ನನ್ನ ಮಗಳು ಪಿಯುಸಿ ಫೇಲ್‌ ಆಗಲು ಕಾಂಗ್ರೆಸ್‌ ಕಾರಣ : ಉಮೇಶ್‌ ಜಾಧವ್‌

Team Udayavani, May 8, 2019, 12:19 PM IST

ಚಿಂಚೋಳಿ :ಕಾಂಗ್ರೆಸ್‌ ನಾಯಕರು ನಾನು ಹಣ ಪಡೆದಿದ್ದೇನೆ ಎಂದು ಆರೋಪ ಮಾಡಿದ್ದರಿಂದ ನನ್ನ ಮಗಳು ಮಾನಸಿಕವಾಗಿ ಕುಗ್ಗಿ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದಾಳೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್‌ ಜಾಧವ್‌ ಹೇಳಿದ್ದಾರೆ.

ಚಂದಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಾಧವ್‌ ,’ಕಾಂಗ್ರೆಸ್‌ ನಾಯಕರ ಸುಳ್ಳು ಆರೋಪಗಳಿಂದ ನನ್ನ ಕುಟುಂಬ ನೊಂದಿದೆ. ಮಗಳಿಗೆ ಕಾಲೇಜಿನಲ್ಲಿ ಅವಮಾನ ಆದ ಕಾರಣ ಆಕೆ ನೊಂದುಕೊಂಡು ಪಿಯುಸಿ ಪರೀಕ್ಷೆ ಫೇಲ್‌ ಆಗಿದ್ದಾಳೆ’ ಎಂದರು.

ನಾನು ಮಾರಾಟವಾಗಿಲ್ಲ, 78 ಕ್ಷೇತ್ರಗಳಲ್ಲಿ ಗೆದ್ದ ಕಾಂಗ್ರೆಸ್‌ ಕಡಿ ಸೀಟು ಗೆದ್ದ ಜೆಡಿಎಸ್‌ಗೆ ಮಾರಾಟವಾಗಿದೆ ಎಂದು ತಿರುಗೇಟು ನೀಡಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ