Udayavni Special

ಕರಾವಳಿಯ ಆಟಿ ಕಳಂಜ ಜನಪದ ಕಲೆ ಹಿನ್ನೆಲೆಯ “ಮಡಿ’

ಆನ್‌ಲೈನ್‌ ಪ್ರೀಮಿಯರ್‌ನಲ್ಲಿ ಸೆಲಿಬ್ರಿಟಿಗಳ ಭರಪೂರ ಮೆಚ್ಚುಗೆ

Team Udayavani, Jun 3, 2020, 7:58 AM IST

keeru chitra madi

ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರು ನಿರ್ದೇಶಿಸಿರುವ “ಮಡಿ’ ಎಂಬ ಅದ್ಭುತ ಕಿರುಚಿತ್ರಕ್ಕೆ ಈಗಾಗಲೇ ಹಲವು ಪ್ರಶಸ್ತಿ, ಪ್ರಶಂಸೆಗಳು ಸಿಕ್ಕಿವೆ. ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಹಾಗಾಗಿ ಇದೊಂದು ವಿಭಿನ್ನ ಪ್ರಯೋಗದ ಕಿರುಚಿತ್ರ ಎನ್ನಲ್ಲಡ್ಡಿಯಿಲ್ಲ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಕಿರುಚಿತ್ರದಲ್ಲಿ ಹಲವು ವಿಶೇಷತೆಗಳಿವೆ.

ಮೊದಲ ವಿಶೇಷವೆಂದರೆ, ಇದೊಂದು ಕರಾವಳಿ ಜನಪದ ಕಲೆಯಾಗಿರುವ “ಆಟಿ ಕಳಂಜ’ ಎಂಬ ಒಂದು ಸೂಕ್ಷ್ಮ ವಿಚಾರದ ಕುರಿತು ಗಹನವಾಗಿ ಬೆಳಕು ಚೆಲ್ಲುವಂತಹ ಕಥೆ ಹೆಣೆದು ಮಾಡಿರುವ ಚಿತ್ರವಾಗಿದೆ. ಇನ್ನೊಂದು ವಿಶೇಷವೆಂದರೆ, ಈ ಸಿನಮಾ ಕೂಡ ಕರಾವಳಿ ಭಾಗದಲ್ಲೇ ಚಿತ್ರೀಕರಣಗೊಂಡಿದೆ. ಸುಮಾರು 25 ನಿಮಿಷಗಳ ಈ “ಮಡಿ’ ಎಂಬ ಕಿರುಚಿತ್ರದಲ್ಲಿ ಗಾಯಕಿ ಎಂ.ಡಿ.ಪಲ್ಲವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ವಿಶೇಷ ಪಾತ್ರದ ಮೂಲಕ ಗಮನಸೆಳೆದಿದ್ದಾರೆ.

ಕಥೆ ಹಾಗು ಪಾತ್ರ ಕೇಳಿದೊಡನೆ ತುಂಬಾನೇ ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ಕಿರುಚಿತ್ರ ಇದಾಗಿದ್ದು, ಎಂ.ಡಿ.ಪಲ್ಲವಿ ಅವರಿಗೆ ಹೊಸ ಬಗೆಯ ಪಾತ್ರ, ಕಥೆಯಲ್ಲಿ ಕಾಣಿಸಿಕೊಳ್ಳಬೇಕೆಂಬ ಬಯಕೆ “ಮಡಿ’ ಚಿತ್ರದ ಮೂಲಕ ಈಡೇರಿದೆ. ಅಂದಹಾಗೆ, ಈ ಚಿತ್ರ ಇತ್ತೀಚೆಗೆ ಆನ್‌ಲೈನ್‌ ಪ್ರೀಮಿಯರ್‌ ಆಗಿದ್ದು ವಿಶೇಷತೆಗಳಲ್ಲೊಂದು. ನಿರ್ದೇಶಕ ಸುಧೀರ್‌ ಅತ್ತಾವರ್‌ ಅವರು ಈ ವಿಶೇಷ ಆನ್‌ಲೈನ್‌ ಪ್ರೀಮಿಯರ್‌ ಎಂಬ ಹೊಸ ಕಾನ್ಸೆಪ್ಟ್ನೊಂದಿಗೆ “ಮಡಿ’ ಚಿತ್ರದೊಳಗಿನ ಆಶಯ ಅದರಲ್ಲಿರುವ ತವಕ, ತಲ್ಲಣ ವಾಸ್ತವ ಅಂಶಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ.

ಈಗಾಗಲೇ ಸಿನಿಮಾ ನೋಡಿದವರು ಕಲಾವಿದರು ಮತ್ತು ಖ್ಯಾತ ಗಾಯಕ, ಕಲಾವಿದರಾದ ಶರೂನ್‌ ಪ್ರಭಾಕರ್‌ ಅವರಂತಹವರ ಜೊತೆ ಸಂವಾದ-ಚರ್ಚೆ ಕೂಡ ಮಾಡಿದ್ದಾರೆ. ಹಲವರು ಆನ್‌ಲೈನ್‌ ಪ್ರೀಮಿಯರ್‌ನಲ್ಲಿ “ಮಡಿ’ ಸಿನಿಮಾ ಕುರಿತು ಶರೂನ್‌ ಅವರೊಂದಿಗೆ ಸಂವಾದ ನಡೆಸಿದ್ದಾರೆ. ಇನ್ನು “ಮಡಿ’ ಚಿತ್ರದ ಶೀರ್ಷಿಕೆ ಕೆಳಗೆ ಮಲಿನ ಮನಗಳ ಕ್ರೌರ್ಯ ಎಂಬ ಅಡಿಬರಹವೂ ಇದೆ. ಅಲ್ಬರ್ಟ್‌ ಜೋಸ್ಸಿ ರೇಗೋ ಅರ್ಪಿಸಿರುವ ಈ ಚಿತ್ರ ಸಕ್ಸಸ್‌ ಫಿಲ್ಮ್ ಮತ್ತು ಸೂರಜ್‌ ವಿಷ್ಯುವಲ್ಸ್‌ ಪ್ರೊಡಕ್ಷನ್‌ನಲ್ಲಿ ತಯಾರಾಗಿದೆ. ವಿದ್ಯಾದರ್‌ ಅವರ ಸಂಕಲನವಿರುವ “ಮಡಿ’ ಸಿನಿಮಾ ಇಂಗ್ಲೀಷ್‌ ಸಬ್‌ಟೈಟಲ್‌ನಲ್ಲೂ ಮೂಡಿ ಬಂದಿದೆ.

ಅದೇನೆ ಇರಲಿ, ಆನ್‌ಲೈನ್‌ ಪ್ರೀಮಿಯರ್‌ ಎಂಬ ಹೊಸ ಬಗೆಯ ವಿಷಯದೊಂದಿಗೆ ಚಿತ್ರವನ್ನು ತೋರಿಸಿ, ಆ ಕುರಿತು ಮಾತನಾಡಲು ಹಲವು ಸೆಲಿಬ್ರಿಟಿಗಳನ್ನು ಕಲೆಹಾಕಿ, ಸಂವಾದ ನಡೆಸಿದ್ದು ವಿಶೇಷತೆಗಳಲ್ಲೊಂದು. ಈ ಪ್ರೀಮಿಯರ್‌ ಸಂವಾದದಲ್ಲಿ ಶ್ರೀನಿವಾಸ ಪ್ರಭು, ಎಂ.ಡಿ.ಪಲ್ಲವಿ, ವಿನೋದ್‌ ತ್ರಿವೇದಿ, ಹಿಮಾಂಗಿನಿ,ಡಾ.ಡಿ.ವಿ.ಗುರುಪ್ರಸಾದ್‌, ನಂದಿನಿ ಮೆಹ್ತಾ, ಸುರೇಶ್‌, ಸಾ.ನಾ.ರವಿಕುಮಾರ್‌,ನೀಲಂ ಗುಪ್ತ ಲೂನ್ಕರ್‌, ಜಾನ್‌ ವರ್ಗೀಸ್‌ ಚೆರಿಯನ್‌, ಪ್ರಕಾಶ್‌ ಶೆಟ್ಟಿ, ಸೂರಜನ್‌ ಸೇರಿದಂತೆ ಹಲವರು ಸೆಲಿಬ್ರಿಟಿಗಳು ಇತ್ತೀಚೆಗೆ “ಮಡಿ’ ಚಿತ್ರದ ಪ್ರೀಮಿಯರ್‌ ಜೊತೆ ಮಾತುಕತೆಯಲ್ಲೂ ತೊಡಗಿದ್ದು ವಿಶೇಷ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಭಾನುವಾರದ ಲಾಕ್ ಡೌನ್: ಈಗಾಗಲೇ ನಿಗದಿಯಾಗಿರುವ ವಿವಾಹ ಕಾರ್ಯಕ್ರಮಕ್ಕೆ ಇದೆಯೇ ಅನುಮತಿ?

ಭಾನುವಾರದ ಲಾಕ್ ಡೌನ್: ಈಗಾಗಲೇ ನಿಗದಿಯಾಗಿರುವ ವಿವಾಹ ಕಾರ್ಯಕ್ರಮಕ್ಕೆ ಇದೆಯೇ ಅನುಮತಿ?

‘ಕುಣಿಯೋಕೆ ಬಾರದವರು ನೆಲಡೊಂಕು ಎಂದರು’ ಸಿದ್ದರಾಮಯ್ಯ ವಿರುದ್ಧ ಗುಡುಗಿದ ರಾಮುಲು

‘ಕುಣಿಯೋಕೆ ಬಾರದವರು ನೆಲಡೊಂಕು ಎಂದರು’ ಸಿದ್ದರಾಮಯ್ಯ ವಿರುದ್ಧ ಗುಡುಗಿದ ರಾಮುಲು

ಉಡುಪಿಯ ಹೋಟೆಲ್ ಮಾಲಕರೊಬ್ಬರಿಗೆ ಸೋಂಕು ದೃಢ: ಹೋಟೆಲ್ ಸೀಲ್ ಡೌನ್

ಉಡುಪಿಯ ಹೋಟೆಲ್ ಮಾಲಕರೊಬ್ಬರಿಗೆ ಸೋಂಕು ದೃಢ: ಹೋಟೆಲ್ ಸೀಲ್ ಡೌನ್

ಕೋವಿಡ್ ಭೀತಿ, ಊರಿನತ್ತ ಮುಖ ಮಾಡಿದ ಜನರು ಹೆದ್ದಾರಿಗಳಲ್ಲಿ ವಾಹನಗಳ ಸಾಲು

ಕೋವಿಡ್ ಭೀತಿ, ಊರಿನತ್ತ ಮುಖ ಮಾಡಿದ ಜನರು ಹೆದ್ದಾರಿಗಳಲ್ಲಿ ವಾಹನಗಳ ಸಾಲು

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಗೆ ಕರೆ ಮಾಡಿ ಅಭಿಪ್ರಾಯ ಕೇಳಿದ ಸಚಿವ ಸುರೇಶ್ ಕುಮಾರ್

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಗೆ ಕರೆ ಮಾಡಿ ಅಭಿಪ್ರಾಯ ಕೇಳಿದ ಸಚಿವ ಸುರೇಶ್ ಕುಮಾರ್

ಎಂಟು ಪೊಲೀಸರನ್ನು ಹತ್ಯೆಗೈದಿದ್ದ ನಟೋರಿಯಸ್ ರೌಡಿ ವಿಕಾಸ್ ದುಬೆ ಮನೆ ನೆಲಸಮ

ಎಂಟು ಪೊಲೀಸರನ್ನು ಹತ್ಯೆಗೈದಿದ್ದ ನಟೋರಿಯಸ್ ರೌಡಿ ವಿಕಾಸ್ ದುಬೆ ಮನೆ ನೆಲಸಮ

ಕುಲ್ಗಾಮ್ ಎನ್ ಕೌಂಟರ್ ನಲ್ಲಿ ಓರ್ವ ಉಗ್ರನ ಹತ್ಯೆಗೈದ ಭದ್ರತಾ ಪಡೆಗಳು

ಕುಲ್ಗಾಮ್ ಎನ್ ಕೌಂಟರ್ ನಲ್ಲಿ ಓರ್ವ ಉಗ್ರನ ಹತ್ಯೆಗೈದ ಭದ್ರತಾ ಪಡೆಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಲ್ ಬಾಟಮ್ ಲೋಕೇಶ್ ಆತ್ಮಹತ್ಯೆ: ಕೋವಿಡ್ ಹೊಡೆತಕ್ಕೆ ಕರಗಿದ ಕಲಾ ನಿರ್ದೇಶಕನ ಬಾಳು!

ಬೆಲ್ ಬಾಟಮ್ ಲೋಕೇಶ್ ಆತ್ಮಹತ್ಯೆ: ಕೋವಿಡ್ ಹೊಡೆತಕ್ಕೆ ಕರಗಿದ ಕಲಾ ನಿರ್ದೇಶಕನ ಬಾಳು!

hiva arogya

ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ ಎಂದು ಶಿವಣ್ಣ ಹೇಳಿದ್ಯಾಕೆ?

passed away

“ಗ್ರಾಮಾಯಣ’ ಚಿತ್ರದ ನಿರ್ಮಾಪಕ ಎನ್.ಎಲ್‌.ಎನ್‌. ಮೂರ್ತಿ ಇನ್ನಿಲ್ಲ

rachita-post

ಆಟೋ ಚಾಲಕನ ಬಗ್ಗೆ ರಚಿತಾ ಹೇಳಿದ್ದೇನು?

osa odeya

ಸಿಂಧೂರ ಲಕ್ಷ್ಮಣ ಆಗ್ತಾರಾ ದರ್ಶನ್?

MUST WATCH

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya

udayavani youtube

LIC ಅಧಿಕಾರಿಯ ‘Part Time’ ಕೃಷಿ ‘ಪಾಲಿಸಿ’! | LIC Officer Excels in Agriculture


ಹೊಸ ಸೇರ್ಪಡೆ

ಭಾನುವಾರದ ಲಾಕ್ ಡೌನ್: ಈಗಾಗಲೇ ನಿಗದಿಯಾಗಿರುವ ವಿವಾಹ ಕಾರ್ಯಕ್ರಮಕ್ಕೆ ಇದೆಯೇ ಅನುಮತಿ?

ಭಾನುವಾರದ ಲಾಕ್ ಡೌನ್: ಈಗಾಗಲೇ ನಿಗದಿಯಾಗಿರುವ ವಿವಾಹ ಕಾರ್ಯಕ್ರಮಕ್ಕೆ ಇದೆಯೇ ಅನುಮತಿ?

04-July-25

ಕೋವಿಡ್ ನಿಯಂತ್ರಣಕ್ಕಾಗಿ ವ್ಯಾಪಾರಕ್ಕೆ ಸ್ವಯಂ ನಿರ್ಬಂಧ

ಲಡಾಕ್ ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಚೀನಾಕ್ಕೆ ಪರೋಕ್ಷವಾಗಿ ನೀಡಿದ ಎಚ್ಚರಿಕೆಯೇ?

ಲಡಾಕ್ ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಚೀನಾಕ್ಕೆ ಪರೋಕ್ಷವಾಗಿ ನೀಡಿದ ಎಚ್ಚರಿಕೆಯೇ?

04-July-24

ಮೆಕ್ಕೆಜೋಳಕ್ಕೆ ಸೈನಿಕಹುಳು ಬಾಧೆ: ಅಧಿಕಾರಿಗಳ ತಂಡ ಭೇಟಿ

ಕಂಟೈನ್‌ಮೆಂಟ್‌ ವಲಯ ಹೆಚ್ಚಿಸಿದ ಪಿಎಂಸಿ

ಕಂಟೈನ್‌ಮೆಂಟ್‌ ವಲಯ ಹೆಚ್ಚಿಸಿದ ಪಿಎಂಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.