ಲಕ್ನೋಗೆ ಭರ್ಜರಿ ಗೆಲುವು; ಕೋಲ್ಕತಾ ವಿರುದ್ಧ 75 ರನ್‌ಗಳ ಜಯ
ಪಾಯಿಂಟ್ಸ್ ಟೇಬಲ್ ನಲ್ಲಿ ಮೊದಲ ಸ್ಥಾನಕ್ಕೇರಿದ ಲಕ್ನೋ
Team Udayavani, May 7, 2022, 11:17 PM IST
ಪುಣೆ: ಪ್ರಸಕ್ತ ಐಪಿಎಲ್‌ನಲ್ಲಿ ಹೊಸ ತಂಡವೆನಿಸಿದರೂ, ಸರ್ವಾಂಗೀಣ ಪ್ರದರ್ಶನ ನೀಡುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು, ಕೋಲ್ಕತಾ ವಿರುದ್ಧ 75 ರನ್‌ಗಳ ಅಮೋಘ ಗೆಲುವು ಸಾಧಿಸಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಸ್ಥಾನಕ್ಕೇರಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ, ಕೋಲ್ಕತಾ ತಂಡದ ಸಂಘಟಿತ ದಾಳಿಯ ಹೊರತಾಗಿಯೂ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿದ ಕೋಲ್ಕತಾ ನೈಟ್ ರೈಡರ್ಸ್ ತಂಡ 14.4 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಲಕ್ನೋ 75 ರನ್‌ಗಳ ಗೆಲುವು ಸಾಧಿಸಿತು. ಅಲ್ಲದೇ 14 ಓವರ್ ಎಸೆದ ಹೋಲ್ಡರ್ ಹ್ಯಾಟ್ರಿಕ್ ಮೂಲಕ ಭರ್ಜರಿ ಜಯ ಒದಗಿಸಿದರು.
ಕೋಲ್ಕತಾ ತಂಡದ ಪರ ಅಲೌಂಡರ್ ಆ್ಯಂಡ್ರೆ ರೆಸೆಲ್ ಅವರು 45 ರನ್ ಗಳಿಸಿದರು. ಇವರಿಗೆ ಸುನೀಲ್ ನಾರಾಯಣ್ 22 ರನ್ ಗಳಿಸಿ ಸಾಥ್ ನೀಡಿದರು. ಆ್ಯರನ್ ಫಿಂಚ್ ಅವರು 14 ರನ್ ಗಳಿಸಿದರು. ಉಳಿದವರ ಬ್ಯಾಟ್‌ನಿಂದ ರನ್ ಹರಿಯಲಿಲ್ಲ.
ಲಕ್ನೋಗೆ ಕಾಕ್ ಆಸರೆ
ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಮತ್ತು ದೀಪಕ್ ಹೂಡಾ ಅವರ ಉತ್ತಮ ಆಟದಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 7 ವಿಕೆಟಿಗೆ 176 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು. ಲಕ್ನೋದ ಬ್ಯಾಟಿಂಗ್ ತಾರೆ, ನಾಯಕ ರಾಹುಲ್ ಮೊದಲ ಓವರ್ ವೇಳೆ ದುರದೃಷ್ಟವಶಾತ್ ರನೌಟ್ ಆದರು. ಇದರಿಂದ ತಂಡದ ಬ್ಯಾಟಿಂಗ್‌ಗೆ ಬಲವಾದ ಹೊಡೆತ ಬಿತ್ತು. ಆದರೆ ಕಾಕ್ ಮತ್ತು ಹೂಡಾ ಈ ಆಘಾತದಿಂದ ತಂಡವನ್ನು ಮೇಲಕ್ಕೆ ಎತ್ತುವಲ್ಲಿ ಯಶಸ್ವಿಯಾದರು. ಈ ಹಿಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಕಾಕ್ ಮತ್ತು ಹೂಡಾ ಅಮೋಘವಾಗಿ ಆಡಿ ಉತ್ತಮ ಇನಿಂಗ್ಸ್ ಕಟ್ಟಿದರು. ದ್ವಿತೀಯ ವಿಕೆಟಿಗೆ 71 ರನ್ನುಗಳ ಜತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ಉತ್ತಮವಾಗಿ ಆಡುತ್ತಿದ್ದ ಕಾಕ್ ಅವರು ನಾರಾಯಣ್ ಅವರ ಎಸೆತದಲ್ಲಿ ಔಟಾದರು. 29 ಎಸೆತ ಎದುರಿಸಿದ ಅವರು 4 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಸರಿಯಾಗಿ ಅರ್ಧಶತಕ ಹೊಡೆದಿದ್ದರು. ಹೂಡಾ 27 ಎಸೆತಗಳಿಂದ 4 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 41 ರನ್ ಹೊಡೆದರು. ಹೂಡಾ ಔಟಾದ ಬಳಿಕ ತಂಡದ ರನ್ ವೇಗ ಕುಸಿಯಿತು. ಕೃಣಾಲ್ ಪಾಂಡ್ಯ 25 ರನ್ ಗಳಿಸಿದರೆ ಆಯುಷ್ ಬದೋನಿ 15 ರನ್ ಗಳಿಸಿ ಔಟಾಗದೇ ಉಳಿದರು. ಅದಕ್ಕಾಗಿ ಅವರು 18 ಎಸೆತ ಎದುರಿಸಿದ್ದರು.
ಕೊನೆ ಹಂತದಲ್ಲಿ ಸ್ಟಾಯಿನಿಸ್ ಮತ್ತು ಹೋಲ್ಡರ್ ಬಿರುಸಿನ ಆಟ ಆಡಿದ್ದರಿಂದ ತಂಡದ ಮೊತ್ತ 170ರ ಗಡಿ ದಾಟುವಂತಾಯಿತು. ಸ್ಟಾಯಿನಿಸ್ 14 ಎಸೆತಗಳಿಂದ 1 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 28 ರನ್ ಗಳಿಸಿದರೆ ಹೋಲ್ಡರ್ ಕೇವಲ 4 ಎಸೆತಗಳಿಂದ 2 ಸಿಕ್ಸರ್ ಸಹಿತ 13 ರನ್ ಹೊಡೆದರು. ಬಿಗು ದಾಳಿ ಸಂಘಟಿಸಿದ ಆ್ಯಂಡ್ರೆ ರಸೆಲ್ ತನ್ನ 3 ಓವರ್‌ಗಳ ದಾಳಿಯಲ್ಲಿ 22 ರನ್ನಿಗೆ 2 ವಿಕೆಟ್ ಕಿತ್ತರು. ಟಿಮ್ ಸೌದಿ, ಶಿವಂ ಮಾವಿ, ಸುನೀಲ್ ನಾರಾಯಣ್ ತಲಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಲಕ್ನೋ ಜೈಂಟ್ಸ್ 20 ಓವರ್, 176/7 (ಡಿ ಕಾಕ್ 50, ದೀಪಕ್ ಹೂಡಾ 41, ಆಂಡ್ರೆ ರಸೆಲ್ 22ಕ್ಕೆ 2). ಕೋಲ್ಕತಾ 14.3 ಓವರ್, 101/10(ರಸೆಲ್ 45, ನಾರಾಯಣ್ 22).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅತಿಯಾದ ಹಸ್ತಕ್ಷೇಪ: ಭಾರತೀಯ ಫುಟ್ ಬಾಲ್ ಸಂಸ್ಥೆಯನ್ನು ಅಮಾನತು ಮಾಡಿದ ಫಿಫಾ
ಬ್ರಿಸ್ಬೇನ್ ಒಲಿಂಪಿಕ್ಸ್-2032: ಕ್ರಿಕೆಟ್ ಸೇರಿಸಲು ಆಸ್ಟ್ರೇಲಿಯ ಯತ್ನ
2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವುದು ನನ್ನ ಕನಸು: ಅಚಂತ ಶರತ್ ಕಮಲ್
ರಾಹುಲ್-ಧವನ್ ಓಪನಿಂಗ್: ವನ್ಡೌನ್ನಲ್ಲಿ ಶುಭಮನ್ ಗಿಲ್
ಕೆನಡಿಯನ್ ಓಪನ್ ಟೆನಿಸ್: ಮೂರನೇ ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್