Udayavni Special

ಕೈ ಬರಹ ಕೋಟಿ ತರಹ…


Team Udayavani, May 26, 2020, 5:27 AM IST

kot taraha

ಲಾಕ್‌ಡೌನ್‌ ಮೌನದೊಳಗೆ ಹತ್ತು ಹಲವು ಚಾಲೆಂಜುಗಳು ಬಂದು ಹೋದವು. ನಾರಿಮಣಿಯರದ್ದೇ ಮೇಲುಗೈ ಎಂಬಂತೆ, ಅವರಿಗೆ  ಸಂಬಂಧಿಸಿದ್ದೇ ಹೆಚ್ಚು. ಅವೆಲ್ಲದರ ನಡುವೆ, ಒಂದು ದಿನ ನೂರಾರು ಸ್ನೇಹಿತರು, ಸದಾ ಕುಟ್ಟುವ   ಕಂಪ್ಯೂಟರ್‌ ಕೀಲಿಮಣೆಯಿಂದಲೋ, ಮೊಬೈಲಿನಿಂದಲೋ ಕೈಕಿತ್ತು, ಬಿಳಿಯ ಹಾಳೆಯ ಮೇಲೆ ತಮಗಿಷ್ಟವಾದ ಸಾಲುಗಳನ್ನು ಗೀಚಿ ಹಾಕುತ್ತಿದ್ದುದು ಮೋಜೆನಿಸಿತು. ಬರೆಯಲು ಮರೆತ, ಕೈ ತಡವರಿಸಿದ ಅಕ್ಷರಗಳು ಸೊಟ್ಟಗಿದ್ದರೂ, ಒಂದಕ್ಕಿಂತ ಒಂದು ಒಳ್ಳೆಯ ಸಾಲುಗಳು ಫೇಸ್‌ ಬುಕ್ಕಿನ ತುಂಬಾ ಹರಿದಾಡಿದವು. “ಹಾಗೇ ಟೈಪ್‌ ಮಾಡಿ ಹಾಕಿದ್ರೂ ಆಗಿತ್ತಪ್ಪ.

ಈ ಕಾಗೆಕಾಲಿನ ಅಕ್ಷರ ನೋಡುವುದೇ ಹಿಂಸೆ’ ಎಂದು ಸಂಗಾತಿ ಹೇಳಿದಾಗ, ನನಗೆ ರಾಮಣ್ಣ ಮಾಸ್ತರರು  ನೆನಪಾದರು, ಜೊತೆಗೆ, ಹೇಗೆ ಬರೆದರೂ ಪಕ್ಷಿಪಾದವನ್ನೇ ನೆನಪಿಸುವ ಅಕ್ಷರವನ್ನು, ಮುತ್ತಿನಂತಾಗಿಸಬೇಕೆಂಬ ಸುತ್ತಲಿನ ಒತ್ತಡವೂ! ಅಂದು ಮಾಸ್ತರರಿಗೆ ನನ್ನ ಮೇಲೆ ಭಯಂಕರ ಕೋಪ ಬಂದಿತ್ತು. ಎಲ್ಲ ಉತ್ತರಗಳು ಸರಿ ಇದ್ದರೂ  ಒಂದು ಅಂಕ ಕಳೆದು- “ಇದು ನಿನ್ನ ಕೆಟ್ಟ ಅಕ್ಷರದಿಂದ’ ಅಂದಿದ್ದರು. “ನಿನ್ನ ಚಿಕ್ಕಪ್ಪನೂ ನನ್ನ ವಿದ್ಯಾರ್ಥಿ ಆಗಿದ್ದರು. ಎಷ್ಟು ಚಂದವಿತ್ತು ಅವರ ಅಕ್ಷರ… ನಿನ್ನ ಅಕ್ಕಂದಿರು, ಎಷ್ಟು ಚಂದ ಮಾಡಿ ಬರೀತಾರೆ.. ನೀನು ಮಾತ್ರ ಕಾಗೆಕಾಲು  ಮಾಡಿ ಬರೆಯವುದು ಯಾಕೆ?’

ಎಂದು ಎಲ್ಲರ ಮುಂದೆ ಬೈದಿದ್ದರು. ಅಕ್ಷರ ಚಂದ ಮಾಡಿ ಬರೆಯುತ್ತಿದ್ದ ಚಿಕ್ಕಪ್ಪಂದಿರ, ಅಕ್ಕಂದಿರ ಮೇಲೆ ನನಗೆ ಸಿಟ್ಟು ಬಂದಿತ್ತು ವಿನಾ, ಅವರಂತೆ ನಾನೂ ಚಂದ ಮಾಡಿ ಬರೆಯಬೇಕೆಂದು  ಳೆದಿರಲೇ  ಇಲ್ಲ! ಪ್ರಾಥಮಿಕ ಶಾಲೆಯಲ್ಲಿದ್ದಾಗ ಏಪ್ರಿಲ- ಮೇ ತಿಂಗಳ ದೊಡ್ಡರಜೆಯಲ್ಲಿ, ದಿನಕ್ಕೊಂದು ಪುಟ ಕಾಪಿ ಬರೆಯಬೇಕೆಂಬುದು ದೊಡ್ಡ ಹೊರೆ ಕೆಲಸ. ಐದನೇ ತರಗತಿಯ ನಂತರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು. ಕಾರಣ, ಆಗ  ಕನ್ನಡ, ಇಂಗ್ಲಿಷು, ಹಿಂದಿ ಮೂರರ ಕಾಪಿ ಬರೆಯಬೇಕಿತ್ತು. ದಿನಕ್ಕೊಂದು ಪುಟ ಅಂದರೆ, ಬರೆಯುವುದಕ್ಕೆಷ್ಟಾಯಿತು!? ನಾನೋ, ಮಹಾ ಸೋಮಾರಿ.

ನಾಳೆ ನಾಳೆ ಅಂದುಕೊಂಡು ದಿನದೂಡಿ ಮೇ ಇಪ್ಪತ್ತೈದು ದಾಟುವಾಗ, ನನಗೆ  ನಾಭಿಯಿಂದ ನಡುಕ ಹುಟ್ಟುತ್ತಿತ್ತು. ಬಾಕಿ ಉಳಿದಿರುವ ಆರೇ ದಿನಗಳಲ್ಲಿ ಎಲ್ಲವನ್ನೂ ಬರೆದು ಮುಗಿಸುವುದು ಹೇಗೆ? ಮುಂದಿನ ದಾರಿ, ಅಜ್ಜನಿಗೆ ಕೇಳಿಸುವಂತೆ ಅಳುವುದು. ಅದೂ, ಅಪ್ಪ ಮನೆಯಲ್ಲಿಲ್ಲದ ಹೊತ್ತು. ನನ್ನ ಅಳುವಿನ  ಕಾರಣ ಗೊತ್ತಿದ್ದ ಅಮ್ಮ, ನಿರ್ಲಕ್ಷ್ಯ ಮಾಡುತ್ತಿದ್ದರು. ಅಕ್ಕಂದಿರು ಕಿವಿಗೇ ಹಾಕಿಕೊಳ್ಳುತ್ತಿರಲಿಲ್ಲ. ಅಜ್ಜನಿಗೆ ನನ್ನಲ್ಲಿ ಪ್ರೀತಿ ಹೆಚ್ಚು. ಕಾರಣ ತಿಳಿದುಕೊಂಡು ಅಕ್ಕಂದಿರನ್ನು ಕರೆಸಿ, ಹಿಂದಿಕಾಪಿಯನ್ನು ದೊಡ್ಡಕ್ಕನೂ, ಇಂಗ್ಲಿಷ್‌  ಕಾಪಿಯನ್ನು ಚಿಕ್ಕಕ್ಕನೂ ಬರೆಯುವಂತೆ  ಆದೇಶಿಸುತ್ತಿದ್ದರು.

ಕನ್ನಡದ ಕಾಪಿ ಬರೆವ ಕೆಲಸ ನನಗೆ! ಅಂತೂ, ನೂರಿಪ್ಪತ್ತು ಪುಟದಿಂದ ವಿನಾಯಿತಿ ಪಡೆದು ಅರುವತ್ತು ಪುಟ ಬರೆದರಾಯಿತಲ್ಲ! ಅಜ್ಜನ ಮಾತಿಗೆ ಎದುರಾಡದ ಅಕ್ಕಂದಿರು  ನನ್ನನ್ನು ಸುಡುವಂತೆ ನೋಡಿ, ಬರೆಯುವ ಯಜ್ಞಕ್ಕೆ ಮೊದಲುಗೊಳ್ಳುತ್ತಿದ್ದರು. ಶಾಲೆ ಪ್ರಾರಂಭವಾಗುವ ದಿನ “ಶಹಭಾಶು ನನಗೇ. ಸ್ವಲ್ಪ ಸುಧಾರಿಸಿದೆ ನಿನ್ನ ಅಕ್ಷರ’ ಎಂದು ಮಾಸ್ತರರೆಂದರೆ, ನನಗೆ ಛಳಿ ಹಿಡಿದಂತಾಗುತ್ತಿತ್ತು.  ಅವರೆದುರೇ “ಒಮ್ಮೆ ಬರೆದು ತೋರಿಸು’ ಅಂದರೇನು ಗತಿ! ಇಂತಿದ್ದ ನನಗೆ ನನ್ನ ಅಕ್ಷರ ಕೆಟ್ಟದ್ದು ಅನ್ನಿಸಿದ್ದು ಹೈಸ್ಕೂಲಿನಲ್ಲಿ. ವೆಂಕಟೇಶ ತುಳುಪುಳೆ ಎಂಬ ಮಾಸ್ತರು, ಅದೇ ವರ್ಷ ವರ್ಗಾವಣೆಯಾಗಿ ನಮ್ಮ ಶಾಲೆಗೆ ಬಂದರು.

ಅವರು  ಬೋರ್ಡಿನ ಮೇಲೆ ಬರೆಯುವ ಅಕ್ಷರ ಬಹಳ ಮುದ್ದಾಗಿರುತ್ತಿತ್ತು. ಅವರ ಅಕ್ಷರವನ್ನು ಮಾದರಿಯಾಗಿಟ್ಟುಕೊಂಡು, ಕಾಪಿ ಬರೆಯಲಾರಂಭಿಸಿದೆ. ತಂದೆಯವರ ಅಕ್ಷರವನ್ನೂ ಅನುಕರಣೆ ಮಾಡಿದೆ. ಅಂತೂ, ನನ್ನ ಅಕ್ಷರಕ್ಕೆ ಒಂದು  ರೂಪ ಬಂತು. ಇಂಗ್ಲಿಷು ಬೋಧಿಸುತ್ತಿದ್ದ ಸದಾಶಿವ ಬೈಪಡಿತ್ತಾಯ ಮಾಸ್ತರರು, ಆಗ ಹೊಸದಾಗಿ ಇಟಾಲಿಕ್ಸ್‌ನಲ್ಲಿ ಬರೆಯಬೇಕೆಂದು ಸೂಚಿಸಿದ್ದರು. ಇಂಡಿಯನ್‌ ಅಕ್ಷರವನ್ನೇ ಒಲಿಸಿಕೊಳ್ಳಲಾಗದ ನನಗೆ, ಇಟಾಲಿಕ್ಸ್ ಒಲಿದೀತೇ?  ಅಪ್ಪ ಅದಕ್ಕಾಗಿ, ಪ್ರಿಂಟೆಡ್‌ ಚುಕ್ಕೆಗಳಿರುವ ಪುಸ್ತಕವನ್ನೂ ನನಗಾಗಿ ತರಿಸಿದ್ದರು. ನನ್ನ ಅಕ್ಷರ ಮಾತ್ರ, ನಾನು ಇರೋದೇ ಹೀಗೆ ಎಂದು ಸ್ಥಾಣುವಾಯಿತು!

ಚಂದ ಬರಿ ಅನ್ನುತ್ತಿದ್ದ ಹೆತ್ತವರು, ಗುರುಗಳು, ಸಂಗಾತಿ ಎಲ್ಲರ ಸರದಿ  ಮುಗಿದು,  ಈಗ ಮಕ್ಕಳದೂ ಶುರುವಾಗಿದೆ! “ನೀನು ಬರೆದದ್ದು ಎಂತಂತಲೇ ಗೊತ್ತಾಗುದಿಲ್ಲಮ್ಮ. ಅಪ್ಪ ಎಷ್ಟು ಚಂದ ಬರೀತಾರೆ’- ಎಂದರು ಮಕ್ಕಳು. ಅವರಿಂದ ಪಾರಾಗಲು- ಹಣೆಬರಹವೇ ಒಂದೇ ಥರ ಇಲ್ಲದ ಮೇಲೆ, ಮನುಷ್ಯರ ಕೈಬರಹ  ಒಂದೇ ಥರ ಚಂದವಿರಲು ಸಾಧ್ಯವೇ!’ ಅಂದೆ. ನಾನು ಹೇಳಿದ್ದು ಅರ್ಥವಾಗದೇ  ಮಿಕಮಿಕ ನೋಡುವ ಸರದಿ ಅವರದ್ದು.

***
ಫೇಸ್‌ಬುಕ್‌ನಲ್ಲಿ ಕಾಣಿಸಿದ ಹ್ಯಾಂಡ್‌ ರೈಟಿಂಗ್‌ ಚಾಲೆಂಜ್‌ ಟ್ರೆಂಡ್‌ ನಿಂದಾಗಿ, ಅಕ್ಷರಲೋಕದ ಅಂಗಳದಲ್ಲಿ ಸುತ್ತಾಡುತ್ತಲೇ, ನನ್ನ ಬಾಲ್ಯ, ನನ್ನ ಶಾಲೆ, ಮಾಸ್ತರು, ನಮ್ಮ ಅಕ್ಷರವನ್ನು ದುಂಡಾಗಿಸಲು ಅವರು ಪಟ್ಟ ಪ್ರಯತ್ನ, ಸೊಟ್ಟ  ಅಕ್ಷರಗಳಿಂದ ಆಗುತ್ತಿದ್ದ ಫ‌ಜೀತಿ… ಉಫ್, ಎಷ್ಟೆಲ್ಲಾ ನೆನಪಾಯಿ ತಲ್ಲ? ಅಂದಹಾಗೆ, ನಿಮ್ಮದು ದುಂಡಗಿನ ಅಕ್ಷರವೋ, ಅಥವಾ ಕೋಳಿ  ಕಾಳಿನ…

* ಆರತಿ ಪಟ್ರಮೆ, ತುಮಕೂರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

sachin

ರಾಜಸ್ಥಾನ ರಾಜಕೀಯ ಬಿಕ್ಕಟ್ಟು; ಉಪ ಮುಖ್ಯಮಂತ್ರಿ ಸ್ಥಾನದಿಂದ ಸಚಿನ್ ಪೈಲಟ್‌ ವಜಾ

ಸಂಪುಟದಲ್ಲಿ ಯಾವುದೇ ಗೊಂದಲ ಇಲ್ಲ; ಸಚಿವ ಎಸ್ ಟಿ ಸೋಮಶೇಖರ್

ಸಂಪುಟದಲ್ಲಿ ಯಾವುದೇ ಗೊಂದಲ ಇಲ್ಲ; ಸಚಿವ ಎಸ್ ಟಿ ಸೋಮಶೇಖರ್

ಉಡುಪಿ: ಸಾಲಿಗ್ರಾಮ ಬ್ಯಾಂಕ್ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್

ಉಡುಪಿ: ಸಾಲಿಗ್ರಾಮ ಬ್ಯಾಂಕ್ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್

eshwarappa

ಸಿಬ್ಬಂದಿಗೆ ಸೋಂಕು: ಕ್ವಾರಂಟೈನ್ ಆದ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿ

udupi

ಉಡುಪಿ ಜಿಲ್ಲೆಯ ಎಲ್ಲಾ ಗಡಿಗಳು ನಾಳೆ ರಾತ್ರಿಯಿಂದ 14 ದಿನ ಸೀಲ್ ಡೌನ್

nagarasabe

ಉಡುಪಿ ನಗರಸಭೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್

suresgh-kumar

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ದ.ಕ ದ್ವಿತೀಯ, ಬಾಲಕಿಯರೇ ಮೇಲುಗೈ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಾಕ್‌ಡೌನ್‌ ಕತೆಗಳು… ಸೀಲ್‌ ಡೌನ್‌ ಆದಾಗಲೂ ಕೆಲಸ ಮಾಡಬೇಕಾಯಿತು…

ಲಾಕ್‌ಡೌನ್‌ ಕತೆಗಳು… ಸೀಲ್‌ ಡೌನ್‌ ಆದಾಗಲೂ ಕೆಲಸ ಮಾಡಬೇಕಾಯಿತು…

ಇಷ್ಟು ನೋವಿರುತ್ತೆ ಎಂದು ಗೊತ್ತಿರಲಿಲ್ಲ…

ಇಷ್ಟು ನೋವಿರುತ್ತೆ ಎಂದು ಗೊತ್ತಿರಲಿಲ್ಲ…

ಮಂಡಿ ನೋವಿಂದ ಮುಕ್ತಿ ಪಡೆಯಲು…ಪದ್ಮಾಸನ

ಮಂಡಿ ನೋವಿಂದ ಮುಕ್ತಿ ಪಡೆಯಲು…ಪದ್ಮಾಸನ

ಬಾರೋ ಸಾಧಕರ ಕೇರಿಗೆ : ಶಾಶ್ವತ ನೆನಪು

ಬಾರೋ ಸಾಧಕರ ಕೇರಿಗೆ : ಶಾಶ್ವತ ನೆನಪು

ನಾವು ಮರೆತ ಆಟ ಲಗೋರಿ, ಆಡೋಕ್ಕೆ ಮಜಾರೀ…

ನಾವು ಮರೆತ ಆಟ ಲಗೋರಿ, ಆಡೋಕ್ಕೆ ಮಜಾರೀ…

MUST WATCH

udayavani youtube

ಆಧಾರ್ ಕಾರ್ಡ್ ತೋರಿಸಿ COVID ಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಿರಿ

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

udayavani youtube

How TV & Mobile Screens Damage Our Eyes ( And HOW TO BE SAFE ) | Udayavani

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk


ಹೊಸ ಸೇರ್ಪಡೆ

ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸಲು ಆಗ್ರಹ

ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸಲು ಆಗ್ರಹ

ಕಾಫಿನಾಡಿನಲ್ಲಿ 10 ಮಂದಿಗೆ ಕೋವಿಡ್ ದೃಢ

ಕಾಫಿನಾಡಿನಲ್ಲಿ 10 ಮಂದಿಗೆ ಕೋವಿಡ್ ದೃಢ

ಲಾಕ್‌ಡೌನ್‌ ಕತೆಗಳು… ಸೀಲ್‌ ಡೌನ್‌ ಆದಾಗಲೂ ಕೆಲಸ ಮಾಡಬೇಕಾಯಿತು…

ಲಾಕ್‌ಡೌನ್‌ ಕತೆಗಳು… ಸೀಲ್‌ ಡೌನ್‌ ಆದಾಗಲೂ ಕೆಲಸ ಮಾಡಬೇಕಾಯಿತು…

ಇಷ್ಟು ನೋವಿರುತ್ತೆ ಎಂದು ಗೊತ್ತಿರಲಿಲ್ಲ…

ಇಷ್ಟು ನೋವಿರುತ್ತೆ ಎಂದು ಗೊತ್ತಿರಲಿಲ್ಲ…

ಮಂಡಿ ನೋವಿಂದ ಮುಕ್ತಿ ಪಡೆಯಲು…ಪದ್ಮಾಸನ

ಮಂಡಿ ನೋವಿಂದ ಮುಕ್ತಿ ಪಡೆಯಲು…ಪದ್ಮಾಸನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.