ಲವ್ ಜೆಹಾದ್, ಮತಾಂತರ, ಗೋಹತ್ಯೆ ತಡೆಗೆ ಕಠಿನ ಕಾನೂನು ಜಾರಿಯಾಗಲಿ
ಕಾರ್ಕಳ: ಬೃಹತ್ ಹಿಂದೂ ಸಂಗಮ
Team Udayavani, Dec 13, 2021, 5:25 AM IST
ಕಾರ್ಕಳ: ಹಿಂದೂ ಕಾರ್ಯಕರ್ತರ ತ್ಯಾಗ ಎಲ್ಲಿ ತನಕ ಇದೆಯೋ ಅಲ್ಲಿಯವರೆಗೂ ಧರ್ಮ, ಸಂಸ್ಕೃತಿ ನಶಿಸಲು ಸಾಧ್ಯವಿಲ್ಲ. ಮತಾಂತರ, ಲವ್ ಜೆಹಾದ್, ಗೋರಕ್ಷಣೆಗೆ ರಾಜ್ಯದಲ್ಲಿ ಕಠಿನ ಕಾನೂನು ತರುವಂತೆ ಸಾಧ್ವಿ ಬಾಲಿಕಾ ಸರಸ್ವತಿ ಆಗ್ರಹಿಸಿದರು.
ವಿಶ್ವ ಹಿಂದೂ ಪರಿಷದ್, ಬಜರಂಗದಳ ಕಾರ್ಕಳ ಪ್ರಖಂಡದ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ನಡೆದ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಧರ್ಮ ರಕ್ಷಣೆ ಕಾರ್ಯವನ್ನು ನಾವೇ ಮಾಡಬೇಕಿದೆ. ಮನೆಯ ಹಟ್ಟಿಯಿಂದ ಗೋಕಳ್ಳತನ ನಡೆಸುವವರಿಗೆ ತಕ್ಕ ಉತ್ತರ ನೀಡಬೇಕಿದೆ. ಗೋಮಾತೆ ರಾಷ್ಟ್ರಮಾತೆಯಾಗಿ ಘೋಷಣೆಯಾಗಬೇಕು ಎಂದರು. ಲವ್ ಜೆಹಾದ್ ತಡೆಗೆ ಪ್ರತಿ ಮನೆಯ ತಾಯಿಯೂ ಝಾನ್ಸಿ ರಾಣಿಯಾಗಬೇಕು ಎಂದರು.
ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸಂಸ್ಕೃತಿ ರಕ್ಷಿಸುತ್ತಿರುವ ಕಾರ್ಯಕರ್ತರ ತ್ಯಾಗ ಮತ್ತು ಸೇವೆಯಿಂದ ನಾವಿಂದು ತಲೆ ಎತ್ತಿ ಬಾಳುತ್ತಿದ್ದೇವೆ. ಸಂಸ್ಕೃತಿ ಧರ್ಮ ರಕ್ಷಣೆ ಕಾರ್ಯಕರ್ತರ ಕೆಲಸವಲ್ಲ. ಪ್ರತಿ ಮನೆಯ ಹೆಣ್ಣು ಮಕ್ಕಳು ಸೇರಿ ಎಲ್ಲರದ್ದೂ ಆಗಿದೆ ಎಂದರು. ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರಾಣಿ ಪ್ರೀಯರು ಎಂದ ಮಾತ್ರಕ್ಕೆ ಹುಚ್ಚು ನಾಯಿಯನ್ನು ಮನೆ ಒಳಗೆ ಬಿಡಲಾಗಲ್ಲ, ಶಾಂತಿ ಪ್ರೀಯರ ನಾಡಲ್ಲಿ ದೇಶದ್ರೋಹಿಗಳಿಗೆ ಅವಕಾಶವಿರಕೂಡದು. ಸಮಾನ ನಾಗರಿಕ ಕಾನೂನು ದೇಶದಲ್ಲಿ ಜಾರಿಯಾಗಬೇಕು ಎಂದರು.
ಇದನ್ನೂ ಓದಿ:ಮಧ್ಯಪ್ರದೇಶದ 5 ಕಡೆ ಡ್ರೋನ್ ತಂತ್ರಜ್ಞಾನ ಶಾಲೆ: ಜ್ಯೋತಿರಾಧಿತ್ಯ ಸಿಂಧಿಯಾ
50 ಸಾವಿರ ರೂ. ಘೋಷಣೆ
ಅವಧೂತ ವಿನಯ ಗುರೂಜಿ ಅವಧೂತರು ಮಾತನಾಡಿ ಹಿಂದೂ ಧರ್ಮ ಉಳಿಯಲು, ಧರ್ಮ ಪ್ರಜ್ಞೆ ಮೂಡಿಸುವ ಪ್ರವೃತ್ತಿ ಬಾಲ್ಯದಲ್ಲೇ ಅಗಬೇಕು. ಬಜರಂಗದಳ ಕಾರ್ಯಕರ್ತರ ಮೇಲಿನ ಪ್ರಕರಣ ರದ್ದುಗೊಳಿಸಲು ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡುವುದಾಗಿ ಹೇಳಿ ದತ್ತ ನಿಧಿಗೆ 50 ಸಾವಿರ ರೂ. ನಿಧಿ ಘೋಷಿಸಿದರು.
ಎಂ.ಬಿ. ಪುರಾಣಿಕ್, ಬೋಳ ಶ್ರೀನಿವಾಸ್ ಕಾಮತ್, ಬಸವರಾಜ್ , ಭಾಸ್ಕರ್ ಕೋಟ್ಯಾನ್, ವಿಶ್ವನಾಥ ಪೂಜಾರಿ, ಮಹೇಶ್ ಶೆಟ್ಟಿ, ಸುವ್ರತ್ ಕುಮಾರ್, ಶರತ್ ಹೆಗ್ಡೆ, ಅಶೋಕ್ ನಾಯಕ್ ಹಿರ್ಗಾನ, ಸುಂದರ ಬಿ, ಭುಜರಂಗ ಕುಲಾಲ್, ವಿಷ್ಣುಮೂರ್ತಿ ಆಚಾರ್, ಸುರೇಖ ರಾಜ್ , ದಿನೇಶ್ ಮೆಂಡನ್, ಪೂರ್ಣಿಮ ಸುರೇಶ್, ಸುರೇಂದ್ರ ಕೋಟೇಶ್ವರ, ಅಶೋಕ್ ಪಾಲಡ್ಕ, ಅಶೋಕ್ ಕುಮಾರ್ ಜೈನ್, ಜಗದೀಶ್ ಪೂಜಾರಿ, ಸುಧೀರ್ ನಿಟ್ಟೆ , ಸುರಕ್ಷಾ ಉಪಸ್ಥಿತರಿದ್ದರು. ಸುನಿಲ್ ಕೆ.ಆರ್. ಪ್ರಸ್ತಾವನೆಗೈದರು. ಚೇತನ್ ಪೇರಲ್ಕೆ ಸ್ವಾಗತಿಸಿ, ಅಶೋಕ್ ಕುಮಾರ್ ಜೈನ್ ವಂದಿಸಿ, ಸುಚೇಂದ್ರ ನಿರೂಪಿಸಿದರು.
ಸಾಧ್ವಿಯ ಕನ್ನಡ, ಹಿಂದಿ ಮಾತು!
ಸಾಧ್ವಿ ಸರಸ್ವತಿ ಅವರು ಕನ್ನಡದಲ್ಲಿ ಅಣ್ಣ -ತಮ್ಮಂದಿರೆ, ಅಕ್ಕ, ತಂಗಿಯರೇ ಎಂದು ಮಾತು ಆರಂಭಿಸಿ, ಹಿಂದಿಯಲ್ಲಿ ಮಾತು ಮುಂದುವರಿಸಿದರು. ಕೊನೆಯಲ್ಲಿ ಧನ್ಯವಾದಗಳು ಎಂದು ಕನ್ನಡದಲ್ಲೆ ಮಾತು ಮುಗಿಸಿದರು. ಅವರ ಮಾತಿನ ಮಧ್ಯೆ ಕರತಾಡನ, ಘೋಷ ವಾಕ್ಯ ಮೊಳಗುತ್ತಲೆ ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಿರು ಆಹಾರ ಸಂಸ್ಕರಣೆ ಉದ್ಯಮ ಘಟಕ ಆರಂಭಕ್ಕೆ ಸಾಲ ಸೌಲಭ್ಯ: ತಿರಸ್ಕೃತ ಅರ್ಜಿಗಳೇ ಹೆಚ್ಚು !
ಉಡುಪಿಯಲ್ಲಿಂದು ಶ್ರೀಕೃಷ್ಣಜನ್ಮಾಷ್ಟಮಿ, ನಾಳೆ ಕೃಷ್ಣ ಲೀಲೋತ್ಸವ
ಆ.21 : ಕಟಪಾಡಿಯಲ್ಲಿ ಯುವವಾಹಿನಿ ಡೆನ್ನಾನ ಡೆನ್ನಾನ ಸಾಂಸ್ಕೃತಿಕ ಸ್ಪರ್ಧೆ
ಉಡುಪಿಯಲ್ಲಿ ನಾಳೆ ಕೃಷ್ಣಾಷ್ಟಮಿ, ನಾಡಿದ್ದು ವಿಟ್ಲ ಪಿಂಡಿ
ಶಿರ್ವ: ಮನೆಗೆ ನುಗ್ಗಿ ಹಲ್ಲೆ, ಹಾನಿ;ಮೂವರ ವಿರುದ್ಧ ಪ್ರಕರಣ ದಾಖಲು