳೆಯುವುದು, ಕಸ ಗುಡಿಸುವುದು, ಪೂಜೆ, ತಿಂಡಿ, ಮಕ್ಕಳನ್ನು ಶಾಲೆಗೆ ಕಳುಹಿಸುವುದು, ಆಪ್ತರಿಗೆ ಫೋನ್‌ ಮಾಡುವುದು ಇದರಲ್ಲೇ ಸಮಯ ಕಳೆದು ಹೋಗುತ್ತದೆ. ಇದರ ಮಧ್ಯೆಯೇ ಮೈಕಲ್‌ ಸರಸವಾಡಲು ಬರು ತ್ತಾನೆ ನಿಜ. ಇವಳ್ಳೋ, ಅವನನ್ನು ಹತ್ತಿರಕ್ಕೂ ಸೇರಿಸು ವುದಿಲ್ಲ. ಛೀಮಾರಿ ಹಾಕಿ ಕಳುಹಿಸುತ್ತಾಳೆ. ಇಂಥ ಸಂದರ್ಭದಲ್ಲೆಲ್ಲ ಮೈಕಲ್‌ಗೆ ಪಕ್ಕದ್ಮನೆಯ ವಯ್ನಾರಿ ನೆನಪಿಗೆ ಬರುತ್ತಾಳೆ. ನನಗೂ ಅಂಥ ಹೆಂಡತಿ ಸಿಗಬಾರದಿತ್ತೆ ಎಂದು ಯೋಚಿಸುತ್ತಾನೆ. ಹೆಂಗಸರು, ಅದರಲ್ಲೂ ಗೃಹಿಣಿ ಅನ್ನಿಸಿಕೊಂಡವರು ಹಾಗೆಲ್ಲ ಬೋಲ್ಡ್ ಆಗಿ ವರ್ತಿಸಿದರೆ ಅದರಿಂದ ಒಳ್ಳೆಯದಕ್ಕಿಂತ ಕೆಟ್ಟದ್ದೇ ಜಾಸ್ತಿ ಎಂಬುದು ಅವನಿಗೆ ಗೊತ್ತಿಲ್ಲದ ಸಂಗತಿಯಲ್ಲ. ಆದರೂ, ಇಲ್ಲದ್ದರ ಕಡೆಗೇ ಅವನ ಧ್ಯಾನ.

ಇನ್ನು ಕಾಲೇಜಿಗೆ ಹೋಗುವ ಮಕ್ಕಳು ಅಪ್ಪ/ಅಮ್ಮನಿಗೆ ಛೇಡಿಸುತ್ತಾರಲ್ಲ? ಅದನ್ನು ಹೇಳದಿರುವುದೇ ಮೇಲು. ಮಕ್ಕಳು ಕಾಲೇಜಿಗೆ ಹೋಗುತ್ತಾರೆ ಎಂದು ಗೊತ್ತಾದ ತತ್‌ಕ್ಷಣ ಅಪ್ಪ/ಅಮ್ಮ ತಾವು ಕೊಡಿಸಿಟ್ಟಿದ್ದ ಹಣವನ್ನೆಲ್ಲ ಹೊಂದಿಸಿ ಮೊಬೈಲು ತೆಗೆದುಕೊಡ್ತಾರೆ. ಮೊಬೈಲ್‌, ಬೈಕು ಕೊಡಿಸಲು ಪ್ರಯತ್ನಿಸುತ್ತಾರೆ. ಆದರೂ ಮಕ್ಕಳಿಗೆ ಸಮಾಧಾನ ಆಗುವುದಿಲ್ಲ. ಅವರ ಕಣ್ಣನ್ನು ಗೆಳೆಯನ ಬಳಿ ಇರುವ ದುಬಾರಿ ಬೆಲೆಯ ಬೈಕ್‌ ಮತ್ತು ಮೊಬೈಲ್‌ ಆವರಿಸಿಕೊಂಡಿರುತ್ತವೆ.

ಯಾಕೆ ಹೀಗಾಗುತ್ತದೆ? ಇರುವುದೆಲ್ಲವನ್ನೂ ಬಿಟ್ಟು ಇಲ್ಲದಿರುವುದಕ್ಕೇ ಈ ಮನಸೇಕೆ ಆಸೆಪಡುತ್ತದೆ ಎಂಬ ಪ್ರಶ್ನೆಗೆ ಇದಮಿತ್ಥಂ’ ಎಂಬಂಥ ಉತ್ತರವಿಲ್ಲ. ಆದರೆ, ಅಂಥದೊಂದು ತಹತಹಕ್ಕೆ ನಮ್ಮೊಳಗಿರುವ ದುರಾಸೆಯೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಯಾವುದೇ ವ್ಯಕ್ತಿಗೆ ಬಯಸಿ¨ªೆಲ್ಲ ಸಿಗುವುದು ಸಾಧ್ಯವೂ ಇಲ್ಲ. ಅದು ಸಾಧುವೂ ಅಲ್ಲ. ಹಾಗಿದ್ದರೂ ಕೈಗೆ ಎಟುಕದ ದ್ರಾಕ್ಷಿಯನ್ನು ಕುರಿತೇ ಎಲ್ಲರೂ ಯೋಚಿಸುತ್ತಾರೆ. ಅದಕ್ಕಾಗಿ ಆಸೆಪಡುತ್ತಾರೆ. ಇಂಥ ಸಂದರ್ಭಗಳಲ್ಲಿ, ಚಿಕ್ಕಂದಿನಲ್ಲಿ ಬಾಯಿಪಾಠ ಮಾಡಿಕೊಂಡಿದ್ದ – “ಪಾಲಿಗೆ ಬಂದದ್ದು ಪಂಚಾಮೃತ,’ “ಕೈಗೆಟುಕದ ದ್ರಾಕ್ಷಿ ಯಾವತ್ತೂ ಹುಳಿ’, “ಅತಿಯಾಸೆ ಗತಿಗೇಡು’ ಎಂಬಂಥ ಮಾತುಗಳು ಎಲ್ಲರಿಗೂ ಮರೆತೇ ಹೋಗಿರುತ್ತವೆ.
ಹೀಗೇಕೆ ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ.

– ಎ.ಆರ್‌.ಮಣಿಕಾಂತ್‌

ಟಾಪ್ ನ್ಯೂಸ್

ಲಸಿಕೆ ನೀಡಲು 30,000 ಕೋಟಿ ಬೇಕು

ಲಸಿಕೆ ನೀಡಲು 30,000 ಕೋಟಿ ಬೇಕು

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ?

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ?

ಮೇಯಲ್ಲಿ ಹೆಚ್ಚು ಕೇಸ್‌!

ಮೇಯಲ್ಲಿ ಹೆಚ್ಚು ಕೇಸ್‌!

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

Untitled-3

ಪುಸ್ತಕಗಳೂ ಓದುವ ಅಭಿರುಚಿಯೂ..

ಕೋವಿಡ್ ಮಾರ್ಗಸೂಚಿ: ಪದೇ ಪದೆ ಎಡವುತ್ತಿರುವ ಸರಕಾರ

ಕೋವಿಡ್ ಮಾರ್ಗಸೂಚಿ: ಪದೇ ಪದೆ ಎಡವುತ್ತಿರುವ ಸರಕಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಲಂ ಹುಡುಗಿ ಸಂಗೀತಾಳ ಸ್ಕಾಟ್ಲೆಂಡ್‌ ಯಾತ್ರೆ

ಸ್ಲಂ ಹುಡುಗಿ ಸಂಗೀತಾಳ ಸ್ಕಾಟ್ಲೆಂಡ್‌ ಯಾತ್ರೆ

ಅಂಚೆಯಣ್ಣನಿಗೊಂದು ಅಕ್ಕರೆಯ ಪತ್ರ…

ಅಂಚೆಯಣ್ಣನಿಗೊಂದು ಅಕ್ಕರೆಯ ಪತ್ರ…

ಒಲುಮೆಯ ಹಾಡು ಹೇಳದವರನ್ನು ಹೇಗೆ ಒಪ್ಪಲಿ?

ಒಲುಮೆಯ ಹಾಡು ಹೇಳದವರನ್ನು ಹೇಗೆ ಒಪ್ಪಲಿ?

ಚುಮುಚುಮು ಬೆಳಗಲ್ಲಿ ಪಾಂಚಾಲಿಯ ದನಿ!

ಚುಮುಚುಮು ಬೆಳಗಲ್ಲಿ ಪಾಂಚಾಲಿಯ ದನಿ!

ಕೈ ಕಾಲು ಇಲ್ಲದಿದ್ರೂ ಕಡಲ್ಗಾಲುವೆ ಈಜಿದ!

ಕೈ ಕಾಲು ಇಲ್ಲದಿದ್ರೂ ಕಡಲ್ಗಾಲುವೆ ಈಜಿದ!

MUST WATCH

udayavani youtube

ಬೈಕ್ ಗೆ ನಾಯಿಯನ್ನು ಕಟ್ಟಿ ಹೆದ್ದಾರಿಯಲ್ಲೇ ಎಳೆದುಕೊಂಡು ಹೋದ ಸವಾರರು ! |

udayavani youtube

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

ಹೊಸ ಸೇರ್ಪಡೆ

ಕರಾವಳಿಯಲ್ಲೂ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ!

ಕರಾವಳಿಯಲ್ಲೂ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ!

ಲಸಿಕೆ ನೀಡಲು 30,000 ಕೋಟಿ ಬೇಕು

ಲಸಿಕೆ ನೀಡಲು 30,000 ಕೋಟಿ ಬೇಕು

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ಶೇ.50ರಷ್ಟು ಉಪನ್ಯಾಸಕರ ಹಾಜರಾತಿ ಕಡ್ಡಾಯ

ಶೇ.50ರಷ್ಟು ಉಪನ್ಯಾಸಕರ ಹಾಜರಾತಿ ಕಡ್ಡಾಯ

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ?

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.