ಮಾಳ: ಮೇಘಾಲಯ ಲಿವಿಂಗ್‌ ರೂಟ್‌ ಮಾದರಿಯ ನಿಸರ್ಗ ಸೇತುವೆ

ನಿಸರ್ಗ ಸೇತುವೆ ಅಭಿಯಾನ;  ಲೀವಿಂಗ್‌ ಕಲ್ಚರಿಗೆ ಹೊಸ ರೂಪ

Team Udayavani, Jun 15, 2020, 5:41 AM IST

ಮಾಳ: ಮೇಘಾಲಯ ಲಿವಿಂಗ್‌ ರೂಟ್‌ ಮಾದರಿಯ ನಿಸರ್ಗ ಸೇತುವೆ

ಉಡುಪಿ: ಕಾಂಕ್ರೀಟ್‌ ಕಾಮಗಾರಿಯಿಂದ ನಶಿಸಿಹೋಗುತ್ತಿರುವ ಗ್ರಾಮೀಣದ ಭಾಗದ ಸೌಂದರ್ಯಕ್ಕೆ ಹೊಸರೂಪ ನೀಡಲು ಮಾಳ ಮಣ್ಣಪಾಪು ಮನೆ ಮತ್ತು ಪ್ರಾಚಿ ಪ್ರತಿಷ್ಠಾನದ ವತಿಯಿಂದ “ಸೇತುಬಂಧ’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದೆ. ಮೇಘಾಲಯ ಲಿವಿಂಗ್‌ ರೂಟ್‌ ಮಾದರಿಯ “ಲಿವಿಂಗ್‌ ಕಲ್ಚರ್‌’ ಮಾದರಿಯ ನಿಸರ್ಗ ಸೇತುವೆಗೆ ಪರಿಸರ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.

ನಿಸರ್ಗ ಸೇತುವೆಗೆ -ಹೊಸ ಕಳೆ
ಆಧುನಿಕ ಜೀವನ ಶೈಲಿಯಿಂದಾಗಿ ಗ್ರಾಮೀಣ ಜನರ ಕೌಶಲಗಳು ನಶಿಸಿ ಹೋಗುತ್ತಿದೆ. ಹಿಂದಿನ ಕಾಲದ ಮರದ ಸೇತುವೆ ಮೂಲೆಗುಂಪಾಗಿದೆ. ಚಿಕ್ಕಪುಟ್ಟ ತೊರೆಗಳಿಗೂ ಕಾಂಕ್ರೀಟ್‌ ಸೇತುವೆ ನಿರ್ಮಿಸುವ ಮೂಲಕ ಗ್ರಾಮೀಣ ಸೊಗಡಿಗೆ, ನಗರದ ಸ್ಪರ್ಶ ನೀಡಲಾಗುತ್ತಿದೆ.

ತೊರೆಗಳೂರಿನಲ್ಲಿ ಮರದ ಸೇತುವೆ
ಕಾರ್ಕಳ ತಾಲೂಕು ಮಾಳ ಒಂದು ಪುಟ್ಟ ಹಳ್ಳಿ. ಸುತ್ತಮುತ್ತಲಿನಲ್ಲಿ ಅನೇಕ ತೊರೆಗಳಿವೆ. ಬೇಸಗೆಯಲ್ಲಿ ಯಾವುದೇ ಆಸರೆ ಇಲ್ಲದೆ ತೊರೆಯ ಮೂಲಕ ಸಾಗಬಹುದು. ಸ್ಥಳೀಯವಾಗಿ ಸಿಗುವ ಸತ್ತ ಅಡಿಕೆ ಮರ, ಬೀಳುಗಳನ್ನು ಬಳಸಿಕೊಂಡು ಸೇತುವೆ ನಿರ್ಮಾಣ ಮಾಡಲಾಗುತ್ತಿತ್ತು.
ಈ ನಿಸರ್ಗ ಸೇತುವೆ ನಿರ್ಮಾಣ ಮಾಡುವ ಕೌಶಲವನ್ನು ಉಳಿಸುವ ನಿಟ್ಟಿನಲ್ಲಿ “ಸೇತುಬಂಧ’ ಎಂಬ ಅಭಿಯಾನ ಹಮ್ಮಿಕೊಂಡಿದೆ. ಆ ಮೂಲಕ ಸ್ಥಳೀಯರು ಮತ್ತು ನುರಿತ ಸಿಬಂದಿಯ ಸಹಾಯದಿಂದ ಕಾರ್ಕಳದ ಸುತ್ತಮುತ್ತಲಿನಲ್ಲಿ ಮರದ ಸೇತುವೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಒಂದೊಂದು ಸೇತುವೆಗೆ ಒಂದೊಂದು ವಿನ್ಯಾಸವಿರಲಿದೆ. ಸ್ಥಳೀಯ ಸೇತುವೆಗಳ ನಿರ್ಮಾಣ ಕಾರ್ಯದಲ್ಲಿ ನುರಿತ ಸ್ಥಳೀಯ ನಿವಾಸಿ ಶ್ರೀನಿವಾಸ್‌, ಅಪ್ಪಣ್ಣ ಮತ್ತು ತಂಡದ ಸಹಾಯದಿಂದ ಮೊದಲ ಸೇತುವೆ ಈಗಾಗಲೇ ಪೂರ್ಣಗೊಂಡಿದೆ. ಇದೇ ತಂಡ ನಿರ್ಮಿಸುತ್ತಿರುವ ಸಮೀಪದ ಎರಡನೆ ಸೇತುವೆ ಅಂತಿಮ ಹಂತದಲ್ಲಿದೆ.

ಪ್ರಾಚಿ ಫೌಂಡೇಶನ್‌ ಸಾಥ್‌
ಮಾಳ ಪರಿಸರದಲ್ಲಿ ನಶಿಸಿ ಹೋಗುತ್ತಿರುವ ನಿಸರ್ಗ ಸೇತುವೆ ನಿರ್ಮಾಣ ಕೌಶಲಕ್ಕೆ ಜೀವ ನೀಡುವ ಉದ್ದೇಶದಿಂದ ಪ್ರಾಚಿ ಫೌಂಡೇಷನ್‌ ಈಗಾಗಲೇ 30 ಅಡಿ ಉದ್ದ ಹಾಗೂ ಮೂರು ಅಡಿ ಅಗಲದ ಒಂದು ಸೇತುವೆಯನ್ನು ನಿರ್ಮಿಸಿದೆ. ಅಗತ್ಯವಿರುವ ಸಹಾಯ ಮಾಡುತ್ತಿದೆ. ಹಳ್ಳಿಗಳಲ್ಲಿರುವ ಕುಶಲಕರ್ಮಿಗಳು ಸೇರಿಕೊಂಡು ಎರಡು ಸೇತುವೆ ನಿರ್ಮಾಣ ಮಾಡಿದ್ದಾರೆ. ಎರಡು ಕಡೆಗಳಿಂದ ಇಬ್ಬರು ಒಮ್ಮೆಗೆ ಸಾಗಿ ಹೋಗಬಹುದು. ಸ್ಥಳೀಯವಾಗಿ ಸಿಗುವ ಸತ್ತ ಮರಗಳಿಂದ ಸೇತುವೆ ತಯಾರಾಗು ವುದರಿಂದ ಕೇವಲ 6,000 ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಬಹುದಾಗಿದೆ.

ನಿಸರ್ಗ ಉಳಿಸುವ ಅಭಿಯಾನ
ಮಾಳ ಒಂದು ಸುಂದರವಾದ ಪ್ರಕೃತಿದತ್ತವಾದ ಪ್ರದೇಶ. ಇಲ್ಲಿ ಒಂದು ಮನೆಯಿಂದ ಇನ್ನೊಂದು ಮನೆಗೆ ತೆರಳಬೇಕಾದರೆ ತೊರೆಗೆ ಅಡ್ಡವಾಗಿ ನಿರ್ಮಿಸಲಾದ ನಿಸರ್ಗ ಸೇವೆ ಮೂಲಕ ದಾಟಿ ಹೋಗಬೇಕು. ನೈಸರ್ಗಿಕ ವಸ್ತುಗಳನ್ನು ಮಾತ್ರ ಬಳಸಿಕೊಂಡು ಮಾಡುವ ಸೇತುವೆ ನಿರ್ಮಿಸುವ ಕೌಶಲ ಮಾಯವಾಗುತ್ತಿದೆ. ಇದನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ.
-ಪುರುಷೋತ್ತಮ ಅಡ್ವೆ ,ಅಭಿಯಾನ ರೂವಾರಿ

ಟಾಪ್ ನ್ಯೂಸ್

500 ರೂ. ವಿಷಯದಲ್ಲಿ ಜುಟ್ಟು ಹಿಡಿದು ಹೊಡೆದಾಡಿಕೊಂಡ ನರ್ಸ್ ಮತ್ತು ಆಶಾ ಕಾರ್ಯಕರ್ತೆ

500 ರೂ. ವಿಷಯದಲ್ಲಿ ಜುಟ್ಟು ಹಿಡಿದು ಹೊಡೆದಾಡಿಕೊಂಡ ನರ್ಸ್ ಮತ್ತು ಆಶಾ ಕಾರ್ಯಕರ್ತೆ

1-1-sds

ಭಾರತದ ಸ್ಮೃತಿ ಮಂಧಾನ ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗರಾಗಿ ಆಯ್ಕೆ

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

yatnal

ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ರೇಣು ಭೇಟಿಗೆ ಯತ್ನಾಳ್ ಸಮಜಾಯಿಷಿ

“ಕೇಜ್ರಿವಾಲ್ ಗೆ ಒಂದು ಅವಕಾಶ ಕೊಡಿ”; ಪಂಚರಾಜ್ಯಗಳಲ್ಲಿ ಆಪ್ ಚುನಾವಣಾ ಪ್ರಚಾರಕ್ಕೆ ಚಾಲನೆ

“ಕೇಜ್ರಿವಾಲ್ ಗೆ ಒಂದು ಅವಕಾಶ ಕೊಡಿ”; ಪಂಚರಾಜ್ಯಗಳಲ್ಲಿ ಆಪ್ ಚುನಾವಣಾ ಪ್ರಚಾರಕ್ಕೆ ಚಾಲನೆ

1-dqwqe

ಅಂತಹ ಸಭೆಗೆ ಹೋಗಲ್ಲ: ಬೆಳಗಾವಿ ಬಿಜೆಪಿ ಸಭೆಗೆ ರಮೇಶ್ ಜಾರಕಿಹೊಳಿ‌ ಅಸಮಾಧಾನ

ವಾಟ್ಸ್‌ಆ್ಯಪ್‌ ಚಾಟಿಂಗ್‌ ಹಿಸ್ಟರಿ ರವಾನೆ ಇನ್ನು ಸುಲಭ

ವಾಟ್ಸ್‌ಆ್ಯಪ್‌ ಚಾಟಿಂಗ್‌ ಹಿಸ್ಟರಿ ರವಾನೆ ಇನ್ನು ಸುಲಭಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿಶ್ರಮಿ ಅಜ್ಜಿ ಕಟ್ಟಿದ ಕಲ್ಲಿನ ಕೋಟೆ

ಪರಿಶ್ರಮಿ ಅಜ್ಜಿ ಕಟ್ಟಿದ ಕಲ್ಲಿನ ಕೋಟೆ; ಕೆರ್ವಾಶೆಯ ಸುಲೋಚನಮ್ಮನ ವಿಸ್ಮಯಕಾರಿ ಸಾಹಸ

ಕರಾವಳಿಯ ಎರಡು ಪ್ರಮುಖ ನಗರಗಳಲ್ಲಿ ಮಾಸ್ಕ್ ಧಾರಣೆ ನಿರೀಕ್ಷಿತ ಮಟ್ಟದಲ್ಲಿಲ್ಲ

ಕರಾವಳಿಯ ಎರಡು ಪ್ರಮುಖ ನಗರಗಳಲ್ಲಿ ಮಾಸ್ಕ್ ಧಾರಣೆ ನಿರೀಕ್ಷಿತ ಮಟ್ಟದಲ್ಲಿಲ್ಲ

ಉಡುಪಿ: ಬೀಚ್‌ನಲ್ಲಿ ರಾತ್ರಿ ಸಂಚಾರ ಬಂದ್‌

ಉಡುಪಿ: ಬೀಚ್‌ನಲ್ಲಿ ರಾತ್ರಿ ಸಂಚಾರ ಬಂದ್‌

ಸುಪ್ರಸಿದ್ಧ ಯಕ್ಷಗಾನ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ

ಸುಪ್ರಸಿದ್ಧ ಯಕ್ಷಗಾನ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ

ತುಳುನಾಡ ಕಲಾಕೃತಿಗಳನ್ನು ಸುರಕ್ಷಿತವಾಗಿಡುವುದೇ ಸವಾಲು

ತುಳುನಾಡ ಕಲಾಕೃತಿಗಳನ್ನು ಸುರಕ್ಷಿತವಾಗಿಡುವುದೇ ಸವಾಲು

MUST WATCH

udayavani youtube

ಪ್ರಕೃತಿಯನ್ನು ಲೂಟಿ ಮಾಡಿದ ಪರಿಣಾಮ ಹೀಗೆಲ್ಲ ಆಗಿದೆ !!

udayavani youtube

ಒಂದೇ ವಾಹನಕ್ಕೆ ಒಂದು ತಿಂಗಳ ಅಂತರದಲ್ಲಿ ಪೊಲೀಸರಿಂದ 16 ನೋಟಿಸ್

udayavani youtube

ರಾಷ್ಟ್ರೀಯ ಬಾಲ ಪುರಸ್ಕಾರ : ಪ್ರಧಾನಿ ಜೊತೆ ಮಂಗಳೂರಿನ ರೆಮೋನಾ ಪರೇರಾ ಮಾತುಕತೆ

udayavani youtube

ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ ! ಕೆಲಸಕ್ಕೆ ಹೋಗುವವರ ಪರದಾಟ ಹೇಳತೀರದು…

udayavani youtube

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ, ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ

ಹೊಸ ಸೇರ್ಪಡೆ

ಲಿಂಗಾಯತರು ಶರಣರ ನಿಜಾಚರಣೆ ಅರಿತು ಆಚರಿಸಬೇಕು : ಇಮಾಮುದ್ದಿನ ಅತ್ತಾರ

ಲಿಂಗಾಯತರು ಶರಣರ ನಿಜಾಚರಣೆ ಅರಿತು ಆಚರಿಸಬೇಕು : ಇಮಾಮುದ್ದಿನ ಅತ್ತಾರ

ತೊಗರಿ ಹಾನಿಯ ಪರಿಹಾರದ ಮೊತ್ತ ದ್ವಿಗುಣಗೊಳಿಸಲು ತಹಶೀಲ್ದಾರಿಗೆ ರೈತರ ಮನವಿ

ತೊಗರಿ ಹಾನಿಯ ಪರಿಹಾರದ ಮೊತ್ತ ದ್ವಿಗುಣಗೊಳಿಸಲು ತಹಶೀಲ್ದಾರಿಗೆ ರೈತರ ಮನವಿ

500 ರೂ. ವಿಷಯದಲ್ಲಿ ಜುಟ್ಟು ಹಿಡಿದು ಹೊಡೆದಾಡಿಕೊಂಡ ನರ್ಸ್ ಮತ್ತು ಆಶಾ ಕಾರ್ಯಕರ್ತೆ

500 ರೂ. ವಿಷಯದಲ್ಲಿ ಜುಟ್ಟು ಹಿಡಿದು ಹೊಡೆದಾಡಿಕೊಂಡ ನರ್ಸ್ ಮತ್ತು ಆಶಾ ಕಾರ್ಯಕರ್ತೆ

1-1-sds

ಭಾರತದ ಸ್ಮೃತಿ ಮಂಧಾನ ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗರಾಗಿ ಆಯ್ಕೆ

2023ರ ವಿಧಾನಸಭೆ ಚುನಾವಣೆಯೇ ನಮ್ಮ ಗುರಿ: ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ

2023ರ ವಿಧಾನಸಭೆ ಚುನಾವಣೆಯೇ ನಮ್ಮ ಗುರಿ: ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.