ಈ ಸರ್ಕಾರದವರು ಯಾವಾಗ್ಲೂ ರೈತರ ಹೆಸರು ಹೇಳ್ತಾರೆ, ಆದರೆ ರೈತರ ಪರ ಇಲ್ಲ: ಖರ್ಗೆ
Team Udayavani, Aug 27, 2019, 1:31 PM IST
ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಪ್ರವಾಹ ಪೀಡಿತರಾಗಿ ಸಾಕಷ್ಟು ಜನ ತೊಂದರೆಗೀಡಾಗಿದ್ದಾರೆ. ತೊಂದರೆ ಕೇಳುವ ನೋಡುವ ಯಾರೂ ಇಲ್ಲ. ಈ ಸರ್ಕಾರದವರು ಯಾವಾಗ್ಲೂ ರೈತರ ಹೆಸರು ಹೇಳ್ತಾರೆ, ಆದರೆ ರೈತರ ಪರ ಇಲ್ಲ ಎಂದು ಮಾಜಿ ಸಂಸದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಒಂದು ಕಡೆ ಪ್ರವಾಹದಿಂದ ಜನರಿಗೆ ತೊಂದರೆಯಾಗಿದೆ. ಇನ್ನೊಂದು ಕಡೆ ಬರವೂ ಕೂಡ ಇದೆ. ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಎಲ್ಲಿ ಮಳೆ ಬೀಳಬೇಕೋ ಅಲ್ಲಿ ಮಳೆ ಇಲ್ಲ. ಸರ್ಕಾರದವರು ತ್ವರಿತವಾದ ಕೆಲಸ ಮಾಡೋದು ಬಿಟ್ಟು ಕಚ್ಚಾಡಿಕೊಂಡು ಕೂತಿದ್ದಾರೆ. ನಾನು ಮೇಲೆ, ನೀನು ಮೇಲೆ ಅಂತಿದ್ದಾರೆ. ಎರಡು ತಿಂಗಳಿಂದ ರಾಜ್ಯದ ಜನರಿಗೆ ತೊಂದರೆ ಆಗ್ತಿದೆ ಎಂದರು.
ಅವರು ಯಾರು ಸಮಾಧಾನ ಪಡ್ತಾರೋ ಅಸಮಾಧಾನ ಪಡ್ತಾರೋ, ಅದು ಬಿಜೆಪಿಯ ಆಂತರಿಕ ವಿಚಾರ. ಒಂದು ತಿಂಗಳಾದ್ರೂ ಸಿಎಂ ಒಬ್ಬರೇ ಓಡಾಡ್ತಿದಾರೆ. ಮಂತ್ರಿ ಮಂಡಲ ರಚನೆ ಮಾಡೋದಕ್ಕೆ 25 ದಿನ ತೆಗೆದುಕೊಂಡರು ಅದಾದ ಮೇಲೆ ಖಾತೆ ಹಂಚಿಕೆಗೆ ನಾಲ್ಕೈದು ದಿನ ಆಯ್ತು.
ಒಗ್ಗಟ್ಟಾಗಿ ನಿರ್ಣಯ ತೆಗೆದುಕೊಳ್ಳಲು ಯಡಿಯೂರಪ್ಪಗೆ ಸಾಧ್ಯ ಆಗ್ತಾ ಇಲ್ಲ ಎಂದು ಬಿಜೆಪಿ ಸರ್ಕಾರ ಮತ್ತು ಯಡಿಯೂರಪ್ಪ ವಿರುದ್ಧ ಹರಿಹಾಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
1 ರಿಂದ 5 ನೇ ತರಗತಿಗಳ ಆರಂಭ ಸದ್ಯಕ್ಕಿಲ್ಲ: ಸುರೇಶ್ ಕುಮಾರ್
ಸರ್ಕಾರ ವಚನ ಭ್ರಷ್ಟವಾಗಬಾರದು; ಸಾರಿಗೆ ನೌಕರರ ಮನವಿಗೆ ಸ್ಪಂದಿಸಬೇಕು:ಕೋಡಿಹಳ್ಳಿ ಚಂದ್ರಶೇಖರ್
ರಾಹುಲ್ ಗಾಂಧಿಗೆ ಚಿಕಿತ್ಸೆಯ ಅಗತ್ಯವಿದೆ: ಶೋಭಾ ಕರಂದ್ಲಾಜೆ
ಶಿವಮೊಗ್ಗ: ಜಿ.ಪಂ ಚುನಾವಣೆ ಒಳಗೆ ‘ಒಂದು ದೃಢ ನಿರ್ಧಾರ’ ಮಾಡುತ್ತೇನೆ: ಮಧು ಬಂಗಾರಪ್ಪ
ಅವಕಾಶ ಸಿಕ್ಕರೆ ಖಂಡಿತ ಬಿಗ್ ಬಾಸ್ ನಲ್ಲಿ ಭಾಗವಹಿಸುತ್ತೇನೆ : ಎಚ್. ವಿಶ್ವನಾಥ್