
ವೈದ್ಯಕೀಯ ಕಾಲೇಜು ಜಟಾಪಟಿ
ಡಿಕೆಶಿ v/s ಡಾ.ಸುಧಾಕರ್
Team Udayavani, Oct 30, 2019, 3:07 AM IST

ಬೆಂಗಳೂರು: ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅನರ್ಹ ಶಾಸಕ ಡಾ.ಕೆ.ಸುಧಾಕರ್ ನಡುವೆ ಈ ವಿಚಾರದಲ್ಲಿ ಜಟಾಪಟಿ ಪ್ರಾರಂಭಗೊಂಡಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿದೆ.
“ನನ್ನ ಪ್ರಾಣ ಹೋದರೂ ಕನಕಪುರಕ್ಕೆ ಮಂಜೂರಾಗಿ ರುವ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಬೇರೆಗೆ ಹೋಗಲು ಬಿಡುವುದಿಲ್ಲ’ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಮಧ್ಯೆ “ವೈದ್ಯಕೀಯ ಕಾಲೇಜು-ಆಸ್ಪತ್ರೆ ಮಂಜೂ ರಾಗುವುದು ಪ್ರಾಣ ಉಳಿಸಲು. ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜು ಸಿಗದಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳು ತ್ತೇನೆ ಎಂದು ಡಾ. ಕೆ.ಸುಧಾಕರ್ ಹೇಳಿದರು.
ಜತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತೀರ್ಮಾನ ಬದಲಿಸದಂತೆ ಮನವಿ ಮಾಡಿ ದ್ದಾರೆ. ಡಿ.ಕೆ.ಶಿವಕುಮಾರ್ ಅವರು ಕನಕಪುರವನ್ನೇ ಇಡೀ ದೇಶ ಎಂದುಕೊಂಡಿದ್ದಾರೆ ಎಂದು ಸುಧಾಕರ್ ಟಾಂಗ್ ನೀಡಿದ್ದಾರೆ. ಇದೇ ವಿಚಾರವಾಗಿ ಎರಡೂ ಕಡೆ ಮುಂದಿನ ದಿನಗಳಲ್ಲಿ ಹೋರಾಟ ಪ್ರಾರಂಭವಾಗುವ ಲಕ್ಷಣಗಳು ಕಂಡುಬರುತ್ತಿವೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್, ನನ್ನ ಕ್ಷೇತ್ರಕ್ಕೆ ಮಂಜೂರಾಗಿರುವ ಆಸ್ಪತ್ರೆ ಬೇರೆಡೆ ಕೊಡುವ ರಾಜಕೀಯ ನಾನು ಬಲ್ಲೆ, ಆದರೆ, ನಾನು ಅಷ್ಟು ಸುಲಭವಾಗಿ ಬಿಡುವವನಲ್ಲ. ವಿಧಾನಸೌಧದಲ್ಲೇ ಪ್ರಾಣ ಹೋದರೂ ಬಿಡುವುದಿಲ್ಲ ಎಂದು ತಿಳಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ಕುರಿತು ಪತ್ರ ಸಹ ಬರೆಯುತ್ತೇನೆ. ಅಷ್ಟಕ್ಕೆ ಸುಮ್ಮನಾಗದೆ ನನ್ನ ಕ್ಷೇತ್ರಕ್ಕೆ ವೈದ್ಯಕೀಯ ಆಸ್ಪತ್ರೆ ಉಳಿಸಿಕೊಳ್ಳಲು ಏನೆಲ್ಲಾ ಮಾಡಬೇಕೋ ಅದನ್ನು ಮಾಡಿಯೇ ತೀರುತ್ತೇನೆ ಎಂದು ಹೇಳಿದರು.
ಯಡಿಯೂರಪ್ಪ ಅವರು ಪ್ರತಿಪಕ್ಷ ನಾಯಕರಾಗಿದ್ದಾಗ ಸಚಿವನಾಗಿದ್ದ ನನ್ನ ಮನೆಗೆ ಬಂದಾಗ ನಾನು ರಾಜಕೀಯ ಮಾಡಲು ಹೋಗಿರಲಿಲ್ಲ. ಸಾವಿರಾರು ಕೋಟಿ ರೂ. ವೆಚ್ಚದ ಯೋಜನೆ ಮಂಜೂರು ಮಾಡಿದೆ. ಆದರೆ, ಈಗ ರಾಜಕೀಯ ಹಗೆತನ ಮಾಡಲಾಗಿದೆ. ನಾನು ಆ ಬಗ್ಗೆ ಮಾತನಾಡಲ್ಲ, ಆದರೆ, ನನ್ನ ಕ್ಷೇತ್ರದ ಹಿತ ಕಾಯಲು ಬದ್ಧನಿದ್ದೇನೆ ಎಂದು ತಿಳಿಸಿದರು.
ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಅನರ್ಹತೆಗೊಂಡಿರುವ ಶಾಸಕ ಸುಧಾಕರ್ ಸ್ಥಳಾಂತರ ಮಾಡಿಸಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಯಾರು ಸುಧಾಕರ್? ಅವರ ಕ್ಷೇತ್ರಕ್ಕೆ ಬೇಕಾಗಿದ್ದು ಮನವಿ ಮಾಡಿ ಪಡೆದುಕೊಳ್ಳಲಿ. ಅದು ಅವರ ಹಕ್ಕು, ಆದರೆ, ನನ್ನ ಕ್ಷೇತ್ರಕ್ಕೆ ಕೊಟ್ಟಿದ್ದು ಪಡೆಯಲು ನಾನು ಬಿಡುವುದಿಲ್ಲ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾಗಿದ್ದಾಗ ಕಬ್ಬಾಳಮ್ಮ ದೇವಾಲಯಕ್ಕೆ ಬಂದು ವೈದ್ಯಕೀಯ ಕಾಲೇಜು ಮಂಜೂರು ಮಾಡುವ ಮಾತು ಕೊಟ್ಟಿದ್ದರು, ಕಾರಣಾಂತರಗಳಿಂದ ಮಂಜೂರು ಮಾಡಲು ಆಗಿರಲಿಲ್ಲ, ಸಮ್ಮಿಶ್ರ ಸರ್ಕಾರ ದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಂಜೂರು ಮಾಡಲಾಯಿತು. ಇದನ್ನು ಬಿಡಲು ಆಗುತ್ತಾ? ಜನರ ಜತೆ ಮಾತನಾಡಿ, ಸಿಎಲ್‌ಪಿ ನಾಯಕರು ಸೇರಿ ಪಕ್ಷದ ನಾಯಕರಿಗೆ ಮಾಹಿತಿ ನೀಡಿ ವೈಯಕ್ತಿಕವಾಗಿಯೇ ಹೋರಾಟ ಮಾಡುತ್ತೇನೆ ಎಂದು ಹೇಳಿದರು.
ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಲು ಡಿ.ಕೆ.ಶಿವಕುಮಾರ್ ಯಾರು? ಅವರದು ಹೊಡಿ, ಬಡಿ, ಕಡಿ ಸಂಸ್ಕೃತಿ. ಅವರ ಮಾತು ಅವರ ಸಂಸ್ಕೃತಿ ತಿಳಿಸುತ್ತದೆ. ನನಗೆ ಉತ್ತಮ ಸಂಸ್ಕಾರ, ಸಾಮಾಜಿಕ ಕಾಳಜಿಯಿದೆ. ನಾನು ನನ್ನ ಕ್ಷೇತ್ರದ ವೈದ್ಯಕೀಯ ಕಾಲೇಜು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ.
-ಡಾ.ಕೆ.ಸುಧಾಕರ್, ಅನರ್ಹ ಶಾಸಕ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾಲಬಾದೆಗೆ ಹೆದರಿ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನ: ಮಹಿಳೆ ಸಾವು, ಆರು ಮಂದಿ ಗಂಭೀರ

ಫೆ. 17ರಂದು ಸಿಎಂ ಬೊಮ್ಮಾಯಿ ಬಚಾವೋ ಬಜೆಟ್: ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಮದುವೆ ಬಳಿಕ ಆಸ್ತಿ ಹಂಚಿಕೆ ಅಂದಿದ್ದಕ್ಕೆ ಒಡಹುಟ್ಟಿದ ಅಣ್ಣನನ್ನೇ ಹತ್ಯೆಗೈದ ತಮ್ಮ

ಹಳ್ಳಕ್ಕೆ ಬಿದ್ದು ಒಂದೇ ಕುಟುಂಬದ ಇಬ್ಬರು ಬಾಲಕರು ಮೃತ್ಯು… ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ

50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ ಒಂದೇ ವಾರದಲ್ಲಿ ಕಿತ್ತೋಯ್ತು; ಗ್ರಾಮಸ್ಥರ ಆಕ್ರೋಶ
MUST WATCH

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
