ನೂತನ ಫ್ರಾಂಚೈಸಿ ಹೆಸರು “ಲಕ್ನೋ ಸೂಪರ್ ಜೈಂಟ್ಸ್’
Team Udayavani, Jan 25, 2022, 7:35 AM IST
ಹೊಸದಿಲ್ಲಿ: ಐಪಿಎಲ್‌ನ ನೂತನ ಲಕ್ನೋ ಫ್ರಾಂಚೈಸಿಗೆ ನಾಮಕರಣವಾಗಿದೆ. ಇದರ ಹೆಸರು “ಲಕ್ನೋ ಸೂಪರ್ ಜೈಂಟ್ಸ್’.
ಈ ಫ್ರಾಂಚೈಸಿಯ ಒಡೆತನ ಹೊಂದಿರುವ, ಆರ್‌ಪಿಎಸ್‌ಜಿ ಗ್ರೂಪ್‌ನ ಅಧ್ಯಕ್ಷ ಸಂಜೀವ್ ಗೋಯೆಂಕಾ ಸೋಮವಾರ ಇದನ್ನು ಪ್ರಕಟಿಸಿದರು.
ನೂತನ ತಂಡಕ್ಕೆ ಹೆಸರು ಸೂಚಿಸುವಂತೆ ಲಕ್ನೋ ಫ್ರಾಂಚೈಸಿ ಜ. 3ರಂದು ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಸೂಚಿಸಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳು ಎಂಬುದಾಗಿ ಗೋಯೆಂಕಾ ಹೇಳಿದ್ದಾರೆ.
ಇದನ್ನೂ ಓದಿ:ಪ್ರೊ ಕಬಡ್ಡಿ: ದಿಲ್ಲಿಯನ್ನು ಕೆಡವಿದ ಪುನೇರಿ ಪಲ್ಟಾನ್
ಕೆ.ಎಲ್. ರಾಹುಲ್ ಈ ತಂಡದ ನಾಯಕರಾಗಿದ್ದಾರೆ. ಆಸ್ಟ್ರೇಲಿಯದ ಆಲ್‌ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಮತ್ತು ರಾಜಸ್ಥಾನದ ಲೆಗ್‌ಬ್ರೇಕ್ ಗೂಗ್ಲಿ ಬೌಲರ್ ರವಿ ಬಿಷ್ಣೋಯಿ ಅವರನ್ನೂ ತಂಡ ಆಯ್ದುಕೊಂಡಿದೆ.