ಮಾವು ಬೆಳೆ-ಉತ್ತಮ ಇಳುವರಿಗೆ ಕಸರತ್ತು


Team Udayavani, Feb 8, 2022, 1:26 PM IST

15mango

ಆಳಂದ: ಮಾವಿನ ಗಿಡಗಳನ್ನು ಹಾಕಿದ ರೈತರು ಉತ್ತಮ ಮಾವು ಬೆಳೆ ನಿರೀಕ್ಷೆಯಲ್ಲಿದ್ದು, ಅದಕ್ಕಾಗಿ ಕಸರತ್ತು ಆರಂಭಿಸಿದ್ದಾರೆ.

ಹವಾಮಾನ ವೈಪರೀತ್ಯದಿಂದಾಗಿ ಹಾಗೂ ಅಧಿಕ ಮಳೆಯಾಗಿದ್ದರಿಂದ ಪ್ರಸಕ್ತ ವರ್ಷದ ಬೇಸಿಗೆ ಹಂಗಾಮಿನಲ್ಲಿ ತೋಟಗಾರಿಕೆ ತಜ್ಞರ ಅಂದಾಜಿನಂತೆ ಶೇ. 30ರಷ್ಟು ಮಾವು ಬೆಳೆ ಕುಂಠಿತಗೊಳ್ಳಲಿದೆ. ಈಗಾಗಲೇ ಹೊಲ, ತೋಟಗಳಲ್ಲಿ ಮಾವಿನ ಮರಕ್ಕೆ ಹೂ ಮೆತ್ತಿಕೊಂಡಿವೆ. ಕಡಲೆಯಷ್ಟು ಕಾಯಿಕಟ್ಟುತ್ತಿವೆ. ಇನ್ನೂ ಕೆಲವು ಕಡೆಗಳಲ್ಲಿ ಹೂ ಬಿಡಲಾರಂಭಿಸಿವೆ.

ಅಧಿಕ ಮಳೆಯಾಗಿದ್ದರಿಂದ ಕೀಟ ಬಾಧೆ

ಮಾವಿನ ಗಿಡಗಳಿಗೆ ಉತ್ತಮ ಹೂ ಬಿಟ್ಟಿದ್ದರೂ ಜಿಗಿ ಹುಳು, ಬೂದು ರೋಗ, ಹೂತೆನೆ ಕೊರಕ, ಥ್ರಿàವ್ಸ್‌ನುಸಿ, ಒಟ್ಟು ತಿಗಣೆಯಂತ ಕೀಟಗಳು ಕಾಣಿಸಿಕೊಂಡಿವೆ. ಈಗಾಗಲೇ ಕಾಯಿ ಕಾಣಿಸಿಕೊಂಡಲ್ಲಿ ಉದುರುವಿಗೆ ಹಾಗೂ ಅಂಗಮಾರಿ ರೋಗದ ಬಾಧೆ ಹರಡಿ ಕೆಲವು ನಿರ್ಲಕ್ಷಿತ ಗಿಡಗಳಲ್ಲಿ ಕಾಂಡ ಕೊರೆಯುವ ಹುಳು, ಸೊರಗು ರೋಗ ಕಾಣಿಸಿಕೊಳ್ಳುತ್ತಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸತೊಡಗಿದೆ. ಕೆಲವು ಕಡೆ ಕಡಲೆ ಗಾತ್ರದ ಕಾಯಿಗಳು ಉದುರುತ್ತಿವೆ. ಈ ಎಲ್ಲ ಸಮಸ್ಯೆಗಳಿಗೆ ಅಧಿಕಾರಿಗಳು ಮತ್ತು ತೋಟಗಾರಿಕೆ ತಜ್ಞರು ಮಾವು ಬೆಳೆಗಾರರಿಗೆ ಸಲಹೆ-ಸೂಚನೆ ನೀಡಲು ಮುಂದಾಗಬೇಕಾಗಿದೆ.

100 ಹೆಕ್ಟೇರ್‌ ಮಾವು

ಮಾದನಹಿಪ್ಪರಗಾ ವಲಯ, ನಿರಗುಡಿ, ಖಜೂರಿ, ಬೇಟಜೇವರ್ಗಿ, ಚಲಗೇರಾ, ಹಳ್ಳಿಸಲಗರ, ಮದಗುಣಕಿ, ಕೊಡಲಹಂಗರಗಾ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ 90ರಿಂದ 100 ಹೆಕ್ಟೇರ್‌ ಮಾವಿನ ಬೆಳೆಯಿದೆ. ಪ್ರಮುಖವಾಗಿ ಕೇಸರ ತಳಿ, ಮಲಿಕ್‌, ಬೇನಶಾನ್‌, ದಸಹಾರಿ ಬೆಳೆಯಲಾಗುತ್ತಿದೆ. ಮಳೆ ಪ್ರಮಾಣ ಹೆಚ್ಚಿದ್ದರಿಂದ ಬಹುತೇಕ ಕಡೆ ಈ ಬಾರಿ ಶೇ. 30ರಷ್ಟು ಕಡಿಮೆ ಪ್ರಮಾಣದ ಇಳುವರಿ ಬರಬಹುದು ಎಂದು ಕೆವಿಕೆ ಮತ್ತು ತೋಟಗಾರಿಕೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ಜಿಗಿ ಹುಳಕ್ಕೆ ರೋಗಾರ ಅಥವಾ ಇಮಿಡಾ ಕೀಟನಾಶ ಸಿಂಪಡಣೆ ಮಾಡಬೇಕು. ಬೂದಿ ರೋಗ ನಿವಾರಣೆಗೆ ನೀರಿನಲ್ಲಿ ಕರಗುವ ಗಂಧಕ ಮತ್ತು ಮ್ಯಾಂಕೋಜೆಮ್‌ ಶಿಲಿಂಧ್ರನಾಶಕಗಳನ್ನು ಪ್ರತಿ 15 ದಿನಕ್ಕೆ ಸಿಂಪಡಣೆ ಮಾಡಬೇಕು. ಇದರ ಜೊತೆಗೆ ಮ್ಯಾಂಗೋಸ್ಪೇಷಲ್‌ ಎನ್ನುವ ಲಘು ಪೋಷಕಾಂಶಗಳನ್ನು ಪ್ರತಿಲೀಟರ್‌ ನೀರಿಗೆ ನಾಲ್ಕು ಗ್ರಾಂನಂತೆ ಎರಡು ವಾರಕ್ಕೊಮ್ಮೆ ಕಾಯಿಕಟ್ಟುವ ವರೆಗೆ ಸಿಂಪಡಣೆ ಮಾಡಬೇಕು. ಕಾಯಿ ಹಣ್ಣಾಗುವ ಹೊತ್ತಿನಲ್ಲಿ ಮಾವಿನ ನೊಣಗಳ ಹತೋಟಿಗೆ ಈಗಿನಿಂದಲೇ ಮೋಹಕ ಬಲೆಗಳನ್ನು ಬಳಕೆ ಮಾಡಿ ಹತೋಟಿಗೆ ತರಬಹುದು. -ಶಂಕರಗೌಡ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ

-ಮಹಾದೇವ ವಡಗಾಂವ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.