ಕುತೂಹಲ ಮೂಡಿಸಿದ ಡಿಕೆಶಿ-ಸಿಎಂ ಭೇಟಿ

Team Udayavani, Apr 26, 2019, 6:19 AM IST

ಬೆಂಗಳೂರು: ಕಾಂಗ್ರೆಸ್‌ ಶಾಸಕ ರಮೇಶ್‌ ಜಾರಕಿಹೊಳಿ ಬಂಡಾಯ ಬೆನ್ನಲ್ಲೇ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿ ಎಚ್‌.ಡಿ.
ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಚರ್ಚಿಸಿದ್ದು ಕುತೂಹಲ ಮೂಡಿಸಿದೆ.

ಗುರುವಾರ ಬೆಳಗ್ಗೆ ಜೆಪಿ ನಗರ ನಿವಾಸಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಜತೆ ಆಗಮಿಸಿದ ಡಿ.ಕೆ.ಶಿವಕುಮಾರ್‌ ಸುಮಾರು ಎರಡು ಗಂಟೆ ಕಾಲ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ರಮೇಶ್‌ ಜಾರಕಿಹೊಳಿ ಅವರ ಜತೆ ಗುರುತಿಸಿಕೊಂಡಿದ್ದಾರೆ ಎನ್ನಲಾದ ಶಾಸಕ ಮಹೇಶ್‌ ಕುಮಟಳ್ಳಿ ಉಪಸ್ಥಿತರಿದ್ದದ್ದು ವಿಶೇಷ. ಚರ್ಚೆ ಸಂದರ್ಭದಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನ, ಲೋಕಸಭೆ ಚುನಾವಣೆ ಫ‌ಲಿತಾಂಶ ಕುರಿತು ಪ್ರಸ್ತಾಪವಾಯಿತು. 28 ಕ್ಷೇತ್ರಗಳಲ್ಲಿ ಮತದಾನ ನಂತರದ
ಮಾಹಿತಿ ಬಗ್ಗೆ ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ.

ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್‌, “ನನಗೆ ಸರಿ ಸಮನಾದ ವ್ಯಕ್ತಿ ಡಿ.ಕೆ.ಶಿವಕುಮಾರ್‌ ಅಲ್ಲ ಎಂದು ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ. ಹೌದು, ನಾನು ಅವರಿಗೆ ಸಮನಾದ ನಾಯಕನಲ್ಲ. ಅವರು ನನಗೆ ಎರಡು ಏಟು ಹೊಡೆದು ಬಿಡಲಿ ನನಗೇನೂ ಬೇಜಾರಿಲ್ಲ.ನಾವೆಲ್ಲರೂ ಒಂದೇ ಕುಟುಂಬದವರು. ಕುಟುಂಬದಲ್ಲಿ ಅಣ್ಣ- ತಮ್ಮಂದಿರು ತಪ್ಪು ಮಾಡೋದು ಸಹಜ, ರಮೇಶ್‌ ಜಾರಕಿಹೊಳಿ ಜತೆ 80 ಶಾಸಕರು ಇದ್ದೇವೆ’ ಎಂದು ಹೇಳಿದರು.

ಸರ್ಕಾರ ಬೀಳುತ್ತೆ ಎಂದು ಯಾವ ಶಾಸಕರು ಹೇಳಿಲ್ಲ. ರಮೇಶ್‌ ಜಾರಕಿಹೊಳಿ-ಸತೀಶ್‌ ಜಾರಕಿಹೊಳಿ ಅವರು ಅಣ್ಣ ತಮ್ಮಂದಿರು. ಸತೀಶ್‌ ಜಾರಕಿಹೊಳಿ ಅವರನ್ನು ಮುಖ್ಯ ಮಂತ್ರಿ ಮಾಡಬೇಕೆಂದು ಹೇಳಿದ್ದವರು ರಮೇಶ್‌, ಅವರು ಪಕ್ಷ ಬಿಟ್ಟು ಹೋಗ್ತಾರಾ ಎಂದು ಪ್ರಶ್ನಿಸಿದರು.

ಡಾ.ಜಿ.ಪರಮೇಶ್ವರ್‌ ಮಾತನಾಡಿ, ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ತೊಂದರೆ ಇಲ್ಲ. ಆತಂಕವೂ ಇಲ್ಲ. ಬಿಜೆಪಿಯವರು ಸುಮ್ಮನೆ ಮಾತನಾಡಿದ್ದಾರೆ ಅಷ್ಟೇ. ಮೇ 23 ರ ನಂತರವೂ ಏನೂ ಆಗುವುದಿಲ್ಲ ಎಂದು ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಸಂತೆಮರಹಳ್ಳಿ: ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿರುವ ಪಡಸಾಲೆಯಲ್ಲಿ ಆಧಾರ್‌ ನೋಂದಣಿಯನ್ನು ಪುನಾರಂಭ ಮಾಡಲಾಗಿದೆ. ಈ ಬಗ್ಗೆ ಉದಯವಾಣಿ ಮೇ. 15 ರಂದು ಆಧಾರ್‌...

  • ಚಾಮರಾಜನಗರ: ಬಸವಾದಿ ಶರಣರು ಸ್ಥಾಪನೆ ಮಾಡಿರುವ ವೀರಶೈವ ಲಿಂಗಾಯತ ಧರ್ಮ ಸಂವಿಧಾನ ಕಲಂನಲ್ಲಿ ಪ್ರತ್ಯೇಕ ಧರ್ಮವಾಗುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸಮಾಜದ ಬಂಧುಗಳು...

  • ಹುಮನಾಬಾದ: ಕ್ಯಾಂಪಸ್‌ ಸಂದರ್ಶನ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದು ತೆಲಂಗಾಣ ಜಹೀರಾಬಾದನ ಮಹೀಂದ್ರಾ ಆ್ಯಂಡ್‌ ಮಹಿಂದ್ರಾ ಆಟೋಮೊಬೈಲ್...

  • ಬೀದರ: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿನ ಹವಾನಿಯಂತ್ರಿತ (ಎಸಿ)ವ್ಯವಸ್ಥೆ ಎರಡು ದಿನಗಳಿಂದ ಕೈ ಕೊಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆ...

  • ದೇವನಹಳ್ಳಿ: ಇಲ್ಲಿನ ಪುರಸಭೆ ಚುನಾವಣೆ 29ರಂದು 23 ವಾರ್ಡ್‌ಗಳಿಗೆ ವಿವಿಧ ಪಕ್ಷಗಳಿಂದ 78 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಸೋಮವಾರ ಕಡೆ ದಿನವಾಗಿದ್ದರಿಂದ...

  • ನೆಲಮಂಗಲ: ಕಾರು ಶೋಕಿಗಾಗಿ ಚಾಲಕನ ಹತ್ಯೆಗೈದು ಪರಾರಿಯಾಗಿದ್ದ ಆರೋಪಿಗಳ ಬಂಧನದ ವೇಳೆ ಪೊಲೀಸರ ಬಂದೂಕುಗಳು ಸದ್ದು ಮಾಡಿರುವ ಘಟನೆ ಮಂಗಳವಾರ ಬೆಳ್ಳಂಬೆಳ್ಳಗ್ಗೆ...